ಕ್ರಿಕೆಟ್ ಇದು ಒಂದು ಹಬ್ಬದಂತಹ ಆಟ. ಒಂದು ಬಾರಿ ಐಪಿಎಲ್ ಪಂದ್ಯ ಶುರುವಾದರೆ ಟಿವಿ ಬಿಟ್ಟು ಯಾರು ಕದಲುವುದಿಲ್ಲ. ತಿಂಡಿ ಊಟ ಏನಿದ್ದರೂ ಟಿವಿಯ ಮುಂದೆಯೆ. ವಾಟ್ಸ್ ಆಪ್, ಫೇಸ್ ಬುಕ್ ಗಳಲ್ಲಿ ತಮ್ಮ ನೆಚ್ಚಿನ ತಂಡಗಳ ಬಗ್ಗೆ ಸಾಲು ಸಾಲು ಲೇಖನಗಳು, ಪೋಟೊಗಳನ್ನು ಹಾಕುತ್ತಾರೆ. ಹಾಗೆಂದೂ ಐಪಿಎಲ್ ಪಂದ್ಯಕ್ಕೆ ಆಯ್ಕೆಯಾಗುವುದು ಸುಲಭದ ಮಾತಲ್ಲ. ಕ್ರಿಕೆಟ್ ಆಟ ಎಷ್ಟೋ ಆಟಗಾರರ ಜೀವನವನ್ನೆ ಬದಲಾಯಿಸಿದೆ. ಅಂತಹದೆ ಒಂದು ಪ್ರತಿಭೆ ತಮಿಳುನಾಡಿನ ಒಂದು ದಿನಗೂಲಿ ಮಾಡಿ ಬದುಕುವ ಮನೆಯಿಂದ ಐಪಿಎಲ್ ಪಂದ್ಯದಲ್ಲಿ ಆಟವಾಡಿ ಹೆಸರು ಪಡೆದಿದ್ದಾನೆ. ಹಾಗಾದರೆ ಯಾರು ಅವರು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ.

ಕ್ರಿಕೆಟ್ ಆಟ ಶುರುವಾದರೆ ಸಾಕು ಹಣದ ಸುರಿಮಳೆ ಶುರುವಾಗುತ್ತದೆ. ಸಾಮರ್ಥ್ಯವನ್ನು ಬಳಸಿ ಕ್ರಿಕೆಟ್ ಆಟದಲ್ಲಿನ ತಮ್ಮ ಹಿಡಿತದ ಆಳ, ಹಾಗೂ ಪ್ರತಿಭೆ ತೋರಿಸಿ, ಜೀವನ ಬದಲಿಸಿಕೊಳ್ಳಬಹುದಾದ ಉತ್ತಮ ಸ್ಥಾನವಾಗಿದೆ. ಅಂತೆಯೆ ಇಲ್ಲಿ ಹೇಳುತ್ತಿರುವುದು ತಮ್ಮ ಕ್ರಿಕೆಟ್ ಪ್ರತಿಭೆ ಪ್ರದರ್ಶಿಸಿ ಹತ್ತು ಯಾರ್ಕರ್ ಗಳನ್ನು ಎಸೆದು ಐಪಿಎಲ್ ಪಂದ್ಯದಲ್ಲಿ ಮಿಂಚಿದ ಪ್ರತಿಭೆಯ ಕುರಿತು. ಹತ್ತು ಯಾರ್ಕರ್ ಹಾಕಿ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಟಿ. ನಟರಾಜನ್ ಅವರು ಸನ್ ರೈಸಸ್ ಹೈದ್ರಾಬಾದ್ ತಂಡದಲ್ಲಿ ಯಾರ್ಕರ್ ಸ್ಪೇಷಲಿಸ್ಟ್, ಎಡಗೈ ವೇಗಿ ಎಂದು ಹೆಸರುವಾಸಿಯಾದ ಟೀಮ್ ನಲ್ಲಿ ಪ್ರಮುಖ ಬೌಲರ್ ಆಗಿ ಮಿಂಚುತ್ತಿರುವ ಹುಡುಗ. ತನ್ನ ಕಠಿಣ ಪರಿಶ್ರಮದಿಂದ ಮೇಲೆ ಬಂದಿದ್ದಾರೆ. ಈ ತಮಿಳುನಾಡಿನ ಹುಡುಗ ಬಡಕುಟುಂಬದಿಂದ ಬಂದ ಪ್ರತಿಭೆ. ಅವತ್ತು ದುಡಿದ ಹಣದಿಂದ ಅವತ್ತಿನ ಊಟ. ಅಮ್ಮ ಹಾಗೂ ಅಪ್ಪ ದಿನಗೂಲಿ ಕೆಲಸಗಾರರು ಹಾಗೂ ಮೂರು ಸಹೋದರಿಯರು ಇದ್ದಾರೆ. ತಮಿಳು ನಾಡಿನ ಪ್ರೀಮಿಯರ್ ಲೀಗ್ ನಲ್ಲಿ ತಮ್ಮ ಪ್ರಯತ್ನ ಹಾಗೂ ಪ್ರತಿಭೆಯಿಂದ ತಕ್ಕಮಟ್ಟಿಗೆ ಹೆಸರು ಗಳಿಸಿದ ಇವರು ಐಪಿಎಲ್ ಫ್ರಾಂಚೈಸಿಗಳ ಗಮನಕ್ಕೆ ಬಂದಿದ್ದರು. ಟಿಪಿಎಲ್ ನಿಂದ ತಮಿಳುನಾಡು ಕ್ರಿಕೆಟ್ ತಂಡಕ್ಕೂ ನಟರಾಜನ್ ಆಯ್ಕೆಯಾಗಿದ್ದರು.

