ಕಾಜಲ್ ಅಗರ್ವಾಲ್ ಇವರು ಟಾಪ್ ನಟಿಯರಲ್ಲಿ ಒಬ್ಬರು. ಹಾಗೆಯೇ ನೋಡಲು ಬಹಳ ಸುಂದರವಾಗಿ ಇದ್ದಾರೆ.ಇವರು ಭಾರತೀಯ ಚಲನಚಿತ್ರ ನಟಿ ಮತ್ತು ರೂಪದರ್ಶಿ ಆಗಿದ್ದಾರೆ. ಅವರು ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮಗಳಲ್ಲಿ ತಮ್ಮ ವೃತ್ತಿಜೀವನವನ್ನು ಸ್ಥಾಪಿಸಿದ್ದಾರೆ. ಅದರಲ್ಲೂ ತೆಲುಗುದಲ್ಲಿ ಅವರು ನಟಿಸಿದ ಮಗಧೀರ ಸಿನೆಮಾ ಬಹಳ ಚೆನ್ನಾಗಿದೆ ಎಂದು ಹೇಳಬಹುದು. ಇವರು ನಾಲ್ಕು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಾಜಲ್ ರವರು ಕ್ಯೂ ಹೋ ಗಯಾ ನಾ ಎಂಬ ಹಿಂದಿ ಚಿತ್ರದ ಮೂಲಕ ತಮ್ಮ ವೃತ್ತಿಜೀವನಕ್ಕೆ ಪಾದಾರ್ಪಿಸಿದರು. 2007ರಲ್ಲಿ ಅವರು ಮೊದಲ ಬಾರಿಗೆ ಲಕ್ಷ್ಮೀ ಕಲ್ಯಾಣಂ ಎಂಬ ಚಿತ್ರದಲ್ಲಿ ನಟಿಸಿದರು. ಅದೇ ವರ್ಷದಲ್ಲಿ ಅವರು ಚಂದಾಮಾಮಾ ಎಂಬ ಚಿತ್ರದಲ್ಲಿ ನಟಿಸಿದರು. ಈ ಚಿತ್ರವು ಅವರಿಗೆ ಅತಿ ಹೆಚ್ಚು ಯಶಸ್ಸನ್ನು ಕೊಟ್ಟಿತು. 2009ರಲ್ಲಿ ಐತಿಹಾಸಿಕ ಕಾದಂಬರಿ ತೆಲುಗು ಚಲನಚಿತ್ರ ಮಗಧೀರ ಅತಿ ಹೆಚ್ಚಿನ ವೀಕ್ಷಣೆ ಕಂಡಿತು. ಹಾಗೇ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವನ್ನು ನೀಡಿತು. ಅವರು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದರು .
ಇದು ಸಾರ್ವಕಾಲಿಕವಾಗಿ ಅತಿ ಹೆಚ್ಚು ಯಶಸ್ಸನ್ನು ಗಳಿಸಿದ ತೆಲುಗು ಚಿತ್ರಗಳ ಪಟ್ಟಿಯಲ್ಲಿ ಒಂದಾಗಿದೆ. ಇದರಿಂದಾಗಿ ಫಿಲ್ಮ್‌ಫೇರ್ ಸೇರಿದಂತೆ ಹಲವಾರು ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಿ ಅವರು ಅತ್ಯುತ್ತಮ ನಟಿ ಎಂಬ ನಾಮನಿರ್ದೇಶನಗಳನ್ನು ಪಡೆದರು. ಕಾಜಲ್ ರವರು ಡಾರ್ಲಿಂಗ್, ಬೃಂದಾವನಂ, ಮಿಸ್ಟರ್ ಪರ್ಫೆಕ್ಟ್ , ಬಿಸಿನೆಸ್ ಮ್ಯಾನ್, ನಾಯಕ್, ಬಾದ್ಶಾ , ಗೋವಿಂದು ಅಂಡರಿವಾಡೆಲೆ, ಟೆಂಪರ್ ಮತ್ತು ಖೈದಿ ಸಂಖ್ಯೆ 150 ಎಂಬ ತೆಲುಗು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.
ತಮಿಳಿನಲ್ಲಿ ನಾನ್ ಮಹಾನ್ ಅಲ್ಲಾ, ಮಾತ್ರ್ರಾನ್, ತುಪ್ಪಕ್ಕಿ, ಜಿಲ್ಲಾ , ವಿವೇಗಂ ಮತ್ತು ಮರ್ಸಲ್ 3ಎಂಬ ಚಿತ್ರಗಳಲ್ಲಿ ಇವರು ನಾಯಕಿಯಾಗಿ ನಟಿಸಿದ್ದಾರೆ. ಸಿಂಗಮ್ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪುನಾರಾಗಮನ ಮಾಡಿದರು. 2013ರಲ್ಲಿ ಮತ್ತೊಂದು ಚಿತ್ರ ಸ್ಪೆಷಲ್ 26 ನಲ್ಲಿಯೂ ಕಾಜಲ್ ನಟಿಸಿದ್ದಾರೆ. ಇವರಿಗೆ ಈಗ 30ವರ್ಷ ಆಗಿದೆ. ಶ್ವಾಸಕೋಶದ ಅಸ್ತಮಾದಿಂದ ಬಳಲುತ್ತಿದ್ದಾರೆ. ಆದರೆ ಇವರಿಗೆ 5ವರ್ಷ ಇರುವಾಗಲೇ ಅಸ್ತಮಾ ಶುರುವಾಗಿತ್ತು. ಹಾಗಾಗಿ ಇವರು ತಮಗೆ ತಿಳಿದಾಗಿನಿಂದ ಇನ್ಹೇಲರ್ ನ್ನು ಬಳಸುತ್ತಿದ್ದಾರೆ. ಆದ್ದರಿಂದ ಇದನ್ನು ಬಳಸಿದರೆ ಯಾವುದೇ ಕಾರಣಕ್ಕೂ ತೊಂದರೆಯಿಲ್ಲ ಎಂದು ಹೇಳಿದ್ದಾರೆ.