ಎಸ್ ಪಿಬಿ ಅವರ ಅರೋಗ್ಯ ವಿಚಾರದಲ್ಲಿ ಫಲಿಸಿತು ಅಭಿಮಾನಿ ದೇವರುಗಳ ಜನರ ಪ್ರಾರ್ಥನೆ

ಗಾನ ಗಂಧರ್ವ ಎಸ್ ಪಿ ಬಾಲಸುಬ್ರಮಣ್ಯ ನವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ತಮಗೆ ಕೊರೊನ ಇರುವ ಕಾರಣಕ್ಕೆ ಚಿಕಿತ್ಸೆಗೆ ಚೆನ್ನೈನ ಎಂಜಿಎಂ ಹೆಲ್ತ್​ಕೇರ್​ನಲ್ಲಿ ದಾಖಲಾಗಿದ್ದರು ಆದ್ರೆ ಚಿಕಿತ್ಸೆಗೆ ಸರಿಯಾಗೇ ಸ್ಪಂಧಿಸದೆ ಇರುವ ಕಾರಣ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು ಆದ್ರೆ ಕಳೆದ ದಿನಗಳಿಂದ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇರುವುದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದ್ರೆ ಇದೀಗ ಎಸ್ ಪಿಬಿ ಅವರ ಅರೋಗ್ಯ ವಿಚಾರದಲ್ಲಿ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಪಲಿಸಿದೆ ಅಂದ್ರೆ ತಪ್ಪಾಗಲಾರದು ಅವರ ಹೆಲ್ತ್ ಬಲಿಟಿನ್ ನಲ್ಲಿ ಕೊರೊನ ನೆಗೆಟಿವ್ ಬಂದಿದೆ ಅನ್ನೋದನ್ನ ಕೆ ಕಲ್ಯಾಣ್ ಅವರು ಹೇಳಿದ್ದಾರೆ.

21 ದಿನಗಳ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇದೀಗ ಅವರ ಮಗ ಚರಣ್ ಅವರು ಇದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಇನ್ನು ಆಸ್ಪತ್ರೆ ಕಡೆಯಿಂದ ಬಲಿಟಿನ್ ಬಿಡುಗಡೆಯಾಗಬೇಕಾಗಿದೆ, ಆದ್ರೆ ಎಸ್ ಪಿಬಿ ಅವರ ಅರೋಗ್ಯ ಚೇತರಿಕೆಯ ಬಗ್ಗೆ ಅಧಿಕೃತವಾಗಿ ತಿಳಿಯಬೇಕಾಗಿದೆ ಆದ್ರೆ, ಕೆ ಕಲ್ಯಾಣ್ ಅವರು ನೆನ್ನೆ ಎಸ್ ಪಿಬಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಅನ್ನೋದನ್ನ ತಿಳಿಸಿದ್ದಾರೆ.

By

Leave a Reply

Your email address will not be published. Required fields are marked *