ನಾವು ಸಾಕಷ್ಟು ತಂಪುಪಾನೀಯಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಹಾಗೆ ಹೊರಗಡೆ ಸಾಕಷ್ಟು ತಂಪು ಪಾನೀಯಗಳನ್ನು ಸಹ ನಾವು ಸೇವಿಸುತ್ತೇವೆ. ಆದರೆ ಅವುಗಳಿಂದ ಎಂತಹ ದುಷ್ಪರಿಣಾಮಗಳು ಆಗುತ್ತವೆ ಎನ್ನುವುದು ನಮಗೆ ತಿಳಿದಿರುವುದಿಲ್ಲ. ಕೆಲವೊಂದಿಷ್ಟು ತಂಪುಪಾನೀಯಗಳು ನಮ್ಮ ಮೇಲೆ ಸಾಕಷ್ಟು ದುಷ್ಪರಿಣಾಮಗಳನ್ನು ಬೀರುತ್ತವೆ, ಉದಾಹರಣೆಗೆ ತಂಪು ಪಾನೀಯಗಳಲ್ಲಿ ಒಂದಾದಂತಹ ಸೋಡವನ್ನು ತೆಗೆದುಕೊಳ್ಳೋಣ. ಸಾಕಷ್ಟು ಜನರು ಪ್ರತಿನಿತ್ಯ ಸೋಡಾವನ್ನು ಬಳಸುತ್ತಿರುತ್ತಾರೆ, ಈ ರೀತಿ ನಾವು ಪ್ರತಿನಿತ್ಯ ಸೋಡಾವನ್ನು ಬಳಸುತ್ತಿರುವುದರಿಂದ ಇದು ನಮ್ಮ ದೇಹದ ಮೇಲೆ ಸಾಕಷ್ಟು ದುಷ್ಪರಿಣಾಮವನ್ನು ಬೀರುತ್ತದೆ. ಪ್ರತಿನಿತ್ಯ ಸೋಡಾವನ್ನು ತೆಗೆದುಕೊಳ್ಳುವುದರಿಂದ ನಮ್ಮ ದೇಹದಲ್ಲಿ ಯಾವ ರೀತಿಯ ಬದಲಾವಣೆ ಆಗುತ್ತದೆ ನಮ್ಮ ದೇಹದ ಮೇಲಾಗುವ ದುಷ್ಪರಿಣಾಮಗಳು ಏನು ಅನ್ನೋದರ ಬಗ್ಗೆ ಲೇಖನದ ಮೂಲಕ ತಿಳಿದುಕೊಳ್ಳೋಣ.
ನಾವು ಅತಿ ಹೆಚ್ಚು ಸೋಡಾವನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಶುಗರ್ ಲೆವೆಲ್ ಜಾಸ್ತಿ ಆಗುತ್ತದೆ. ಸಕ್ಕರೆ ಮಟ್ಟ ನಮ್ಮ ದೇಹದಲ್ಲಿ ಹೆಚ್ಚಾದಂತೆಯೇ ರಕ್ತದೊತ್ತಡ ಸಮಸ್ಯೆ ಸಹ ಉಂಟಾಗುತ್ತದೆ. ಈ ಮೂಲಕ ಸೋಡಾ ಡಯಾಬಿಟಿಸ್ ಗೆ ಮುಖ್ಯ ಕಾರಣ ಆಗುತ್ತದೆ. ಹಾಗೆ ಅತಿಯಾಗಿ ಸೋಡವನ್ನು ಸೇರಿಸುವುದರಿಂದ ನಮ್ಮ ದೇಹದಲ್ಲಿ ಬೇಡವಾದ ಕೊಬ್ಬು ಜಾಸ್ತಿ ಆಗಿ ಶೇಖರಣೆಯಾಗಿ ಇದು ನಮ್ಮ ದೇಹದ ತೂಕ ಅತಿಯಾಗಿ ಹೆಚ್ಚಾಗಲು ಕಾರಣವಾಗುತ್ತದೆ. ಹಾಗೆ ಸೋಡವನ್ನು ಅತಿ ಹೆಚ್ಚಾಗಿ ಸೇವನೆ ಮಾಡುವುದರಿಂದ ಕರಳು ಹಾಗೂ ಕಿಡ್ನಿ ಸಂಬಂಧಿತ ಕಾಯಿಲೆಗಳು ಅತಿ ಹೆಚ್ಚಾಗಿ ಬರುತ್ತದೆ. ಈ ಮೂಲಕ ನಮ್ಮ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ನಾವು ಕಾಣಬಹುದು. ಹಾಗಾಗಿ ನಾವು ಸೋಡಾ ಸೇವನೆಯನ್ನು ಕಡಿಮೆ ಮಾಡಬೇಕು. ಅದೂ ಅಲ್ಲದೆ ನಾವು ಸೋಡ ಸೇವನೆ ಮಾಡುವುದು ಬಾಯಿಯಿಂದ ಹಾಗೆ ನಮ್ಮ ಹಲ್ಲುಗಳನ್ನು ದಾಟಿಕೊಂಡು ಒಳಗೆ ಹೋಗುತ್ತದೆ. ಹೀಗೆ ಹಲ್ಲುಗಳಿಂದ ದಾಟಿ ಹೋಗುವಾಗ ಹಲ್ಲುಗಳು ಹುಳುಕು ಆಗುತ್ತದೆ ಹಾಗೂ ಹಲ್ಲುಗಳ ಸಮಸ್ಯೆ ಉಂಟಾಗುತ್ತವೆ. ಮೂಳೆಗಳ ಸವೆತ ಕೂಡಾ ಉಂಟಾಗುತ್ತದೆ. ಕೈ ಕಾಲು ನೋವು , ಕೀಲುನೋವು ಸಹ ಉಂಟಾಗುತ್ತದೆ.
ನಾವು ಅತಿಯಾಗಿ ಸೋಡಾ ಸೇವನೆ ಮಾಡುವುದರಿಂದ ನಮ್ಮ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತವೆ ಹಾಗೂ ಅತೀ ಚಿಕ್ಕ ವಯಸ್ಸಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಅದೇ ರೀತಿಯಲ್ಲಿ ಕಿಡ್ನಿಗೆ ಸಂಬಂಧಿಸಿದ ಕಾಯಿಲೆ ಬರುವುದಕ್ಕೂ ಕೂಡಾ ಜಾಸ್ತಿ ಸಮಯ ಏನೂ ತೆಗೆದುಕೊಳ್ಳುವುದಿಲ್ಲ. ನಾವು ಇಂತಹ ಕಾಯಿಲೆ ಬರುವುದನ್ನು ತಡೆಯಬೇಕು ಅಂದರೆ ಮೊದಲು ಸೋಡಾ ಸೇವನೆಯನ್ನು ನಿಲ್ಲಿಸಬೇಕು. ಸೋಡಾ ಬದಲು ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು. ದಿನಕ್ಕೆ ಎರಡರಿಂದ ಎರಡೂವರೆ ಲೀಟರ್ ಅಷ್ಟು ನೀರನ್ನು ಕುಡಿಯಬೇಕು. ಅತಿಯಾಗಿ ಸೋಡಾ ಸೇವನೆ ಮಾಡುವವರು ಅತೀ ಚಿಕ್ಕ ವಯಸ್ಸಿಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ ಅತಿಯಾಗಿ ಸೋಡಾ ಸೇವನೆಯನ್ನು ಬಿಡಬೇಕು. ನಿಮಗೆ ಈ ಆರೋಗ್ಯಕಾರಿ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ. ಇನ್ನು ಪ್ರತಿದಿನ ಉಪಯುಕ್ತ ವಿಚಾರಗಳನ್ನು ತಿಳಿದುಕೊಳ್ಳಲು ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.