ನೂರು ರೋಗಗಳನ್ನು ಗುಣ ಪಡಿಸುವ ಅಂಶ ಇರುವಂತಹ ಒಂದು ಉತ್ತಮ ಕಷಾಯ ಅಥವಾ ಟೀ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಇದನ್ನು ನಾವು ಮನೆಯಲ್ಲಿಯೇ ನಮ್ಮ ಮನೆಯ ಅಡುಗೆ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸಿಕೊಳ್ಳಬಹುದು. ಶುದ್ಧವಾದ ಅರಿಶಿನವನ್ನು ಬಳಸಿಕೊಂಡು ನಾವು ಹಲವಾರು ರೋಗಗಳನ್ನು ಹೇಗೆ ಗುಣಪಡಿಸಿಕೊಳ್ಳಬಹುದು. ನಮ್ಮ ದೇಹದಲ್ಲಿನ ಇಷ್ಟೊಂದು ಕಾಯಿಲೆಗಳನ್ನು ಗುಣಪಡಿಸುವ ಗುಣ ಅರಿಶಿನದಲ್ಲಿ ಇದೆ ಅಂದರೆ ಅರಿಶಿನದಲ್ಲಿ ನಮ್ಮ ದೇಹದ ರೋಗವನ್ನು ತಡೆಯುವ ಮುಖ್ಯವಾದ ಗುಣಗಳು ಯಾವುದು ಇದೆ ಅಂತ ನೋಡೋಣ. ಮುಖ್ಯವಾಗಿ ಅರಿಶಿನದಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿವೈರಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿಸೆಪ್ಟಿಕ್, ಆಂಟಿ ಇನ್ಫ್ಲೋ ಮೇಟರಿ, ಆಂಟಿ ಮೈಕ್ರೋಬಯಾಲ್ ಹಾಗೂ ಆಂಟಿ ಕ್ಯಾನ್ಸರ್ ಗುಣಗಳು ಅರಿಶಿನದಲ್ಲಿ ಇದೆ. ಇಷ್ಟೆಲ್ಲ ಒಳ್ಳೆಯ ಗುಣಗಳನ್ನು ಹೊಂದಿರುವ ಅರಿಶಿನ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಬ್ಬನ್ನು ನಾಶ ಮಾಡಲು ಸಹಾಯಕವಾಗಿದೆ ಹಾಗೂ ನಮ್ಮ ದೇಹದಲ್ಲಿ ತೂಕವನ್ನು ಇಳಿಸಿಕೊಳ್ಳಲು ಸಹಾಯಕಾರಿಯಾಗಿದೆ. ಹಾಗಾಗಿ ತೂಕ ಇಳಿಸಿಕೊಳ್ಳಬೇಕು ಎಂದಿರುವವರು ಪ್ರತಿದಿನ ಅರಿಶಿಣದ ಕಷಾಯವನ್ನು ಕುಡಿಯಬೇಕು. ಅರಿಶಿಣ ನಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ ಹಾಗೂ ಅದರ ಜೊತೆಗೆ ಯಾವುದೇ ರೀತಿ ಮೆದುಳಿನ ಕಾಯಿಲೆ ಕೂಡ ಬರದಂತೆ ತಡೆಯುತ್ತದೆ. ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಅದರ ಜೊತೆಗೆ ಹೃದಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಕಾಯಿಲೆಗಳು ಬರದಂತೆ ತಡೆದು ಹೃದಯ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುತ್ತದೆ. ಅರ್ಥರಿಟಿಸ್ ಸಮಸ್ಯೆ ಇದ್ದರೆ ಅದನ್ನು ಕೂಡ ಅರಿಶಿಣ ನಿವಾರಿಸುತ್ತದೆ. ಅರಿಶಿನ ಒಂದು ಉತ್ತಮ ನೈಸರ್ಗಿಕ ನೋವು ನಿವಾರಕ ಎಂದು ಹೇಳಬಹುದು. ಚರ್ಮದ ಕಾಂತಿಯನ್ನು ಹೆಚ್ಚಿಸಿ ಬಹುಬೇಗ ವಯಸ್ಸಾಗದಂತೆ ಕಾಣುವುದರಿಂದ ಅರಿಶಿನ ನಮ್ಮನ್ನು ಕಾಪಾಡುತ್ತದೆ. ಅರಿಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಎಂಬ ಅಂಶ ನಮ್ಮ ಕೂದಲನ್ನು ಕಾಪಾಡುವಲ್ಲಿ ಸಹಾಯಕಾರಿಯಾಗಿದೆ ಕೂದಲು ಉದುರುವ ಹಾಗೆ ಹಾಗೂ ಕೂದಲು ಆಗಿರುವಂತೆ ನೋಡಿಕೊಳ್ಳುತ್ತದೆ. ಡಯಾಬಿಟೀಸ್ ಇರುವವರಿಗೆ ಕೂಡ ಅರಿಶಿನ ತುಂಬಾ ಉಪಯುಕ್ತ.
