ಈ ಲಕ್ಷಣಗಳು ನಿಮ್ಮಲ್ಲಿ ಇದ್ರೆ ಬಿಪಿ ಸಮಸ್ಯೆ ಇರಬಹುದು ಖಚಿತ ಪಡಿಸಿಕೊಳ್ಳಿ

0 9

ರಕ್ತದೊತ್ತಡ, ಬ್ಲಡ್ ಪ್ರೆಶರ್ ಎಂದು ಕರೆಯಲ್ಪಡುವ ಬಿಪಿ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸರ್ವೇಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ರಕ್ತದೊತ್ತಡ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಹೆಚ್ಚುತ್ತಲೇ ಇರುತ್ತದೆ. ಇದಕ್ಕೆ ಮುಖ್ಯವಾದ ಕಾರಣ ನಮ್ಮ ಜೀವನಶೈಲಿ , ಆಹಾರ ಪದ್ಧತಿ ಇವುಗಳೇ ಕಾರಣವಾಗಿರುತ್ತದೆ. ಮನುಷ್ಯನಿಗೆ ದೇಹದಲ್ಲಿ ರಕ್ತದ ಒತ್ತಡ ಅತಿಯಾದರೂ ತೊಂದರೆ ತಪ್ಪಿದ್ದಲ್ಲ ಹಾಗೆ ಕಡಿಮೆಯಾದರೂ ಕೂಡ ತೊಂದರೆ ತಪ್ಪಿದ್ದಲ್ಲ. ನಮಗೆ ರಕ್ತದ ಒತ್ತಡ ಇದೆಯೋ ಇಲ್ಲವೋ ಎನ್ನುವುದರ ಕುರಿತು ನಿಖರವಾಗಿ ತಿಳಿಯಲು ಕೆಲವೊಮ್ಮೆ ಸಾಧ್ಯವಾಗದಿರಬಹುದು. ಹೀಗೆ ಆಗುವುದರಿಂದ ನಮಗೆ ಇನ್ನಷ್ಟು ಸಮಸ್ಯೆ ಹೆಚ್ಚಾಗಲು ಮೂಲ ಕಾರಣವಾಗುತ್ತದೆ. ಹಾಗಾಗಿ ನಾವು ನಮಗೆ ರಕ್ತದ ಒತ್ತಡ ಇದೆಯೋ ಇಲ್ಲವೋ ಎನ್ನುವುದನ್ನು ಸುಲಭವಾಗಿ ಪರೀಕ್ಷಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ವೈದ್ಯರ ಬಳಿ ಹೋಗುವ ಮುಂಚೆಯೇ ನಾವು ನಮಗೆ ರಕ್ತದ ಒತ್ತಡ ಇದೆಯೋ ಇಲ್ಲವೋ ಎಂಬುದನ್ನು ಈ ರೀತಿಯ ಲಕ್ಷಣಗಳನ್ನು ಗಮನಿಸಿಕೊಂಡು ಅಥವಾ ಗುರುತಿಸಿಕೊಂಡು ಕಂಡುಕೊಳ್ಳಬಹುದು. ಬ್ಲಡ್ ಪ್ರೆಶರ್ ಅಥವಾ ರಕ್ತದ ಒತ್ತಡದ ಲಕ್ಷಣಗಳು ಈ ರೀತಿ ಆಗಿದ್ದು ಇದು ಹೃದಯದ ಬಡಿತದಲ್ಲಿ ಏರುಪೇರು ಉಂಟುಮಾಡುತ್ತದೆ. ತಲೆಸುತ್ತು ಬರುವುದು , ದೇಹದಲ್ಲಿ ನಿಶ್ಯಕ್ತಿ ಉಂಟಾಗುವುದು , ಏಕಾಗ್ರತೆಯ ಕೊರತೆ ಉಂಟಾಗುವುದು , ದೃಷ್ಟಿ ಮಂದವಾಗುವುದು , ದಾಹ ಹೆಚ್ಚಾಗುವುದು , ಉಸಿರಾಟ ಭಾರವಾಗುವುದು , ಒತ್ತಡ , ನಿದ್ರಾಹೀನತೆ ಉಂಟಾಗುವುದು , ರಕ್ತ ಸಂಚಲನದಲ್ಲಿ ಏರುಪೇರು ಉಂಟಾಗುವುದು ಈ ಎಲ್ಲಾ ಲಕ್ಷಣಗಳು ನಮ್ಮಲ್ಲಿ ಕಾಣಿಸಿಕೊಂಡಿದ್ದೆ ಆದಲ್ಲಿ ಅಂತಹ ವ್ಯಕ್ತಿಗೆ ರಕ್ತದೊತ್ತಡದ ಸಮಸ್ಯೆ ಇದೆ ಎನ್ನುವುದನ್ನು ಅರಿತುಕೊಳ್ಳಬೇಕು.

