ಮನುಷ್ಯ ತಾನು ಜೀವನ ನಡೆಸಬೇಕು ಎಂದಾದರೆ ಕೆಲವೊಂದು ಸಲಹೆಗಳನ್ನು ಅನುಸರಿಸಬೇಕಾಗುತ್ತದೆ. ಹಾಗೆಯೇ ತನಗೆ ತಿಳಿಯದ್ದನ್ನು ಬೇರೆಯವರಿಂದ ತಿಳಿದುಕೊಳ್ಳಬೇಕಾಗುತ್ತದೆ. ಒಬ್ಬರಿಗೆ ತಿಳಿದ ವಿಷಯ ಇನ್ನೊಬ್ಬರಿಗೆ ತಿಳಿದಿರುವುದಿಲ್ಲ. ಹಾಗಾಗಿ ಕೆಲವು ಸುಲಭದ ಸಲಹೆಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಐಸ್ ಕ್ಯೂಬ್ ಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಟೇಬಲ್ ಫ್ಯಾನ್ ಹತ್ತಿರ ಇಡಬೇಕು. ಇದರಿಂದ ಕೊಠಡಿಯಲ್ಲಿ ತುಂಬಾ ತಂಪಾದ ಗಾಳಿ ಇರುತ್ತದೆ. ಇದರಿಂದ ಮಲಗಲು ಹಾಯಾಗಿರುತ್ತದೆ. ಬಾಳೆಹಣ್ಣನ್ನು ತಿನ್ನುವುದರಿಂದ ಖಿನ್ನತೆಯಿಂದ ಹೊರಬರಲು ಸಹಾಯವಾಗುತ್ತದೆ. ಇದು ಒಳ್ಳೆಯ ಮಾರ್ಗವಾಗಿದೆ. ಹಾಗೆಯೇ ಶುಂಠಿ ಮತ್ತು ನಿಂಬೆಯನ್ನು ಪಾನೀಯದ ರೂಪದಲ್ಲಿ ಸೇರಿಸಬೇಕು. ಇದರಿಂದ ಮೂತ್ರಪಿಂಡದಲ್ಲಿ ಒಳ್ಳೆಯ ಪರಿಣಾಮ ಉಂಟಾಗುತ್ತದೆ. ಮೊಸರನ್ನು ನಿಯಮಿತವಾಗಿ ಸೇವಿಸಬೇಕು. ಇದರಿಂದ ರಕ್ತ ಹೀನತೆ, ದೌರ್ಬಲ್ಯಗಳು ಮತ್ತು ಹೊಟ್ಟೆಯ ಖಾಯಿಲೆಗಳು ದೂರವಾಗುತ್ತವೆ.
ಹೊಟ್ಟೆ ನೋವು ಉಂಟಾದಾಗ ಬೆಳಿಗ್ಗೆ ತುಳಸಿ ಎಲೆಯ ಚಹಾವನ್ನು ತೆಗೆದುಕೊಳ್ಳಬೇಕು. ಇದರಿಂದ ಒಳ್ಳೆಯ ಪರಿಣಾಮ ಬೀರುತ್ತದೆ. ಕೆಮ್ಮು ಉಂಟಾದಾಗ ಕಾಲುಗಳ ಕೆಳಭಾಗದಲ್ಲಿ ವಿಕ್ಸ್ ವೆಪೋರಬ್ ನ್ನು ನಿಧಾನವಾಗಿ ರಬ್ ಮಾಡಬೇಕು. ನಂತರ ಕಾಲುಚೀಲದೊಂದಿಗೆ ಮುಚ್ಚಬೇಕು. ಇದರಿಂದ ಕೆಮ್ಮು 20 ನಿಮಿಷಗಳಲ್ಲಿ ದೂರವಾಗುತ್ತದೆ. ಉಸಿರಾಟದ ತೊಂದರೆ ಉಂಟಾದಾಗ ಏಲಕ್ಕಿ ಮತ್ತು ಲವಂಗದ ಸೇವನೆಯನ್ನು ಮಾಡಬೇಕು. ಹಾಗೆಯೇ ಬೆಳಿಗ್ಗೆ ಎಚ್ಚರವಾಗಿ ಇರಬೇಕು ಎಂದರೆ ಸೇಬುಹಣ್ಣನ್ನು ತಿನ್ನಬೇಕು. ಯಾವುದೇ ರೀತಿಯ ಔಷಧಿಯನ್ನು ಸೇರಿಸಿ ದ್ರಾಕ್ಷಿಯನ್ನು ಸೇವಿಸಬಾರದು.
ಪ್ರತಿದಿನ ಬೆಳಿಗ್ಗೆ 15 ರಿಂದ 20ನಿಮಿಷಗಳ ಕಾಲ ಸೂರ್ಯನ ಬಿಸಿಲಿಗೆ ದೇಹವನ್ನು ಒಡ್ಡಬೇಕು. ಇದರಿಂದ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ. ದೇಹದ ಮೂಳೆಗಳು ಗಟ್ಟಿಯಾಗುತ್ತವೆ. ಹಾಗೆಯೇ ಮಜ್ಜಿಗೆ ಬೆರೆಸಿದ ಅರಿಶಿನ ಮತ್ತು ಹಳೆಯ ಬೆಲ್ಲವನ್ನು ಸೇವಿಸುವುದರಿಂದ ಕಿಡ್ನಿಯ ಕಲ್ಲುಗಳನ್ನು ನಾಶಪಡಿಸಬಹುದು. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದರೆ ಅಂತಹ ಮಹಿಳೆಯರು ಪ್ರತಿದಿನ ಬೆಲ್ಲ ಮತ್ತು ಕಡಲೆಬೇಳೆಯನ್ನು ಸೇವಿಸಬೇಕು. ಹಣ್ಣುಗಳನ್ನು ಸೇವಿಸುತ್ತಿರಬೇಕು. ಏಕೆಂದರೆ ಇವುಗಳು ದೃಶಿಕ್ಷಮತೆ ಹೆಚ್ಚಿಸುತ್ತವೆ. ಈ ಎಲ್ಲಾ ಸಲಹೆಗಳನ್ನು ಅನುಸರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.