ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೋನಲ್ ಸೆಲೆಕ್ಷನ್ Institute of banking personal selection (IBPS) ನ ದೇಶದ 43 ಗ್ರಾಮೀಣ ಬ್ಯಾಂಕ್’ಗಳಲ್ಲಿ ಖಾಲಿ ಇರುವ 8,000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು.

ಆಫೀಸ್ ಅಸಿಸ್ಟೆಂಟ್ (office assistant), ಸೀನಿಯರ್ ಮ್ಯಾನೇಜರ್ (senior manager), ಮ್ಯಾನೇಜರ್ (manager) ಮತ್ತು ಅಸಿಸ್ಟೆಂಟ್ ಮ್ಯಾನೇಜರ್ (Assistant manager) ಸೇರಿದಂತೆ ಬೇರೆ ಬೇರೆ ಹುದ್ದೆಗಳು ಖಾಲಿ ಇದ್ದು. ಈ ಹುದ್ದೆಗಳ ನೇಮಕಾತಿಗಾಗಿ ಶೀಘ್ರದಲ್ಲೇ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗುತ್ತದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯ ಇರುವ ವಿದ್ಯಾ ಅರ್ಹತೆ, ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಅವರ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ನಿಗದಿಪಡಿಸಿದ ದಿನಾಂಕದ ಒಳಗೆ ಅರ್ಜಿ ಸಲ್ಲಿಕೆ ಮಾಡಬೇಕು, ಈ ಹುದ್ದೆಗಳಿಗೆ ಅಗತ್ಯ ಇರುವ ವಿದ್ಯಾರ್ಹತೆ (Qualification) ವೇತನ ಶ್ರೇಣಿ ( Salary ) ವಯೋಮಿತಿ (Age Limit ) ಅರ್ಜಿ ಶುಲ್ಕ (Application Fees) ಹುದ್ದೆಗಳ ವಿವರ, ಎಲ್ಲಾ ವಿವರವಾಗಿ ಒಂದೊಂದಾಗಿ ತಿಳಿಯೋಣ ಬನ್ನಿ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡುವ ಮುನ್ನ ಅಧಿಸೂಚನೆ ( Notification) ಓದಿ ನಂತರ ಅರ್ಜಿ ಸಲ್ಲಿಸಬೇಕು.
ಇಲಾಖೆ ಹೆಸರು :-ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೋನಲ್ ಸೆಲೆಕ್ಷನ್ Institue of banking personal selection ( IBPS ) ನಲ್ಲಿ, ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 8,000ಕ್ಕೂ ಅಧಿಕ, ಅರ್ಜಿಗಳನ್ನು ಆನ್’ಲೈನ್ ಮುಖಾಂತರ ಸಲ್ಲಿಕೆ ಮಾಡಬಹುದು.

ವಿದ್ಯಾ ಅರ್ಹತೆ :- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಅಂಗೀಕೃತ ಸಂಸ್ಥೆ / ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು. ಜೊತೆಗೆ ಕಂಪ್ಯೂಟರ ಜ್ಞಾನವನ್ನು ಹೊಂದಿರಬೇಕು.

ವಯೋಮಿತಿ :– ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅನುಸಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ಮೀರಿರಬಾರದು ಹಿಂದುಳಿದ ವರ್ಗಗಳ  (OBC) ಅಭ್ಯರ್ಥಿಗಳು ಗರಿಷ್ಠ 3 ವರ್ಷಗಳು. (SC / ST, Category – 1) ಪಂ.ಜಾತಿ / ಪಂ.ಪಂಗಡ, ಪ್ರವರ್ಗ – 1 ರ ಮತ್ತು ಮಾಜಿ ಸೈನಿಕರಿಗೆ ಗರಿಷ್ಠ 5 ವರ್ಷಗಳು. ಅಂಗವಿಕಲ ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷಗಳ ವಯೋಮಿತಿಯ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ.

ವೇತನ ಶ್ರೇಣಿ :-ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸಾರವಾಗಿ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ (notification) ಲಿಂಕ್ ಮೇಲೆ ಕ್ಲಿಕ್ ಮಾಡಿ.

ಆಯ್ಕೆ ವಿಧಾನ :-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇನ್ನು ಅರ್ಜಿ ಬಿಡುಗಡೆ ಮಾಡಿದ ತಕ್ಷಣ ದಿನಾಂಕಗಳನ್ನು ಕೂಡ ಹೇಳಾಗುತ್ತದೆ. ಅದಕ್ಕೆ ಅಧಿಸೂಚನೆ ( notification ) ಚೆಕ್ ಮಾಡಿ. ಆಸಕ್ತಿ ಇರುವ ಅಭ್ಯರ್ಥಿಗಳು ದಿನಾಂಕಗಳು ಬಿಡುಗಡೆಯಾದ ಮೇಲೆ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. https://www.ibps.in/index.php/regional-rural-bank/

By

Leave a Reply

Your email address will not be published. Required fields are marked *