ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ, ಉರ್ದು ಭಾಷೆಗಳಲ್ಲಿ ನಟಿಸಿರುವ ನಟಿ ಲೈಲಾ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ‘ತಂದೆಗೆ ತಕ್ಕ ಮಗ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರು ಪಂಚರಂಗಿ ಪಾತ್ರ ಮಾಡಿದ್ದರು. ಹಲವು ವರ್ಷಗಳಿಂದ ಲೈಲಾ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ?
1996ರಲ್ಲಿ ಹಿಂದಿಯ ‘ದುಶ್ಮನ್ ದುನಿಯಾ ಕಾ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಲೈಲಾ 2006ರವರೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ನಂದ, ‘ಪಿತಾಮಗನ್’, ‘ಪರ್ಥೆನ್ ರಸಿತೆನ್’, ‘ಧೀನಾ’, ‘ಧಿಲ್’, ‘ಅಲ್ಲಿ ತಂದ ವಾನಮ್’, ‘ಉನ್ನೈ ನಿನೈತು’, ‘ಉಲ್ಲಮ್ ಕೆತ್ಕುಮೆ’, ‘ಕಂದ ನಾಲ್ ಮುಧಲ್’ ಸಿನಿಮಾಗಳು ಇವರಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತ್ತು. ಮುಂಬೈ ಮೂಲದ ಲೈಲಾ ತಂದೆ ಪೈಲೆಟ್ ಆಗಿದ್ದರು. ಹೀಗಾಗಿ ಅವರು ಮನೆಯಲ್ಲಿ ಇದ್ದದ್ದು ತುಂಬ ಕಡಿಮೆಯಂತೆ. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಎಂದಿಗೂ ಲೈಲಾ ಒಟ್ಟಾಗಿಸಲು ಇಷ್ಟಪಡುವುದಿಲ್ಲವಂತೆ. ಒಂದುವೇಳೆ ಇವೆರಡೂ ಒಂದಾದರೆ ಸಂಬಂಧ ಇನ್ನಷ್ಟು ಜಟಿಲಗೊಳ್ಳುತ್ತದೆ ಎಂದು ಲೈಲಾ ಹೇಳಿದ್ದಾರೆ. ಸಿನಿಮಾ ಜಗತ್ತು ಒಂದು ರೀತಿ ಮಾಯಾ ಲೋಕ ಇದ್ದ ಹಾಗೆ. ಇನ್ನು ಈ ಮಾಯಾಲೋಕದಲ್ಲಿರುವ ನಟ ನಟಿಯರು ಹೇಗೆಲ್ಲಾ ಆಡಂಭರ ಜೀವನ ನಡೆಸುತ್ತಾರೆ ಎಂಬುದನ್ನ ನಾವೆಲ್ಲಾ ನೋಡಿದ್ದೇವೆ. ಆದರೆ ಎಲ್ಲಾ ನಟ ನಟಿಯರು ನಾವಂದುಕೊಂಡಷ್ಟು ಅವರ ಜೀವನ ಸುಲಭವಾಗಿರೋದಿಲ್ಲ. ಅವರ ಜೀವನದಲ್ಲೂ ತುಂಬಾ ಏಳು ಬೀಳುಗಳು ಇದ್ದೆ ಇರುತ್ತವೆ. ಇನ್ನು ನಾವು ನೋಡಿದ ನಾಯಕಿ ನಟಿಯರಲ್ಲಿ ತುಂಬಾ ಇಷ್ಟಪಡುವ ಮುಗ್ದ ನಟಿ ಲೈಲಾ ಕೂಡ ಒಬ್ಬರು. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ತಂದೆಗೆ ತಕ್ಕ ಮಗ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ. ಇದಲ್ಲದೆ ರವಿಚಂದ್ರನ್ ಮತ್ತು ಜಗ್ಗೇಶ್ ನಟನೆಯ ಚಿತ್ರವೊಂದರಲ್ಲೂ ಸಹ ಈ ನಟಿ ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲೂ ಕೂಡ ಮಿಂಚಿರುವ ಈ ನಟಿ ತನ್ನ ಅಭಿನಯದಿಂದಲೇ ಖ್ಯಾತ ನಟಿಯಾಗಿದ್ದಾರೆ.
ನಟಿ ಲೈಲಾರವರ ವೈಯುಕ್ತಿಕ ಜೀವನದ ಬಗ್ಗೆ ಹೇಳುವುದಾದರೆ 6 ಜನವರಿ 2006ರಂದು ಇರಾನ್ ನ ಬ್ಯುಸಿನೆಸ್ ಮೆನ್ ಆಗಿರುವ ಮೆಹದಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಮೆಹದಿಯನ್ನ ಮದುವೆಯಾಗುವುದಕ್ಕೆ ಮುಂಚೆ ಎಂಟು ವರ್ಷಗಳ ಕಾಲ ಅವರ ಜೊತೆ ಡೇಟಿಂಗ್ ಮಾಡುತ್ತಾಳೆ ನಟಿ ಲೈಲಾ. ಬ್ಲೈಂಡ್ ಡೇಟ್ ವೇಳೆ ಮೆಹದಿಯನ್ನು ಲೈಲಾ ಮೀಟ್ ಆಗಿದ್ದರು. ಆಮೇಲೆ ಮೆಹದಿ ಮನೆಯಲ್ಲಿ ಮದುವೆಯಾಗಿ ಎಂದು ಹೇಳಿದಮೇಲೆ 2006ರಲ್ಲಿ ಮೆಹದಿ ಹಾಗೂ ಲೈಲಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ನಿಶ್ಚಿತಾರ್ಥ ಆಗಿ 4 ವರ್ಷಗಳ ನಂತರ ಮದುವೆಯಾಗಿದ್ದಾರಂತೆ. ಮೆಹದಿ ಇರಾನಿ ಮೂಲದ ಉದ್ಯಮಿ. ಲೈಲಾ ಈಗ ಎರಡು ಗಂಡು ಮಕ್ಕಳ ತಾಯಿ. ಇನ್ನು ನಟಿ ಲೈಲಾ ಅವರೇ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಮದುವೆಗೆ ಮುಂಚೆ ನಾಲ್ಕು ವರ್ಷ ಇಬ್ಬರು ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿ ಸಹಜೀವನ ನಡೆಸಿರುತ್ತಾರೆ. ಇನ್ನು ಲೈಲಾ ದಂಪತಿಗೆ 9 ಮತ್ತು 12ವರ್ಷದ ಇಬ್ಬರು ಮಕ್ಕಳಿದ್ದಾರೆ.
