ಕಡಿಮೆ ಖರ್ಚಿನಲ್ಲಿ ಎಲೆಕ್ಟ್ರಿಕಲ್ ಶಾಪ್ ಇಟ್ಟುಕೊಂಡು ಹೇಗೆ ಲಾಭ ಗಳಿಸಬಹುದು ಹಾಗೂ ಈ ಬಿಸಿನೆಸ್ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ರಾಜಸ್ಥಾನದಿಂದ ಬಂದು ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಶಾಪ್ ನ್ನು ಚಂದ್ರ ಪ್ರಕಾಶ್ ಅವರು ಇಟ್ಟುಕೊಂಡು ಲಾಭ ಗಳಿಸುತ್ತಿದ್ದಾರೆ. ಇವರು 2004 ರಲ್ಲಿ 15 ವರ್ಷದ ಹಿಂದೆ ಅಂಗಡಿಯನ್ನು ಶುರುಮಾಡಿದ್ದಾರೆ. ಅಂಗಡಿಗೆ 1 ಲಕ್ಷ ಅಡ್ವಾನ್ಸ್ ಕೊಟ್ಟಿದ್ದಾರೆ ಮಟೀರಿಯಲ್ಸ್ ಗೆ 1 ಲಕ್ಷ ಖರ್ಚು ಮಾಡಿದ್ದಾರೆ. ಈಗ 3 ಲಕ್ಷ ಬೇಕಾಗುತ್ತದೆ. ಇವರು ಭಾವ, ತಂದೆ ಹಾಗೂ ಫ್ರೆಂಡ್ಸ್ ಹತ್ತಿರ ಹಣ ಪಡೆದು ಶಾಪ್ ಮಾಡಿದ್ದಾರೆ. ಶಾಪ್ ಮಾಡಲು ಕಾರ್ಪೊರೇಷನ್ ಇಂದ ಲೈಸೆನ್ಸ್ ಬೇಕು ಮತ್ತು ಜಿ. ಎಸ್. ಟಿ ನಂಬರ್ ಬೇಕು ಇದಕ್ಕೆ 2-3,000 ರೂ ಖರ್ಚಾಗುತ್ತದೆ. ಬೆಂಗಳೂರಿನ ಚಿಕ್ಕಪೇಟೆ ಮತ್ತು ಎಸ್.ಪಿ ರೋಡ್ ಇಲ್ಲಿಂದ ಎಲೆಕ್ಟ್ರಿಕಲ್ ಐಟಮ್ಸ್ ಗಳನ್ನು ತರಲಾಗುತ್ತದೆ. ಪ್ರಾರಂಭದಲ್ಲಿ ಸ್ವಲ್ಪ ಐಟಮ್ಸ್ ಗಳನ್ನು ತರುವುದು ಒಳ್ಳೆಯದು.
ರೀಟೇಲಲ್ಲಿ ಸೇಲ್ ಮಾಡಿದಾಗ 20% ಮಾರ್ಜಿನ್ ಸಿಗುತ್ತದೆ. ಸಣ್ಣ ಶಾಪ್ ಮಾಡಿದರೆ 20-30,000ರೂ ಗಳನ್ನು ಆದಾಯ ಗಳಿಸಬಹುದು. ದೊಡ್ಡ ಶಾಪ್ ಆದರೆ 1-2 ಲಕ್ಷ ಆದಾಯ ಗಳಿಸಬಹುದು. ಮಾರ್ಕೆಟಿಂಗ್ ಉತ್ತಮವಾಗಿರುವ ಏರಿಯಾಗಳಲ್ಲಿ ಶಾಪ್ ಇಟ್ಟುಕೊಳ್ಳಬೇಕು ಇದರಿಂದ ಹೆಚ್ಚು ಲಾಭ ಗಳಿಸಬಹುದು. ಒಟ್ಟಾರೆಯಾಗಿ ಎಲೆಕ್ಟ್ರಿಕಲ್ ಶಾಪ್ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಲಾಭ ಗಳಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.