ಸಾಮಾನ್ಯವಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹುಡುಗಿಯರು ಹುಡುಗರಿಗಿಂತ ಚಿಕ್ಕವರಾಗಿರಬೇಕು ಎನ್ನುವುದು ತುಂಬಾ ಮುಖ್ಯವಾದ ವಿಚಾರ ಆಗಿದೆ. ಅದರಲ್ಲೂ ಅರೇಂಜ್ ಮ್ಯಾರೇಜ್ ಆದ್ರೆ ಅದಕ್ಕೆ ಹೆಚ್ಚು ಒತ್ತು ಕೊಡಲಾಗುತ್ತದೆ. ಆದರೆ ಕಾಲ ಬದಲಾದಂತೆ ನಗರ ಪ್ರದೇಶಗಳಲ್ಲಿ ಪ್ರೀತಿ ಮಾಡಿ ಮದುವೆ ಆಗುತ್ತಾರೆ. ವಯಸ್ಸಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅಂತಹ ಉದಾಹರಣೆಗಳನ್ನು ನಾವು ಹೆಚ್ಚಾಗಿ ಚಿತ್ರನಟರ ಜೀವನದಲ್ಲಿ ಕಾಣಬಹುದು. ಅಂತಹವರ ಬಗ್ಗೆ ನಾವು ಇಲ್ಲಿ ತಿಳಿಯೋಣ.

ನಟ ಪ್ರಸನ್ನ ಅವರು ತಮ್ಮ ವಿಭಿನ್ನ ನಟನೆಯಲ್ಲಿ ಖ್ಯಾತಿ ಪಡೆದಿದ್ದಾರೆ.ಇವರು ಕನ್ನಡ ಹಾಗೂ ದಕ್ಷಿಣ ಭಾರತದಲ್ಲಿ ಮಿಂಚಿದ ನಟಿ ಸ್ನೇಹಾ ಅವರನ್ನು ಪ್ರೀತಿಸಿ ಮದುವೆಯಾದರು.ಇಲ್ಲಿ ಪ್ರಸನ್ನ ಅವರು ಸ್ನೇಹಾಗಿಂತ 1 ವರ್ಷ ಚಿಕ್ಕವರು.ಬಾಲಿವುಡ್ ನ ಖ್ಯಾತ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ. ಇವರ ಮದುವೆ 2007ರಲ್ಲಿ ಅದ್ದೂರಿಯಾಗಿ ನಡೆಯಿತು. ಅಭಿಷೇಕ್ ಬಚ್ಚನ್ ಐಶ್ವರ್ಯ ರೈಗಿಂತ 2ವರ್ಷ ಚಿಕ್ಕವರು.

ರಘುಮುಖರ್ಜಿ ಕನ್ನಡದ ಖ್ಯಾತ ನಟರಲ್ಲಿ ಇವರೂ ಕೂಡ ಒಬ್ಬರು. ಒಂದು ಮದುವೆಯಾಗಿ ವಿಚ್ಛೇದನ ಪಡೆದಿದ್ದ ಕನ್ನಡದ ಖ್ಯಾತ ನಟಿ ಅನು ಪ್ರಭಾಕರ್ ಅವರನ್ನು ರಘುಮುಖರ್ಜಿ ಅವರು ವಿವಾಹವಾಗಿದ್ದಾರೆ. ಇದು ಇಬ್ಬರಿಗೂ ಎರಡನೇ ಮದುವೆ. ಮುಖರ್ಜಿ ಅವರು ಅನುಗಿಂತ 1 ವರ್ಷ ಚಿಕ್ಕವರು.

ತಮಿಳಿನ ಸ್ಟಾರ್ ನಟರಾದ ಕೃಷ್ಣ ಅವರು ಕನ್ನಡದ ಖ್ಯಾತ ನಟಿ ಛಾಯಾಸಿಂಗ್ ಅವರನ್ನು ಮದುವೆಯಾಗಿದ್ದಾರೆ. ಇವರು ಸಂತೋಷದ ಜೀವನ ನಡೆಸುತ್ತಿದ್ದಾರೆ.ಕೃಷ್ಣ ಅವರು ಛಾಯಾಸಿಂಗ್ ಅವರಿಗಿಂತ 2ವರೆ ವರ್ಷ ಚಿಕ್ಕವರು.

ತಮಿಳಿನ ನಟ ಧನುಷ್ ಸೂಪರ್ ಸ್ಟಾರ್ ರಜನೀಕಾಂತ್ ಅವರ ಮೊದಲ ಮಗಳು ಐಶ್ವರ್ಯಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಧನುಷ್ ಐಶ್ವರ್ಯ ಅವರಿಗಿಂತ ಸುಮಾರು 1ವರೆ ವರ್ಷ ಚಿಕ್ಕವರು.

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್.ಇಬ್ಬರೂ ಚಿತ್ರರಂಗದಲ್ಲಿ ಇದ್ದು ಪ್ರೀತಿಸಿ ಮದುವೆ ಆಗಿದ್ದಾರೆ.ಅನ್ಯೋನ್ಯ ಜೀವನ ನಡೆಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ.ಯಶ್ ಅವರು ರಾಧಿಕಾ ಪಂಡಿತ್ ಗಿಂತ 2ವರ್ಷ ಚಿಕ್ಕವರು.

ನಟ ಮಹೇಶ್ ಬಾಬು ಅವರು ಕನ್ನಡದ ಚೋರ ಚಿತ್ತ ಚೋರ ಸಿನೆಮಾದಲ್ಲಿ ನಟಿಸಿದ ನಮ್ರತಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಸುಮಧುರ ಜೀವನ ನಡೆಸುತ್ತಿದ್ದಾರೆ.ಮಹೇಶ್ ಬಾಬು ಅವರು ನಮ್ರತಾಗಿಂತ 2 ವರ್ಷ ಚಿಕ್ಕವರು ಎನ್ನುವುದು ವಿಶೇಷವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!