ಭಾರತ ಮತ್ತು ಚೀನಾದ ಸಂಘರ್ಷ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನು ಅಕ್ಟೋಬರ್ ಶುರುವಾಯಿತು. ಲಡಾಖ್ ಭಾಗದಲ್ಲಿ ಮೈ ಕೊರೆಯುವ ಚಳಿ. ಹೀಗಿದ್ರೂ ಕೂಡಾ ಎರಡೂ ದೇಶದ ಸೈನಿಕರು ದೇಶದ ಗಡಿ ಭಾಗದಲ್ಲಿ ನಿಂತು ರಕ್ಷಣೆ ಮಾಡುತ್ತಿದ್ದಾರೆ. ಚೀನಾ ಮಾತ್ರ ತನ್ನ ಸೇನೆಯನ್ನು ಮುಂದುವರಿಸುತ್ತಲೇ ಇದೆ.ಹೀಗಾಗಿ ಫಿರಂಗಿ, ಉಪಕರಣಗಳನ್ನು ಜಾಸ್ತಿ ಮಾಡುತ್ತಿದೆ. ಇಲ್ಲಿ ಇವುಗಳನ್ನು ಎದುರಿಸಲು T90 ಭೀಷ್ಮಟ್ಯಾಂಕ್ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಬಗ್ಗೆ ನಾವು ಇಲ್ಲಿಹೆಚ್ಚಿನ ಮಾಹಿತಿ ತಿಳಿಯೋಣ.
ಈಗ ನಮ್ಮದು1962ರ ಭಾರತವಲ್ಲ. ಆಗ ಸೈನಿಕರಿಗೆ ಅವರ ಅವಶ್ಯಕತೆಗಳು ಲಭಿಸುತ್ತಿರಲಿಲ್ಲ. ಕ್ಯೆಯಲ್ಲಿ ಫಿರಂಗಿಗಳು,ಬಂದೂಕುಗಳು ಕಡಿಮೆ.ಕೊನೆಯದಾಗಿ ಗುಂಡುಗಳೂ ಸಿಗದೇ ಇದ್ದ ಪರಿಸ್ಥಿತಿಯಲ್ಲಿ ಕೂಡ ಚೀನಾದ ವಿರುದ್ಧ ಹೋರಾಟ ಬಿಡಲಿಲ್ಲ. ಆದರೆ ಈಗ ಯಾವುದೇ ಭಯವಿಲ್ಲ.ಏಕೆಂದರೆ ಶತ್ರುಗಳನ್ನು ಎದುರಿಸಲು ಭಾರತ ಈಗ T90 ಭೀಷ್ಮ ಟ್ಯಾಂಕ್ ನಿಲ್ಲಿಸಿದೆ. ಅಮೆರಿಕಾ ಮತ್ತು ಬೇರೆ ದೇಶದವರು T90 ಭೀಷ್ಮನನ್ನು ‘ಗೇಮ್ ಚೇಂಜರ್’ ಎಂದು ವರ್ಣಿಸಿದ್ದಾರೆ. ಮಹಾಭಾರತದ ಭೀಷ್ಮನಿಂದ ಕರೆಯಲ್ಪಡುವ ಈ T90 ಯುದ್ಧ ಟ್ಯಾಂಕರ್ ಮೂಲತಃ ರಷ್ಯಾ ದೇಶದ್ದು. ಈ ಯುದ್ಧ ಟ್ಯಾಂಕನ್ನು ಭಾರತ ಮೋಡಿಫೈ ಮಾಡಿಕೊಂಡು ಭಾರತದಲ್ಲೇ ನಿರ್ಮಾಣ ಮಾಡಿಕೊಳ್ಳುತ್ತಿದೆ.
1992ರಲ್ಲಿ ರಷ್ಯಾ ಸೇನೆಗೆ ಸೇರ್ಪಡೆಯಾದ T90 ಯುದ್ಧ ಟ್ಯಾಂಕರ್ 2001ರಲ್ಲಿ ಭಾರತದ ಸೇನೆಗೆ ಸೇರ್ಪಡೆಯಾಯ್ತು.ಭಾರತದಲ್ಲಿ ಸದ್ಯಕ್ಕೆ 310 ಭೀಷ್ಮ ಯುದ್ಧ ಟ್ಯಾಂಕರ್ ಗಳಿದ್ದು ಇವುಗಳನ್ನೇ ಮುಖ್ಯ ಭಾರತೀಯ ಶಕ್ತಿಯಾಗಿ ಬಳಸಲಾಗುತ್ತಿದೆ. ಭಾರತ ಎಷ್ಟು ಒಳ್ಳೆಯ ಟ್ಯಾಂಕರ್ ಆಯ್ಕೆ ಮಾಡಿಕೊಂಡಿದೆ ಎಂದರೆ ಇವು ಅಬ್ಬರಿಸಲು ಶುರು ಮಾಡಿದರೆ ಇವುಗಳ ಮುಂದೆ ಚೀನಾದ ಲೈಟ್ ವೇಟ್ ಯುದ್ಧ ವಿಮಾನಗಳಾದ D15 ಗಳು ನಿಲ್ಲಲು ಸಾಧ್ಯವಿಲ್ಲ. ಇವು 36ಟನ್ ಗಿಂತಲೂ ಕಡಿಮೆ ತೂಕದ್ದಾಗಿವೆ.ಇವು ಹೆಚ್ಚು ವೇಗವಾಗಿ ಬೀಸುವ ಚಳಿಗಾಳಿಯಲ್ಲಿ ಹೆಚ್ಚು ಕಾರ್ಯ ನಿರ್ವಹಿಸುವುದಿಲ್ಲ.ಇವುಗಳ ಗುರಿಯ ನಿಖರತೆ ಬಗ್ಗೆ ನೋಡಿದಾಗ ಅವುಗಳನ್ನು ವಿಶ್ವದ ಅತ್ಯದ್ಭುತ ಗುರಿ ತಪ್ಪುವ ಟ್ಯಾಂಕರ್ ಗಳೆಂದು ಕರೆಯಲಾಗುತ್ತದೆ. ಇಂತಹ ಟ್ಯಾಂಕರ್ ಗಳನ್ನು ಚೀನಾ ಭಾರತದ ಗಡಿಯಲ್ಲಿ ಏಕೆ ತಂದು ನಿಲ್ಲಿಸಿದೆ ಎನ್ನುವುದು ಪ್ರಶ್ನೆಗೆ ಅರ್ಹವಾಗಿದೆ.
ಆದರೆ ಭೀಷ್ಮ 46 ರಿಂದ 47 ಟನ್ ಇದ್ದು ಯಾವ ಸಂದರ್ಭದಲ್ಲಿ ಕೂಡ ಗುರಿ ತಪ್ಪುವ ಸಾಧ್ಯತೆ ಕಡಿಮೆ.ಇದನ್ನು ಮೈನಸ್ 40° ವಾತಾವರಣದಲ್ಲಿ ಕೂಡ ಬಳಸಬಹುದು. ಅದಕ್ಕಾಗಿ ವಿಶೇಷವಾದ ಇಂಧನವನ್ನು ಬಳಸಲಾಗುತ್ತದೆ. ಮೈ ಕೊರೆಯುವ ಚಳಿಯಲ್ಲಿ ಯುದ್ಧ ನಡೆದರೆ ಭೀಷ್ಮನ ಬಳಕೆಯಾಗಿ ಯುದ್ಧದಲ್ಲಿ ಭಾರತವು ಮೇಲುಗೈ ಸಾಧಿಸುವುದು ಖಂಡಿತ.