ಆ ಸಮಯಗಳಲ್ಲಿ ಕ್ರಿಕೆಟ್ ಕಿಟ್ ಖರೀದಿಸಲು ಪರದಾಡುತ್ತಿದ್ದ ನಟರಾಜನ್ 2017 ರಲ್ಲಿ ಕಿಂಗ್ 11 ತಂಡ ಐಪಿಎಲ್ ಹರಾಜಿನಲ್ಲಿ ನಟರಾಜನ್ ಅವರನ್ನು ಮೂರು ಕೋಟಿ ಕೊಟ್ಟು ಖರೀದಿಸಿತ್ತು. ಆದರೆ ಐಪಿಎಲ್ ಪಂದ್ಯದಲ್ಲಿ ಆಡಲು ಸಿಕ್ಕಿದ್ದ ಅವಕಾಶವನ್ನು ಉಪಯೋಗಿಸಿಕೊಳ್ಳುವುದರಲ್ಲಿ ನಟರಾಜನ್ ಸೋತಿದ್ದರು. ಇದರಿಂದಾಗಿ ಪಂಜಾಬ್ ತಂಡ ನಟರಾಜನ್ ಅವರನ್ನು ತನ್ನ ಟೀಂಗೆ ತೆಗೆದುಕೊಳ್ಳಲಿಲ್ಲ. ಪ್ರಯತ್ನ ಕೈ ಬಿಡದ ನಟರಾಜನ್ ದೇಶಿ ಕ್ರಿಕೆಟ್ ನಲ್ಲಿ ಭಾಗವಹಿಸಿದ್ದರು. ದೇಸಿ ಕ್ರಿಕೇಟ್ ನಲ್ಲಿ ಉತ್ತಮ ಪ್ರದರ್ಶನ ನಟರಾಜನ್ ನೀಡಿದ್ದರಿಂದ ಸನ್ ರೈಸಸ್ ತಂಡದ ಮುತ್ತಯ್ಯ ಮುರಳಿಧರನ್ ಅವರ ಗಮನ ಸೆಳೆದಿದ್ದರು. ನಂತರದಲ್ಲಿ 40 ಲಕ್ಷಕ್ಕೆ ಸನ್ ರೈಸಸ್ ತಂಡಕ್ಕೆ 2018ರ ಐಪಿಎಲ್ ಹರಾಜಿನಲ್ಲಿ ಮಾರಲ್ಪಟ್ಟರು. ಈ ಬಾರಿ ಐಪಿಎಲ್ ನಲ್ಲಿ ಅವಕಾಶ ಪಡೆದ ನಟರಾಜನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಎಡಗೈ ವೇಗಿ ಎಂದು ಹೆಸರು ಪಡೆದ ನಟರಾಜನ್ ಐಪಿಎಲ್ ನಲ್ಲಿ ದೆಹಲಿಯ ವಿರುದ್ಧದ ಪಂದ್ಯದಲ್ಲಿ ಹತ್ತು ಯಾರ್ಕರ್ ಎಸೆಯುವುದರ ಮೂಲಕ ಒಂದು ಇನ್ನಿಂಗ್ಸ್‌ನಲ್ಲಿ ಹೆಚ್ಚು ಯಾರ್ಕರ್ ಹಾಕಿದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಟರಾಜನ್ ತಮ್ಮದೆ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಹದಿನೇಳನೆಯ ಓವರ್ ನಲ್ಲಿ ಪ್ರಮುಖ ವಿಕೆಟ್ ಪಡೆದು ದೆಹಲಿಯ ತಂಡದ ಎದುರಿನ ಗೆಲುವಿಗೆ ಕಾರಣರಾದರು. ಇದೇರೀತಿಯ ಉತ್ತಮ ಪ್ರದರ್ಶನ ಮುಂದುವರೆದಲ್ಲಿ ಟೀಂ ಇಂಡಿಯಾದಲ್ಲಿಯೂ ಜಾಗ ಪಡೆದು ಪ್ರಮುಖ ಬೌಲರ್ ಆಗುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂಬ ಮಾತು ಕ್ರಿಕೆಟ್ ತಜ್ಞರಿಂದ ಕೇಳಿಬರುತ್ತಲಿದೆ.

ಯಾವುದೇ ವ್ಯಕ್ತಿಯಾದರೂ ಪ್ರತಿಭೆ ಹೊಂದಿದ್ದು ಶ್ರದ್ಧೆಯಿಂದ ಪ್ರಯತ್ನ ಮಾಡಿದಲ್ಲಿ ಯಾವುದೆ ಶಕ್ತಿಯು ಆ ಆಸೆ ಅಥವಾ ಕ್ರಿಯೆ ನೆರವೇರುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂಬ ಮಾತಿದೆ. ಈ ಮಾತಿಗೆ ಟಿ. ನಟರಾಜನ್ ಅವರು ಒಂದು ಉದಾಹರಣೆಯಾಗಿದ್ದಾರೆ. ಅವರಂತೆಯೆ ನಾವೂ ಕೂಡ ನಮ್ಮ ಪ್ರಯತ್ನ, ಛಲ ಬಿಡದೆ ಮುಂದುವರೆಸಿ ಗೆಲುವನ್ನು ನಮ್ಮದಾಗಿಸಿಕೊಳ್ಳೊಣ.

Leave a Reply

Your email address will not be published. Required fields are marked *