How to fat control kannada health tips: ದೇಹವು ಆರೋಗ್ಯಕರ ತೂಕ ಹೊಂದಿರುವುದಕ್ಕಿಂತ ಹೆಚ್ಚು ತೂಕ ಹೊಂದಿದ್ದರೆ ಅದನ್ನು ಬೊಜ್ಜು ಎನ್ನಬಹುದು. ಈ ಬೊಜ್ಜಿನ ಪ್ರಮಾಣ ಬಹಳ ಹೆಚ್ಚಾದರೆ ಅದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಮಾಡುವುದು ಅದನ್ನು ಅಸ್ವಸ್ಥ ಸ್ಥೂಲಕಾಯತೆ ಎನ್ನುತ್ತಾರೆ. ನಾವು ತಿಂದ ಆಹಾರ ನಮ್ಮ ದೇಹದ ಚಟುವಟಿಕೆ ನೆಡಸುವುದರ ಸಲುವಾಗಿ ನಮ್ಮ ದೇಹ ಕ್ಯಾಲೊರಿಗಳನ್ನು ಬಳಸಿಕೊಳ್ಳುತ್ತದೆ. ವಿಶ್ರಾಂತಿಯ ಸಮಯದಲ್ಲೂ ಸಹ ಹೃದಯವನ್ನು ಪಂಪ್ ಮಾಡಲು ಅಥವಾ ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಕ್ಯಾಲೊರಿಗಳ ಅಗತ್ಯವಿದೆ. ಒಂದು ವೇಳೆ ಆಹಾರ ಹೆಚ್ಚಾಗಿ ಆ ಕ್ಯಾಲೊರಿಗಳನ್ನು ಬಳಸಲಾಗದ ಸಂದರ್ಭದಲ್ಲಿ ದೇಹ ಅವುಗಳನ್ನು ಕೊಬ್ಬು ರೂಪದಲ್ಲಿ ಸಂಗ್ರಹಿಸುತ್ತದೆ. ನಾವು ದೈನಂದಿನ ಚಟುವಟಿಕೆಗಳಲ್ಲಿ ಮತ್ತು ವ್ಯಾಯಾಮದ ಸಮಯದಲ್ಲಿ ಬಳಸಬಹುದಾದ ಪ್ರಮಾಣಕ್ಕಿಂತ ಹೆಚ್ಚು ತಿನ್ನುವುದನ್ನು ಮುಂದುವರಿಸಿದರೆ ನಮ್ಮ ದೇಹ ಹೆಚ್ಚಾದ ಕ್ಯಾಲೊರಿಗಳನ್ನು ಕೂಡಿಡಲು ಕೊಬ್ಬು ಸಂಗ್ರಹದ ಕಣಜವನ್ನು ನಿರ್ಮಿಸಲು ಆರಂಬಿಸುತ್ತದೆ. ಹಾಗಾದರೆ ನಾವು ಹೇಗೆ ಅದೂ ಮನೆಯಲ್ಲಿಯೇ ಸುಲಬವಾಗಿ ಈ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ತೂಕ ಅತಿಯಾಗಿ ಹೆಚ್ಚಾದರೆ ಇದರಿಂದ ಮಂಡಿನೋವು, ಅರ್ನಿಯ, ಹೃದಯದ ಕಾಯಿಲೆಗಳು, ಬಿಪಿ, ಶುಗರ್ , PCOD , ಮುಟ್ಟಿನ ಸಮಸ್ಯೆ ಮಕ್ಕಳಾಗದೇ ಇರುವುದು ಇನ್ನೂ ಅನೇಕಾನೇಕ ಸಮಸ್ಯೆಗಳು ಉಂಟಾಗುತ್ತವೆ ಅದೇ ನಾವು ತೂಕವನ್ನು ಇಳಿಸಿಕೊಂಡರೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಮೊದಲು ಬೊಜ್ಜು ಬರಲು ಮುಖ್ಯ ಕಾರಣ ಏನು ಎನ್ನುವುದನ್ನು