ಕ್ರಿಕೆಟ್ ಜಗತ್ತೆ ಹಾಗೆ ಒಮ್ಮೆ ಅದರಲ್ಲಿ ಮುಳುಗಿದರೆ ಫೇಮಸ್ ಆಗುತ್ತಲೇ ಹೋಗುತ್ತಾರೆ. ಬಡತನದಲ್ಲಿ ಹುಟ್ಟಿ ಫೇಮಸ್ ಕ್ರಿಕೆಟ್ ಆಟಗಾರರಾಗಿ ತಮ್ಮ ಜೀವನವನ್ನು ಕಟ್ಟಿಕೊಂಡ ಅದೆಷ್ಟೋ ಆಟಗಾರರಿದ್ದಾರೆ. ಕ್ರಿಕೆಟ್ ಜಗತ್ತಿಗೆ ಬಂದವರಲ್ಲಿ ಸಾಕಷ್ಟು ದುಡ್ಡು ಮಾಡುತ್ತಾರೆ ಅದರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ಅವರ ಆಸ್ತಿಯ ಮೌಲ್ಯದ ಬಗೆಗಿನ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಬಿಸಿಸಿಐ ಪಟ್ಟಿಯಲ್ಲಿ ಇರುವ ಆಟಗಾರರಲ್ಲಿ ಒಬ್ಬರಾದ ರೋಹಿತ್ ಶರ್ಮಾ ಭಾರತೀಯ ಆಟಗಾರರಲ್ಲಿ ಪ್ರಮುಖರಾಗಿದ್ದಾರೆ. ಟೀಮ್ ಇಂಡಿಯಾದ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದ ಇವರು ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ಅವರು ಕಣಕ್ಕಿಳಿದರೆಂದರೆ ಎದುರಿಗಿರುವ ಟೀಮ್ ಗೆ ಭಯ ಹುಟ್ಟುತ್ತಿತ್ತು. ಇವರಿಗೆ ಚಿಕ್ಕಂದಿನಿಂದಲೂ ಕ್ರಿಕೆಟ್ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಅಂದೇ ಕ್ರಿಕೆಟ್ ನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಆಸೆ ಇತ್ತು ಅದರಂತೆ ನೆರವೇರಿಸಿದರು.
ಇವರು ಪ್ರತಿವರ್ಷ ಸರಾಸರಿ ಏಳು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಇಷ್ಟೇ ಅಲ್ಲದೆ ಬಿಸಿಸಿಐ ರೋಹಿತ್ ಶರ್ಮಾ ಅವರಿಗೆ ಮ್ಯಾಚ್ ಶುಲ್ಕ ಕೂಡ ಪಾವತಿಸುತ್ತದೆ. ಟೆಸ್ಟ್ ಇದ್ದರೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ, ಟಿ20ಗೆ 3 ಲಕ್ಷ ರೂಪಾಯಿಗಳನ್ನು ಬಿಸಿಸಿಐ ಪಾವತಿಸುತ್ತದೆ. ಇದರ ಜೊತೆಗೆ ರೋಹಿತ್ ಶರ್ಮಾ ಅವರು ಐಪಿಎಲ್ ನಲ್ಲೂ ಸಹ ಉತ್ತಮ ಪ್ರದರ್ಶನ ನೀಡುವ ಆಟಗಾರರಾಗಿದ್ದಾರೆ ಆದ್ದರಿಂದ ಇವರಿಗೆ ಪ್ರತಿವರ್ಷ ಮುಂಬೈ ಇಂಡಿಯನ್ಸ್ ಟೀಮ್ 15 ಕೋಟಿ ರೂಪಾಯಿಗಳನ್ನು ಪಾವತಿಸುತ್ತದೆ. CEAT ಟೈಯರ್ಸ್, ಹಬ್ಲಾಟ್, ಟ್ರುಸಾಕ್ಸ್, ಮತ್ತು ಡ್ರೀಮ್ ಇಂತಹ 11 ಉತ್ತಮ ಬ್ರ್ಯಾಂಡ್ ಗಳ ರಾಯಭಾರಿಯಾಗಿದ್ದಾರೆ. ಇದರಿಂದ ರೋಹಿತ್ ಅವರು 60 ಕೋಟಿ ರೂಪಾಯಿಯಿಂದ 70 ಕೋಟಿ ರೂಪಾಯಿ ಆದಾಯ ಗಳಿಸುತ್ತಾರೆ. ಇನ್ನು ಬ್ರ್ಯಾಂಡ್ ಗಳ ಶೂಟ್ ಗೆ ರೋಹಿತ್ ಶರ್ಮಾ ಅವರು ಒಂದು ಕೋಟಿ ರೂಪಾಯಿಯನ್ನು ಪಡೆಯುತ್ತಾರೆ. ಅಬ್ಬಬ್ಬಾ ಇವರ ಆದಾಯ ನೋಡಿದವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಅವರ ಒಟ್ಟು ಆಸ್ತಿ ಮೌಲ್ಯ 130 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಹಾಗೂ ಇವರ ಆಸ್ತಿಯ ಮೌಲ್ಯ ಪ್ರತಿವರ್ಷ ಏರುತ್ತಲೇ ಇದೆ. ಏರಿಕೆ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ ಕಾದುನೋಡಬೇಕಾಗಿದೆ.