ನಿಮ್ಮ ಗ್ರಾಮ ಪಂಚಾಯತಿಯಲ್ಲಿ ವರ್ಷ ಎಷ್ಟು ಬಜೆಟ್ ಬರುತ್ತದೆ,ಯಾವ ಕಾಮಗಾರಿಗಳು ಚಾಲ್ತಿಯಲ್ಲಿದೆ, ಸದಸ್ಯರ ವಿವರ,ಊರಿನವರ ಮನೆ ಟ್ಯಾಕ್ಸ್ ಬ್ಯಾಲೆನ್ಸ್, ಗ್ರಾಮ ಪಂಚಾಯತಿಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮೊದಲಿಗೆ ಮೊಬೈಲನಲ್ಲಿ ಬ್ರೌಸರ್ ಓಪನ್ ಮಾಡಿ ಅಡ್ರೆಸ್ ಬಾರನಲ್ಲಿ ಪಂಚತಂತ್ರ ಅಂತ ಟೈಪ್ ಮಾಡಿ ಸರ್ಚ್ ಮಾಡಿ. ನಂತರ ಕೆಳಗೆ ಬಂದಿರುವ ಪಂಚತಂತ್ರಕ್ಕೆ ಕ್ಲಿಕ್ ಮಾಡಿದರೆ ವೆಬ್ ಸೈಟ್ ಓಪನ್ ಆಗುತ್ತದೆ. ಈ ವೆಬ್ ಸೈಟ್ ನ್ನು ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ನಿರ್ವಹಿಸುತ್ತದೆ. ಪಂಚತಂತ್ರ ಡಾಟ್ ಕೆ.ಎ.ಆರ್ ಡಾಟ್ ಎನ್.ಐ.ಸಿ ಡಾಟ್ ಇನ್ ಈ ವೆಬ್ ಸೈಟ್ ನ ಹೆಸರು. ಈ ವೆಬ್ ಸೈಟ್ ನಲ್ಲಿ ಅಲರ್ಟ್ಸ್ ಎಂಡ್ ಲಿಂಕ್ಸ್ ಕೆಳಗೆ ಪಂಚತಂತ್ರ ಪಂಚಾಯತಿ ಅಂತರ್ಜಾಲ ತಾಣ ಇದರ ಮೇಲೆ ಕ್ಲಿಕ್ ಮಾಡಿ ನಂತರ ಲೆಫ್ಟ್ ಸೈಡ್ ಕರ್ನಾಟಕ ಮ್ಯಾಪ್ ಇದೆ ಅದರಲ್ಲಿ ಬೇಕಾದ ಜಿಲ್ಲೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಜಿಲ್ಲೆಯ ಮ್ಯಾಪ್ ಬರುತ್ತದೆ ಅದರಲ್ಲಿ ಬೇಕಾದ ತಾಲ್ಲೂಕ ಕ್ಲಿಕ್ ಮಾಡಿದರೆ ರೈಟ್ ಸೈಡ್ ಆ ತಾಲೂಕಿನ ಹಳ್ಳಿಗಳ ಹೆಸರು ಬರುತ್ತದೆ. ಬೇಕಾದ ಹಳ್ಳಿಯ ಮೇಲೆ ಕ್ಲಿಕ್ ಮಾಡಿದರೆ ಆ ಗ್ರಾಮದ ಸಂಪೂರ್ಣ ಮಾಹಿತಿ ಸಿಗುತ್ತದೆ. ತಾಲೂಕಿನಿಂದ ಎಷ್ಟು ದೂರವಿದೆ, ಆ ಗ್ರಾಮದಲ್ಲಿ ಯಾವ ದೇವಸ್ಥಾನ ಪ್ರಸಿದ್ಧವಾಗಿದೆ ಎಂಬಿತ್ಯಾದಿ ಮಾಹಿತಿ ದೊರೆಯುತ್ತದೆ.