ನೋಡುವುದಾದರೆ , ಸತೈಟಿ ಹಾರ್ಮೋನ್ ಅಂದರೆ ಸಮಾಧಾನದ ಹಾರ್ಮೋನ್ ಗಳು . ಇದು ಹೇಗೆ ಬರುತ್ತದೆ ಎಂದರೆ ನಾವು ಸೇವಿಸುವ ಆಹಾರದಿಂದ ಬೊಜ್ಜು ಬರಬಹುದು ಅಥವಾ ತಂದೆಯಿಂದ ಮಕ್ಕಳಿಗೆ ಅಂದರೆ ಅನುವಂಶೀಯವಾಗಿ ಬೊಜ್ಜು ಬರಬಹುದು ಎಂದು ನಾವು ಈ ರೀತಿಯ ಅನೇಕ ತಪ್ಪು ಕಲ್ಪನೆಗಳು ನಮ್ಮಲ್ಲಿ ಇದೆ. ಆದರೆ ನಿಜವಾಗಿ ನಮ್ಮ ದೇಹದ ಬೊಜ್ಜಿಗೆ ಕಾರಣ ಹಾರ್ಮೋನುಗಳ ವ್ಯತ್ಯಾಸ. ಈ ಹಾರ್ಮೋನ್ ಗಳು ನಮ್ಮ ದೇಹದಲ್ಲಿ ಹೆಚ್ಚಾದ ಕಾರ್ಬೋಹೈಡ್ರೇಟ್ ಇವುಗಳಿಂದ ವ್ಯತ್ಯಾಸ ಉಂಟಾಗುವುದು.

ಸಾಮಾನ್ಯವಾಗಿ ನಾವು ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಿದಾಗ ಹೊಟ್ಟೆಯಲ್ಲಿ ಗ್ರೆಲಿನ್ ಎಂಬ ಹಾರ್ಮೋನ್ ಬಿಡುಗಡೆ ಆಗುತ್ತದೆ ಇದು ನಮ್ಮ ದೇಹದಲ್ಲಿ ಇನ್ಸುಲಿನ್ ಅಂಶವನ್ನು ಹೆಚ್ಚಾಗಿ ಬಿಡುಗಡೆ ಮಾಡುವ ಹಾಗೆ ಮಾಡುತ್ತದೆ. ನಮ್ಮ ದೇಹದಲ್ಲಿ ಇನ್ಸುಲಿನ್ ಅಂಶ ಹೆಚ್ಚಾದಾಗ ನಮಗೆ ಮತ್ತೆ ಹಸಿವಾಗುವುದು. ಹಸಿವಾದಾಗ ಎಲ್ಲಾ ಮತ್ತೆ ಮತ್ತೆ ಏನಾದರೂ ತಿನ್ನುತ್ತಲೇ ಇರುತ್ತೇವೆ ಈ ಪ್ರಕ್ರಿಯೆ ಪರಿವರ್ತನೆ ಆಗುತ್ತಲೇ ಇದ್ದಾಗ ನಮ್ಮ ಮೆದುಳಿನಲ್ಲಿ ಇರುವ ಸತೈಟ್ ಕೇಂದ್ರ ಸಮಾಧಾನ ಆಗದೇ ಮತ್ತೆ ಮತ್ತೆ ತಿನ್ನುತ್ತಲೇ ಇರುತ್ತೇವೆ. ನಾವು ಜಾಸ್ತಿ ಕೊಬ್ಬಿನ ಆಹಾರ ಸೇವಿಸಿದಾಗ ಅದರಲ್ಲೂ ಉತ್ತಮ ಕೊಬ್ಬಿನ ಆಹಾರ ಸೇವನೆ ಮಾಡಿದಾಗ ಅದು ಲೆಪ್ಟಿನ್ ಮತ್ತು ಕೊಲೆಸಿಸ್ಟೋಕೈನಿನ್ ಎಂಬ ಹಾರ್ಮೋನ್ ಬಿಡುಗಡೆ ಆಗಿ ಇದು ಮೆದುಳಿನ ಸಮಾಧಾನಕರ ಭಾಗಕ್ಕೆ ಆಹಾರ ತಿನ್ನುವುದು ಸಾಕು ಎಂದು ಸೂಚನೆ ನೀಡುತ್ತದೆ. ಮೆದುಳಿನಲ್ಲಿ ಇರುವ ಸಮಾಧಾನ ಕೇಂದ್ರಕ್ಕೆ ನಾವು ಯಾವ ರೀತಿಯ ಆಹಾರ ಕೊಡುತ್ತೇವೆ ಎನ್ನುವುದರ ಮೇಲೆ ನಮ್ಮ ದೇಹದ ಬೊಜ್ಜು ಹೆಚ್ಚಾಗುವುದು ನಿರ್ಧಾರವಾಗಿರುತ್ತದೆ.