ಅರಿಶಿನ ನಮ್ಮ ಹಲ್ಲು ಮತ್ತು ವಸಡುಗಳು ಗಟ್ಟಿಯಾಗಿರುವಂತೆ ನೋಡಿಕೊಳ್ಳುತ್ತದೆ ಹಾಗೂ ಬಾಯಿಯ ದುರ್ನಾತವನ್ನು ಕೂಡ ತಡೆಗಟ್ಟುತ್ತದೆ. ಗಂಟಲಿಗೆ ಸಂಬಂಧಿಸಿದ ಯಾವುದೇ ಕಾಯಿಲೆ ಇದ್ದರೂ ಕೂಡ ಕಡಿಮೆ ಮಾಡುತ್ತದೆ ನಮ್ಮ ಜೀರ್ಣಶಕ್ತಿ ಹೆಚ್ಚಿಸಿಕೊಳ್ಳಲು ಅರಿಶಿನ ತುಂಬಾ ಸಹಾಯಕಾರಿಯಾಗಿದೆ ಹಾಗೂ ರಕ್ತ ಸಂಚಾರ ಸರಾಗವಾಗಿ ನಡೆಯಲು ಕೂಡ ಅರಿಶಿನ ಸಹಾಯಕವಾಗುತ್ತದೆ. ನಮಗೆ ಬರುವಂತಹ ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಗುಣ ಕೂಡ ಶುದ್ಧವಾದ ಅರಿಶಿನದಲ್ಲಿ ಇದೆ. ನಾವು ಇಷ್ಟೊಂದು ಪ್ರಯೋಜನವನ್ನು ಯಾವುದೇ ರಾಸಾಯನಿಕ ಮಿಶ್ರಣ ಮಾಡದೆ ಇರುವ ಪರಿಶುದ್ಧವಾದ ಅರಿಶಿಣದಿಂದ ಪಡೆದುಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಅರಿಶಿಣದ ಬಳಕೆ ಸ್ವಲ್ಪ ಕಡಿಮೆಯಾಗುತ್ತದೆ ನಮ್ಮ ದಿನನಿತ್ಯದ ಅಡುಗೆಯಲ್ಲಿ ಅರಿಶಿನದ ಬಳಕೆ ಹೆಚ್ಚಾಗಿ ಮಾಡಬೇಕಿದೆ. ಆದರೆ ರಾಸಾಯನಿಕಯುಕ್ತ ಅರಿಶಿನ ಬಳಕೆ ಮಾಡದೆ ಪರಿಶುದ್ಧವಾದ ಸಾವಯವ ರೀತಿಯಲ್ಲಿ ಬೆಳೆದ ಅರಿಶಿನವನ್ನು ಬಳಸುವುದು ಒಳ್ಳೆಯದು. ಆದರೆ ನಮ್ಮ ದೇಹದ ಆರೋಗ್ಯಕ್ಕೆ ನಾವು ಪ್ರತಿದಿನ ಅಡುಗೆಯಲ್ಲಿ ಮಾತ್ರ ಬಳಸುವ ಅರಿಶಿನದ ಪ್ರಮಾಣ ಕಡಿಮೆಯಾಗುವುದು ಹಾಗಾಗಿ ಅದರ ಜೊತೆಗೆ ಪ್ರತಿದಿನ ನಾವು ಅರಿಶಿನವನ್ನು ಕೂಡ ಮಾಡಿಕೊಂಡು ಕುಡಿಯಬೇಕಾಗುತ್ತದೆ.
ನಮ್ಮ ದೇಹದ ಆರೋಗ್ಯ ವೃದ್ಧಿಸಿಕೊಳ್ಳಲು ಸಹಾಯಕವಾಗಿರುವ ಅರಿಶಿಣದ ಕಷಾಯ ಅಥವಾ ಅರಿಶಿನದ ಟೀ ಯನ್ನು ಹೇಗೆ ಮಾಡುವುದು ಅಂತ ನೋಡೋಣ. ಸ್ಟೋವ್ ಮೇಲೆ ಒಂದು ಮಣ್ಣಿನ ಅಥವಾ ಸ್ಟೀಲಿನ ಪಾತ್ರೆ ಇಟ್ಟು, ಅದಕ್ಕೆ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ಒಂದು ಲೋಟ ನೀರನ್ನು ಹಾಕಿ ನೀರು ಸ್ವಲ್ಪ ಬಿಸಿಯಾದ ನಂತರ ಅದಕ್ಕೆ ಶುದ್ಧವಾದ ಅರಿಶಿನದ ಕೊಂಬನ್ನು ಜಜ್ಜಿ ಹಾಕಬೇಕು ಅಥವಾ ಸಾವಯವ ರೀತಿಯಲ್ಲಿ ಬೆಳೆದ ಶುದ್ಧವಾದ ಅರಿಶಿನದ ಪುಡಿಯನ್ನು ಆದರೂ ಅರ್ಧ ಚಮಚದಷ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಾಲ್ಕರಿಂದ ಐದು ನಿಮಿಷಗಳ ಕಾಲ ನೀರನ್ನು ಚೆನ್ನಾಗಿ ಕುದಿಸಬೇಕು. ಐದು ನಿಮಿಷ ಕುದಿಸಿದ ನಂತರ ಸ್ಟೋವ್ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಬೇಕು. ಇದನ್ನು ಶೋಧಿಸಿಕೊಂಡು ಉಗುರು ಬೆಚ್ಚಗೆ ಇರುವಾಗ ಅಥವಾ ತಣ್ಣಗಾದ ನಂತರ ಅರಿಶಿನ ಕಷಾಯವನ್ನು ಕುಡಿಯಬೇಕು. ಬಿಸಿ ಇರುವಾಗ ಎಂದಿಗೂ ಕೂಡ ಇದನ್ನು ಸೇವಿಸಲೇಬಾರದು. ಪ್ರತಿದಿನ ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಅರಿಶಿಣ ಟೀ ಅಥವಾ ಕಷಾಯವನ್ನು ಮಾಡಿಕೊಂಡು ಕುಡಿಯಬೇಕು. ಇದನ್ನು ಹಾಗೆ ಕುಡಿಯಲು ಕಷ್ಟ ಎನಿಸಿದರೆ ಒಂದು ಸ್ವಲ್ಪ ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಿಕೊಂಡು ಕುಡಿಯಬಹುದು. ಚಿಕ್ಕಮಕ್ಕಳಿಗಾಗಿ 10 – 20 ml ರಷ್ಟು ಮಾತ್ರ ಕೊಡಬೇಕು. ಅದೇ ಹತ್ತು ವರ್ಷ ಮೇಲ್ಪಟ್ಟವರಿಗೆ ಆದರೆ ಪ್ರತಿದಿನ 150ml ಅಷ್ಟು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಲೋಟದಷ್ಟು ಉಗುರು ಬೆಚ್ಚಗಿನ ನೀರು ಕುಡಿದ ನಂತರ ಈ ಕಷಾಯವನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಅರಿಶಿನದಲ್ಲಿ ಇರುವ ಔಷಧೀಯ ಗುಣಗಳಿಂದ ನಮ್ಮ ದೇಹದಲ್ಲಿ ಇರುವಂತಹ ನೂರು ರೋಗಗಳನ್ನು ನಿವಾರಿಸಿಕೊಳ್ಳಬಹುದು.