ಕಳೆದ ಹಲವು ದಿನಗಳಿಂದ 2 ಸಾವಿರ ಮುಖ ಬೆಲೆಯ ನೋಟುಗಳು ಕಾಣಿಸುತ್ತಿರುವುದು ತುಂಬಾನೇ ಕಡಿಮೆ ಆಗಾಗಿ ಇದರಿಂದ ಜನರಲ್ಲಿ 2 ಸಾವಿರದ ನೋಟುಗಳು ಚಲಾವಣೆಯಲ್ಲಿ ಇಲ್ಲ ಅನ್ನೋ ಮಾತುಗಳು ಕೇಳಿಬಂದಿದ್ದವು ಆದ್ರೂ ಕೂಡ ಇದರ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ರೀತಿಯ ಪ್ರತಿಕ್ರಿಯೆ ಕೊಟ್ಟಿರಲಿಲ್ಲ ಆದ್ರೆ ಇದೀಗ RBI ವಾರ್ಷಿಕ ವರದಿಯಲ್ಲಿ ಮಾಹಿತಿ ಬಹಿರಂಗವಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ 2 ಸಾವಿರ ರೂ. ಮುಖಬೆಲೆಯ ಒಂದು ನೋಟನ್ನು ಸಹ ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸಿಲ್ಲ ಎಂಬುದಾಗಿ ತಿಳಿಸಿದೆ. ಈ ಹಿಂದೆ ಹಳೆಯ 500 ಹಾಗು 1ಸಾವಿರದ ನೋಟುಗಳನ್ನು ಬಂದ್ ಮಾಡಿದಂತ ಸಂದರ್ಭದಲ್ಲಿ 2 ಸಾವಿರದ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು.
2019 ರ ಬಳಿಕ ಇದರ ಚಲಾವಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಡಿಮೆ ಮಾಡಿದೆ 2018 ಮಾರ್ಚ್ ಅಂತ್ಯದ ವೇಳೆಗೆ ಇದು 27,398 ಲಕ್ಷಕ್ಕೆ ಇಳಿದಿದೆ. ಇದೆ ವೇಳೆ 500 ಹಾಗು 200 ರೂ ನೋಟುಗಳ ಮುದ್ರಣ ಏರಿಕೆ ಕಂಡಿದೆ ಎಂಬುದಾಗಿ RBI ಹೇಳಿದೆ ಅಧಿಕ ಮುಖ ಬೆಲೆಯ ನೋಟುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿಸಲಾಗಿದೆ.