ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ( BNPM ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇಲಾಖೆಗೆ ಅರ್ಜಿ ಸಲ್ಲಿಕೆ ಮಾಡಲು ಇಚ್ಛೆ ಪಡುವ ವ್ಯಕ್ತಿಗಳು ಅರ್ಜಿ ಸಲ್ಲಿಸುವ ಮೊದಲಿಗೆ ಹುದ್ದೆಗಳಿಗೆ ಅಗತ್ಯ ಇರುವ ವಿದ್ಯ ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ ಬಗ್ಗೆ ವಿವರವಾಗಿ ತಿಳಿದು ನಂತರ ಆರ್ಜಿ ಹಾಕಬೇಕು. ಈ ಎಲ್ಲಾ ವಿವರವನ್ನು ಒಂದೊಂದಾಗಿ ತಿಳಿಯೋಣ ಬನ್ನಿ :-

ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ( BNPM ) ಇಲಾಖೆಯವರು ಒಟ್ಟು 39 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಅರ್ಜಿಗಳನ್ನು ಅಭ್ಯರ್ಥಿಗಳು ಆನ್’ಲೈನ್ ಮೂಲಕ ಸಲ್ಲಿಕೆ ಮಾಡಬೇಕು. ಉದ್ಯೋಗ ಮಾಡುವ ಸ್ಥಳ ಕರ್ನಾಟಕ ಮೈಸೂರು.

ಹುದ್ದೆಗಳ ವಿವರ :-
ಪ್ರೋಸೆಸ್ ಸಹಾಯಕ ಮೆಕ್ಯಾನಿಕಲ್ ( mechanical ) 10 ಹುದ್ದೆಗಳು ಖಾಲಿ ಇದೆ.
ಪ್ರೋಸೆಸ್ ಸಹಾಯಕ ಎಲೆಕ್ಟ್ರಿಕಲ್ ( electrical ) 4 ಹುದ್ದೆಗಳು ಖಾಲಿ ಇದೆ.
ಪ್ರೋಸೆಸ್ ಸಹಾಯಕ ಎಲೆಕ್ಟ್ರಾನಿಕ್ಸ್ ( electronics ) 5 ಹುದ್ದೆಗಳು ಖಾಲಿ ಇದೆ.
ಪ್ರೋಸೆಸ್ ಸಹಾಯಕ ರಾಸಾಯನಿಕ ( chemical ) 6 ಹುದ್ದೆಗಳು ಖಾಲಿ ಇದೆ.

ಪ್ರೋಸೆಸ್ ಸಹಾಯಕ ಪಲ್ಪ್ ಮತ್ತು ಪೇಪರ್ (pulp and paper) 6 ಹುದ್ದೆಗಳು ಖಾಲಿ ಇದೆ.
ಪ್ರೋಸೆಸ್ ಸಹಾಯಕ ಸಿವಿಲ್ (civil) 2 ಹುದ್ದೆಗಳು ಖಾಲಿ ಇದೆ.
ಪ್ರೋಸೆಸ್ ಸಹಾಯಕ ರಸಾಯನಶಾಸ್ತ್ರ (chemistry) 2 ಹುದ್ದೆಗಳು ಖಾಲಿ ಇದೆ.
ಖಾತೆ ಸಹಾಯಕ 2 ಹುದ್ದೆಗಳು ಖಾಲಿ ಇದೆ.
ಕಛೇರಿ ಸಹಾಯಕ 2 ಹುದ್ದೆಗಳು ಖಾಲಿ ಇದೆ.

ವಿದ್ಯಾ ಅರ್ಹತೆ: -ಮೇಲೆ ತಿಳಿಸಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಆಸಕ್ತಿ ಇರುವ ಅರ್ಹ ವ್ಯಕ್ತಿಗಳು ಹುದ್ದೆಗಳಿಗೆ ಅನುಗುಣವಾಗಿ ವಿದ್ಯ ಅರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪಡೆದಿರಬೇಕು. SSLC, ಐಟಿಐ, ಡಿಪ್ಲೋಮಾ ಮತ್ತು ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.

ವಯೋಮಿತಿ :-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷಗಳ ವಯೋಮಿತಿ ಮೀರಬಾರದು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.ಒಬಿಸಿ ( OBC ) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ, ಪಂ.ಜಾತಿ / ಪಂ.ಪಂಗಡ  ( SC/ST ) ದವರಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ವೇತನ ಶ್ರೇಣಿ :-ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯನ್ನು ಹುದ್ದೆಗಳ ಅನುಸಾರ ಮಾಸಿಕ ವೇತನವನ್ನು ನಿಗದಿ ಪಡಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಕ್ಲಿಕ್ಮಾಡಿ.https://drive.google.com/file/d/1DFy2F2y_dT56_DgOfTPJN7Qagg1DLQwh/view

ಅರ್ಜಿ ಶುಲ್ಕ :-
SC / ST / PWBD ಅಭ್ಯರ್ಥಿಗಳಿಗೆ :- ₹ 200/-
ಎಲ್ಲಾ ಇತರೆ ಅಭ್ಯರ್ಥಿಗಳಿಗೆ :- ₹ 600/-
ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು.

ಅಯ್ಕೆ ಮಾಡುವ ವಿಧಾನ :- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳನ್ನು ಆನ್ಲೈನ್ ಟೆಸ್ಟ್, ಟ್ರೇಡ್ ಟೆಸ್ಟ್, ಸ್ಕಿಲ್ ಟೆಸ್ಟ್ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿಗಳನ್ನು ಸಲ್ಲಿಕೆ ಮಾಡಲು ಆರಂಭದ ದಿನಾಂಕ :- 05/06/2024.
ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ :- 30/06/2024.

ಅರ್ಜಿ ಸಲ್ಲಿಕೆ ಮಾಡಲು ಆಸಕ್ತಿ ಇರುವ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. https://www.bnpmindia.com/Recruitment.aspx

By

Leave a Reply

Your email address will not be published. Required fields are marked *