ಗೋಡಂಬಿ ತಿನ್ನುವುದರಿಂದ ಲಾಭವಿದೆ, ಆದ್ರೆ ಗೋಡಂಬಿ ಹೇಗೆ ತಯಾರಾಗುತ್ತೆ ನೋಡಿ

0 1

ಗೋಡಂಬಿ ತಯಾರಿಸುವ ವಿಧಾನವನ್ನು ಹಾಗೂ ಅದರ ಬೆಲೆಯನ್ನು ಈ ಲೇಖನದ ಮೂಲಕ ತಿಳಿಯೋಣ

ನಟ್ಸ್ ಎಂದು ಹೇಳುವ ಗೋಡಂಬಿಯನ್ನು ಸ್ವೀಟ್ ಗಳಲ್ಲಿ ಬಳಸಲಾಗುತ್ತದೆ. ಗೋಡಂಬಿ ಹಣ್ಣಿನಿಂದ ಗೋಡಂಬಿಯನ್ನು ತಯಾರಿಸುವುದು ಹೇಗೆಂದು ನೋಡೋಣ. ಮೊದಲು ಗೋಡಂಬಿ ಹಣ್ಣಿನ ಬೀಜಗಳನ್ನು ಬಾಯ್ಲರ್ ನಲ್ಲಿ ಹಬೆಯಲ್ಲಿ ಬೇಯಿಸಲಾಗುತ್ತದೆ ನಂತರ ಬೀಜಗಳ ಸಿಪ್ಪೆಯನ್ನು ಕಟ್ಟಿಂಗ್ ಮಷೀನ್ ನಲ್ಲಿ ತೆಗೆಯಲಾಗುತ್ತದೆ. ನಂತರ ಗೋಡಂಬಿಯನ್ನು ಒಂದು ರಾತ್ರಿ ಟೆಂಪರೇಚರ್ ಇಟ್ಟು ರೋಸ್ಟ್ ಮಾಡಲಾಗುತ್ತದೆ.

ನಂತರ ರೋಸ್ಟ್ ಆದ ಗೋಡಂಬಿಯನ್ನು ಚಾಕುವಿನ ಸಹಾಯದಿಂದ ಸಿಪ್ಪೆಯನ್ನು ತೆಗೆದು ನೀಟ್ ಆಗಿ ಬರುವಂತೆ ಮಾಡಲಾಗುತ್ತದೆ. 2-3 ಕ್ವಾಲಿಟಿಯಾಗಿ ಬೇರೆ ಬೇರೆ ಮಾಡಲಾಗುತ್ತದೆ. ಪೂರ್ಣವಾಗಿ ಇರುವ ಗೋಡಂಬಿ ಒಂದು ಕಡೆ, ಅರ್ಧ ಆಗಿರುವ ಗೋಡಂಬಿ ಒಂದುಕಡೆ ಮಾಡಿ ಪ್ರತ್ಯೇಕವಾಗಿ ಇಡಲಾಗುತ್ತದೆ. ಫಸ್ಟ್ ಕ್ವಾಲಿಟಿ, ಸೆಕೆಂಡ್ ಕ್ವಾಲಿಟಿ ಇರುತ್ತದೆ ಆದ್ದರಿಂದ ಬೆಲೆಯೂ ಬೇರೆ ಬೇರೆಯಾಗಿರುತ್ತದೆ. ನಂತರ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ಅನೇಕ ಫ್ಯಾಕ್ಟರಿಗಳಲ್ಲಿ ಕಾರ್ಮಿಕರ ಸಹಾಯದಿಂದ ಗೋಡಂಬಿಯನ್ನು ತಯಾರಿಸಲಾಗುತ್ತದೆ. ಮಕ್ಕಳು ಗೋಡಂಬಿಯನ್ನು ಹೆಚ್ಚು ಇಷ್ಟ ಪಡುತ್ತಾರೆ. ಒಂದು ಕೆ.ಜಿ ಗೋಡಂಬಿಗೆ 750ರೂ ಇದೆ. ಗೋಡಂಬಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಉಪಯೋಗವಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.