ಪರಿಶ್ರಮದಿಂದ ಓದುವುದು ಒಂದು ಕಡೆ ಆದರೆ ಇನ್ನೊಂದು ಕಡೆ ಅದೆಲ್ಲವನ್ನು ನೆನಪಿಡುವುದು ಒಂದು ರೀತಿಯ ಶ್ರಮವೇ. ಸ್ಪರ್ಧಾತ್ಮಕ ಪರೀಕ್ಷೆಗೆ ಆಗಲಿ ತರಗತಿ ಪರೀಕ್ಷೆಗಳಿಗೆ ಆಗಲಿ ಓದುವ ಬಹುಸಂಖ್ಯಾತರಿಗೆ ಕಾಡುವ ಒಂದೇ ಒಂದು ಪ್ರಶ್ನೆ ಓದಿದ್ದನ್ನು ಹೇಗೆ ನೆನಪಿನಲ್ಲಿಡುವುದು ಎಂಬುದು. ಇನ್ನೂ ಕೆಲವರಿಗೆ ಓದಿದ್ದೆಲ್ಲ ಕನ್‌ಫ್ಯೂಸ್ ಆಗುವ ಸಮಸ್ಯೆ ಕಾಡುವುದು. ಇಂತಹ ಒಂದಲ್ಲ ಒಂದು ಸಮಸ್ಯೆ ಎಲ್ಲರಿಗೂ ಇದ್ದದ್ದೇ. ಆದ್ದರಿಂದ ಓದಿದ್ದನ್ನು ನೆನಪಿಟ್ಟುಕೊಳ್ಳಲು ಏನು ಮಾಡಬೇಕು ಎಂದು ನಾವು ಇಲ್ಲಿ ತಿಳಿಯೋಣ.

ಪುಸ್ತಕಗಳನ್ನು ಅಥವಾ ವಿಷಯಗಳನ್ನು ಓದುವಾಗ ಹೈಲೈಟ್ ಮಾಡಿಕೊಂಡು ಓದಬೇಕು. ಏಕೆಂದರೆ ಅವುಗಳು ನೋಡಲು ಆಕರ್ಷಣೀಯವಾಗಿರುತ್ತದೆ. ಹೈಲೈಟ್ ಮಾಡಿಕೊಂಡು ಅಂದರೆ ಎಲ್ಲ ಸಾಲುಗಳ ಕೆಳಗೆ ಗೆರೆಗಳನ್ನು ಎಳೆಯುವುದು ಅಥವಾ ಅಥವಾ ಸ್ಕೆಚ್ ಪೆನ್ ಗಳ ಮೂಲಕ ಸಾಲುಗಳನ್ನು ತುಂಬುವುದು. ಇದರಿಂದ ಸಾಲಗಳು ಆಕರ್ಷಣೀಯವಾಗಿದ್ದು ಕಣ್ಣಲ್ಲಿ ದೀರ್ಘಕಾಲದವರೆಗೆ ಇರುತ್ತದೆ. ವೈಜ್ಞಾನಿಕ ಸಂಶೋಧನೆಗಳು ಹೈಲೈಟ್ ಇರುವ ವಿಷಯಗಳು ದೀರ್ಘಕಾಲದವರೆಗೆ ಮೆದುಳಿನಲ್ಲಿ ಇರುತ್ತವೆ ಎಂದು ಹೇಳಿವೆ.

ಹಾಗೆಯೇ ಯಾವುದೇ ಕಾರಣಕ್ಕೂ ಓದಿದ್ದನ್ನು ಬಾಯಿಪಾಠ ಮಾಡಬಾರದು. ಅದನ್ನು ಪಟ್ಟಿಗಳಲ್ಲಿ ಬರೆದು ಬರೆದು ನೆನಪಿಟ್ಟುಕೊಳ್ಳಬೇಕು. ಏಕೆಂದರೆ ಬಾಯಿಪಾಠ ಮಾಡಿದ ಕಾಲದವರೆಗೆ ತಲೆಯಲ್ಲಿ ಉಳಿಯುವುದಿಲ್ಲ. ನಮ್ಮೂರಿನ ಮಾಹಿತಿಗಳು ತಲೆಯಲ್ಲಿ ಎರಡು ಭಾಗದಲ್ಲಿ ಸಂಗ್ರಹವಾಗುತ್ತವೆ. ಒಂದು ಶಾರ್ಟ್ ಟರ್ಮ್ ಮೆಮೊರಿ ಹಾಗೆಯೇ ಇನ್ನೊಂದು ಲಾಂಗ್ ಟರ್ಮ್ ಮೆಮೊರಿ. ಶಾರ್ಟ್ ಟರ್ಮ್ ಮೆಮೊರಿ ಇದರಲ್ಲಿ ಇರುವುದು ಬೇಗ ಮರೆತುಹೋಗುತ್ತದೆ.

ಲಾಂಗ್ ಟರ್ಮ್ ಮೆಮೊರಿ ಇದರಲ್ಲಿ ಮಾಹಿತಿಗಳು ದೀರ್ಘಕಾಲದವರೆಗೆ ಉಳಿಯುತ್ತದೆ. ಹಾಗೆಯೇ ಮೆದುಳಿಗೆ ಸ್ವಲ್ಪ ಭಯಪಡುವಂತ ಮಾತುಗಳನ್ನು ಆಡಬೇಕು. ಅಂದರೆ ಜೀವನದಲ್ಲಿ ಉದ್ಧಾರ ಆಗಬೇಕು ಎಂದರೆ ಓದಬೇಕು ಈ ರೀತಿಯಾಗಿ ಮೆದುಳಿಗೆ ಭಯ ಪಡಿಸಿದರೆ ಓದು ತಾನಾಗಿಯೇ ಆಗುತ್ತದೆ. ಎಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಬಹುದು. ಆದ್ದರಿಂದ ಹೈಲೈಟ್ ಆಗಿರುವುದನ್ನು ಓದಿದಾಗ ಮೆದುಳು ದೀರ್ಘಕಾಲದವರೆಗೆ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ಓದು ಈಗಿನ ಕಾಲದಲ್ಲಿ ಬಹಳ ಮುಖ್ಯ.

Leave a Reply

Your email address will not be published. Required fields are marked *