ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೇ ಇಲ್ಲವೇ, ಊರಿನವರ ಹೆಸರು ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬೇಕಾದರೆ ಗ್ರಾಮಪಂಚಾಯಿತಿಗಳಿಗೆ ಅಲೆದಾಡಬೇಕಾಗುತ್ತದೆ. ಆದರೆ ಸುಲಭವಾಗಿ ಮೊಬೈಲ್ ನಲ್ಲಿ ಮತದಾರರ ಪಟ್ಟಿಯಲ್ಲಿ ಯಾರ ಯಾರ ಹೆಸರು ಇದೆ ಹಾಗೂ ಡಿಲೀಟ್ ಆಗಿರುವವರ ಹೆಸರು, ಹೊಸದಾಗಿ ಸೇರ್ಪಡೆಗೊಂಡಿರುವವರ ಹೆಸರನ್ನು ನೋಡಬಹುದು. ಅದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮೊದಲು ಬ್ರೌಸಿಂಗ್ ಅಪ್ಲಿಕೇಷನ್ ಅಂದರೆ ಗೂಗಲ್, ಕ್ರೋಮ್ ಹೀಗೆ ಯಾವುದೇ ಅಪ್ಲಿಕೇಷನ್ ಅನ್ನು ಓಪನ್ ಮಾಡಿ ಅದರಲ್ಲಿ co.karnataka.kar.nic.in ಎಂದು ಟೈಪ್ ಮಾಡಿ ಸರ್ಚ್ ಮಾಡಬೇಕು. ಆಗ ಒಂದು ಅಫೀಷಿಯಲ್ ಪೇಜ್ ಓಪನ್ ಆಗುತ್ತದೆ. ನಂತರ ಜೂಮ್ ಮಾಡಿ ಅಲ್ಲಿ ವ್ಯೂ ಎಲೆಕ್ಟ್ರೋ ರೂಲ್ 2020-2021 ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು. ನಂತರ ನಮಗೆ ಯಾವ ಜಿಲ್ಲೆ ಬೇಕೊ ಆ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು.
ನಂತರ ಬೇಕಾದ ತಾಲೂಕನ್ನು ಸೆಲೆಕ್ಟ್ ಮಾಡಬೇಕು. ನಂತರ ಊರಿನ ವಾರ್ಡ್ ನಂಬರ್ ತಿಳಿದಿರಬೇಕು ಅದನ್ನು ಸೆಲೆಕ್ಟ್ ಮಾಡಿ ಎಮ್ ಆರ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ಕ್ಯಾಪನ ಸರಿಯಾಗಿ ಎಂಟರ್ ಮಾಡಬೇಕು ನಂತರ ಕೆಳಗೆ ಡೌನ್ಲೋಡ್ ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪಿಡಿಎಫ್ ಡೌನ್ಲೋಡ್ ಆಗುತ್ತದೆ ಹೆಚ್ಚು ಇದ್ದರೆ 30-35 ಪೇಜ್ ಬರುತ್ತದೆ. ಊರಿನ ಎಲ್ಲರ ಹೆಸರು ತೋರಿಸುತ್ತದೆ, ಊರಿನಲ್ಲಿ ಎಷ್ಟು ಜನರಿದ್ದಾರೆ, ಎಷ್ಟು ಮಹಿಳೆಯರಿದ್ದಾರೆ, ಪುರುಷರಿದ್ದಾರೆ ಎಂದು ತಿಳಿಯುತ್ತದೆ. ಡಿಲೀಟ್ ಆಗಿರುವವರ ಹೆಸರಿನ ಮೇಲೆ ಡಿಲಿಟೆಡ್ ಎಂದು ಬಂದಿರುತ್ತದೆ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ.
ಕೊನೆಯಲ್ಲಿ ಹೊಸ ಸೇರ್ಪಡೆ ಎಂದು ಇರುತ್ತದೆ ಅಲ್ಲಿ ಹೊಸದಾಗಿ ಸೇರಿರುವ ಹೆಸರುಗಳನ್ನು ನೋಡಬಹುದು. ತಿದ್ದುಪಡಿ ಆದವರ ಬಗ್ಗೆಯೂ ತಿಳಿಯಬಹುದು. ಸೈಡ್ ಇರುವ 3 ಡಾಟ್ ಮೇಲೆ ಕ್ಲಿಕ್ ಮಾಡಿದರೆ ಸೆಂಡ್ ಫೈಲ್ ಎಂದು ಬರುತ್ತದೆ ಅದನ್ನು ಕ್ಲಿಕ್ ಮಾಡಿದರೆ ವಾಟ್ಸಪ್ ನಲ್ಲಿ ಶೇರ್ ಮಾಡಬಹುದು. ಪ್ರಿಂಟ್ ಎಂದು ಇರುವುದನ್ನು ಕ್ಲಿಕ್ ಮಾಡಿದರೆ ಪ್ರಿಂಟ್ ತೆಗೆದುಕೊಳ್ಳಬಹುದು. ಹೀಗೆ ಮೊಬೈಲ್ ನಲ್ಲಿ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬಹುದು ಇದಕ್ಕೆ ಹಣ ಖರ್ಚು ಮಾಡಬೇಕಾಗಿಲ್ಲ ಜೊತೆಗೆ ಹೆಚ್ಚು ಸಮಯ ಕೂಡ ವ್ಯರ್ಥ ಆಗುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.