ಹಾಗಾಗಿ ನಾವು ನಮ್ಮ ದೇಹದಲ್ಲಿ ಉತ್ತಮ ಹಾರ್ಮೋನ್ ಗಳ ಬಿಡುಗಡೆ ಆಗಲು ಒಳ್ಳೆಯ ಆಹಾರಗಳನ್ನು ಸೇವಿಸಬೇಕು ಮೆದುಳಿನ ಸಮಾಧಾನ ಕೇಂದ್ರಕ್ಕೆ ಬೇಗನೆ ಹೊಟ್ಟೆ ತುಂಬಿದ ಅನುಭವ ಬರಬೇಕು ಅಂದರೆ ಒಳ್ಳೆಯ ಕೊಬ್ಬಿನ ಆಹಾರಗಳಾದ ತುಪ್ಪ ಬೆಣ್ಣೆ ಮೊಸರು ಉತ್ತಮ ಪ್ರೊಟೀನ್ ಇರುವ ಆಹಾರಗಳನ್ನು ಸೇವಿಸಬೇಕು ಎಂದು. ನಾವು ಹೆಚ್ಚು ಹೆಚ್ಚು ಕೊಬ್ಬು ಇರುವ ಆಹಾರಗಳನ್ನು ಸೇವಿಸುತ್ತಾ ಹೋದ ಹಾಗೆ ನಮ್ಮ ದೇಹದಲ್ಲಿ ಕೊಬ್ಬಿನ ಅಂಶ ಕೂಡಾ ಹೆಚ್ಚುತ್ತಾ ಹೋಗುತ್ತದೆ ಎಂದು ಹೇಳುತ್ತಾರೆ ಡಾಕ್ಟರ್ ವೆಂಕಟರಮಣ ಹೆಗಡೆ ನಿಸರ್ಗ ಮನೆ ಸಿರ್ಸಿ ಇವರು.
ನುರಿತ, ಪರಿಣಿತ ವೈದ್ಯರ ತಂಡ ಜನರಿಗೆ ಈ ಕೊಬ್ಬು , ಬೊಜ್ಜು ಇಂತಹ ಸಮಸ್ಯೆಗಳಿಂದ ಹೊರ ಬರಲು ಸಹಾಯ ಮಾಡಲು ಸಿದ್ಧವಾಗಿದೆ ಯಾರೂ ಬೇಕಿದ್ದರೂ ಉಚಿತವಾಗಿ ಬೊಜ್ಜು ಕರಗಿಸಿಕೊಳ್ಳಲು ವೈದ್ಯರ ಮಾರ್ಗದರ್ಶನ ಪಡೆಯಲು ನಿಸರ್ಗ ಮನೆ ಇಲ್ಲಿನ ಮೆಂಬರ್ ಆಗಬಹುದು ಎನ್ನುತ್ತಾರೆ ಡಾಕ್ಟರ್ ವೆಂಕಟರಮಣ ಹೆಗಡೆ ಅವರು. ಒಂದು ಫೋನ್ ಕಾಲ್ ಮಾಡುವ ಮೂಲಕ ಮೆಂಬರ್ ಆಗಬಹುದು. 7406853563/ 9448729434 ಈ ನಂಬರ್ ಗೆ ಕರೆ ಮಾಡುವ ಮೂಲಕ ಮಾರ್ಗದರ್ಶನ ಪಡೆಯಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಆಗಿರುತ್ತವೆ. ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!