ಮೇಲ್ಗಡೆ ಸದಸ್ಯರು ಕ್ಲಿಕ್ ಮಾಡಿದರೆ ಗ್ರಾಮ ಪಂಚಾಯತಿಯಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ಅವರ ಹೆಸರು, ಫೋನ್ ನಂಬರ್ ನೋಡಬಹುದು, ಈ ಹಿಂದೆ ಯಾರೆಲ್ಲ ಸದಸ್ಯರಿದ್ದಾರೆ ಎಂಬುದನ್ನು ನೋಡಬಹುದು. ಮೇಲ್ಗಡೆ ಯೋಜನೆಗಳು ಕ್ಲಿಕ್ ಮಾಡಿದರೆ ಯಾವ ಯಾವ ಯೋಜನೆಗಳು ಬಂದಿವೆ ಸರ್ಕಾರದಿಂದ, ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ನಂತರ ಪ್ರಗತಿ ಕಾಮಗಾರಿಗಳು ಮೇಲೆ ಕ್ಲಿಕ್ ಮಾಡಿದರೆ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಹಳ್ಳಿಗಳಿಗೆ ಯಾವ ಯಾವ ಕಾಮಗಾರಿಗಳು ನಡೆಯುತ್ತಿವೆ, ಸರ್ಕಾರದಿಂದ ಎಷ್ಟು ಹಣ ಮಂಜೂರಾಗಿದೆ ಎನ್ನುವ ಮಾಹಿತಿಯನ್ನು ಪಡೆಯಬಹುದು. ಮೇಲ್ಗಡೆ ಇರುವ ಫಲಾನುಭವಿಗಳು ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಿಮ್ಮ ಹಳ್ಳಿಯನ್ನು ಸೆಲೆಕ್ಟ್ ಮಾಡಿಕೊಂಡು ಯಾರಿಗೆ ಮನೆ ಬಂದಿದೆ ಎನ್ನುವ ಲಿಸ್ಟ್ ನೋಡಬಹುದು. ಮೇಲ್ಗಡೆ ಅಧಿಕಾರಿಗಳು ಕ್ಲಿಕ್ ಮಾಡಿದರೆ ಎಷ್ಟು ಜನ ಅಧಿಕಾರಿಗಳು ಇದ್ದಾರೆ ಅವರು ಯಾವ ಖಾತೆ ಹೊಂದಿದ್ದಾರೆ ಎನ್ನುವುದನ್ನು ನೋಡಬಹುದು. ಮೇಲ್ಗಡೆ ತೆರಿಗೆಗಳು ಕ್ಲಿಕ್ ಮಾಡಿದರೆ ಪಂಚಾಯತ ವ್ಯಾಪ್ತಿಯ ಯಾವ ಹಳ್ಳಿಯಲ್ಲಿ ಎಷ್ಟು ಜನರ ಮನೆ ಟ್ಯಾಕ್ಸ್ ಬಾಕಿ ಇದೆ ಎನ್ನುವುದನ್ನು ನೋಡಬಹುದು. ಮೇಲ್ಗಡೆ ಆಸ್ತಿಗಳು ಮೇಲೆ ಕ್ಲಿಕ್ ಮಾಡಿದರೆ ಪಂಚಾಯತದಲ್ಲಿ ಸರ್ಕಾರದ ಆಸ್ತಿಗಳು ಎಷ್ಟಿದೆ ಎಂದು ತಿಳಿಯಬಹುದು. ಮೇಲ್ಗಡೆ ಇರುವ ಬ್ಯಾಲೆನ್ಸ್ ಶೀಟ್ ಕ್ಲಿಕ್ ಮಾಡಿದರೆ ಪಂಚಾಯತಕ್ಕೆ ಎಷ್ಟು ಹಣ ಬಂದಿದೆ, ಎಷ್ಟು ಖರ್ಚಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ಮೇಲ್ಗಡೆ ಇರುವ ಅರ್ಜಿಸ್ಥಿತಿ ಮೇಲೆ ಕ್ಲಿಕ್ ಮಾಡಿದರೆ ಯಾರೆಲ್ಲ ಅರ್ಜಿ ಹಾಕಿದ್ದಾರೆ, ಯಾವಯಾವುದಕ್ಕೆ ಎಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.