ಇನ್ನು ದುಬೈನಲ್ಲಿ ವಾಸ ಮಾಡುತ್ತಿದ್ದ ಇವರ ಜೀವನ ಸಂತೋಷವಾಗಿಯೇ ನಡೆಯುತ್ತಿತ್ತು. ಆದರೆ ಲೈಲಾ ಪತಿ ಮೆಹದಿ ಅವರು ನಡೆಸುತ್ತಿದ್ದ ಬ್ಯುಸಿನೆಸ್ ನಲ್ಲಿ ನಷ್ಟ ಉಂಟಾಗಿ ಇವರ ಕುಟುಂಬ ಬೀದಿಗೆ ಬರುವಂತಾಗಿತ್ತು ಎಂದು ಹೇಳಲಾಗಿದೆ. ತನ್ನ ಹೆತ್ತವರನ್ನ, ಹುಟ್ಟಿದ ದೇಶವನ್ನ ಬಿಟ್ಟು ಹೋಗಿದ್ದ ನಟಿ ಲೈಲಾ ತುಂಬಾ ಕಷ್ಟಗಳಿಗೆ ಒಳಗಾಗುತ್ತಾರೆ. ಇನ್ನು ದುಬೈನಲ್ಲಿ ವಾಸ ಮಾಡುತ್ತಿರುವ ಕೆಲ ಭಾರತೀಯರು ನಟಿ ಲೈಲಾ ಅವರ ಕಷ್ಟಗಳನ್ನ ನೋಡಲಾಗದೆ ತಮ್ಮ ಕೈಲಾದಷ್ಟು ಆರ್ಥಿಕವಾಗಿ ಸಹಾಯದ ಹಸ್ತ ಚಾಚಿದ್ದಾರೆ. ಇನ್ನು ಈ ವಿಷಯವನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಂಕಷ್ಟಕ್ಕೆ ಒಳಗಾಗಿರುವ ನಟಿ ಲೈಲಾ ಅವರ ಬಗ್ಗೆ ತಿಳಿಸಿದ್ದಾರೆ. ‘ದೂರದ ಬೆಟ್ಟ ನುಣ್ಣಗೆ’ ಅಂತ ನಮ್ಮ ಹಿರಿಯರು ಹೇಳಿರುವ ಮಾತುಗಳು ಸತ್ಯವೇ ಸರಿ. ಸುಖ ಜೀವನ ಅರಸಿ ಹೋಗುವುದು ತಪ್ಪಲ್ಲ. ಅದಕ್ಕಾಗಿ ದೇಶವನ್ನೇ ಬಿಟ್ಟು ಹೋಗುವ ಮುಂಚೆ ಸ್ವಲ್ಪ ಯೋಚನೆ ಮಾಡಬೇಕು. ನಾವಿಲ್ಲಿದ್ದಲ್ಲಿಯೇ ಸಂತೋಷವನ್ನ ಹುಡುಕಿ ಇದ್ದುದರಲ್ಲಿ ಸುಖ ಪಡುವುದು ಉತ್ತಮ.
ರೋಮನ್ ಕ್ಯಾಥೋಲಿಕ್ ಆಗಿರುವ ಲೈಲಾ ಹಿಂದಿ, ಇಂಗ್ಲಿಷ್, ತೆಲುಗು, ಮಲಯಾಳಂ, ತಮಿಳು, ಫ್ರೆಂಚ್ ಭಾಷೆಗಳನ್ನು ಮಾತನಾಡುತ್ತಾರೆ. ಡಾನ್ಸ್ ಜೋಡಿ ಡಾನ್ಸ್ ಜ್ಯೂನಿಯರ್ ಕಾರ್ಯಕ್ರಮದಲ್ಲಿ ಲೈಲಾ ಜಡ್ಜ್ ಆಗಿ ಕೂಡ ಕೆಲಸ ಮಾಡಿದ್ದರು. ಮದುವೆ ನಂತರ ಸಿನಿಮಾದಿಂದ ಹಲವು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದ ಲೈಲಾ, 2019ರಲ್ಲಿ ಮತ್ತೆ ಸಿನಿಮಾದಲ್ಲಿ ಬಣ್ಣ ಹಚ್ಚತೊಡಗಿದರು. ಮದುವೆ ನಂತರ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಲೈಲಾ ಪ್ರಸ್ತುತ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಳಪತಿ ವಿಜಯ್, ಸೂರ್ಯ ಜೊತೆಗೆ ನಟಿಸಿದ್ದ ಲೈಲಾ ಮತ್ತೆ ಇವರಿಗೆ ಜೋಡಿಯಾಗಿ ನಟಿಸಲಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿತ್ತು.