ಇನ್ನು ರಕ್ತದ ಒತ್ತಡ ತೀರ ಕಡಿಮೆಯಾಗಿದ್ದರೆ ಅಂತಹ ವ್ಯಕ್ತಿಗಳಿಗೆ ಉಪ್ಪು ಮತ್ತು ಸಕ್ಕರೆಯನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಸಲಹೆ ಸೂಚನೆ ನೀಡಲಾಗುತ್ತದೆ. ಇದು ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ಇನ್ನು ರಕ್ತದೊತ್ತಡದ ಸಮಸ್ಯೆ ತೂಕಕ್ಕೂ ಕೂಡ ಸಂಬಂಧಿಸಿರುವುದರಿಂದ ಅತಿಯಾದ ತೂಕವನ್ನು ಹೊಂದಿದ್ದರೆ ಆಗ ದೇಹದಲ್ಲಿ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ ಹಾಗಾಗಿ ನಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಹೊಂದಿರಬೇಕು. ವ್ಯಾಯಾಮ ಮಾಡದೆ ಇರುವುದು ಕೂಡ ರಕ್ತದೊತ್ತಡ ಬರಲು ಕಾರಣವಾಗಬಹುದು ಈ ಮೂಲಕ ದೈಹಿಕ ಚಟುವಟಿಕೆ ಕಡಿಮೆಯಾದಾಗ ಅದು ರಕ್ತದ ಸಂಚಲನದ ಮೇಲೆ ಪರಿಣಾಮವನ್ನು ಬೀರುತ್ತದೆ.

ಅತಿಯಾದ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಕೊಲೆಸ್ಟ್ರಾಲ್ ಹೆಚ್ಚಾಗಿರುವ ಪದಾರ್ಥಗಳ ಸೇವನೆ ಮಾಡಬಾರದು. ರಕ್ತನಾಳಗಳಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಶೇಖರಣೆ ಉಂಟಾಗುವುದರಿಂದ ಹೃದಯಸ್ತಂಭನ ಉಂಟಾಗುತ್ತದೆ. ಫೈಬರ್ ಅಂಶ ಇರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು ಪೊಟ್ಯಾಶಿಯಂ, ಪೋಲಿಕ್ ಆಸಿಡ್, ವಿಟಮಿನ್ ಇರುವ ಆಹಾರಗಳನ್ನು ಸೇವನೆ ಮಾಡುವುದರಿಂದ ರಕ್ತದೊತ್ತಡ ನೈಸರ್ಗಿಕವಾಗಿ ನಿಯಂತ್ರಣಕ್ಕೆ ಬರುತ್ತದೆ. ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ತಡೆಯಬಹುದು ಹಾಗಾಗಿ ಬೆಳ್ಳುಳ್ಳಿ ಸೇವನೆ ರಕ್ತದೊತ್ತಡ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು ಎನ್ನಬಹುದು. ಮೀನಿನ ಎಣ್ಣೆ ಯಿಂದಲೂ ಸಹ ರಕ್ತದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಬ್ಲಡ್ ಪ್ರೆಶರ್ ಅಥವ ರಕ್ತದೊತ್ತಡ ಸಮಸ್ಯೆ ಇರುವಂತಹ ವ್ಯಕ್ತಿಗಳು ಈ ಎಲ್ಲ ಎಚ್ಚರಿಕೆ ಕ್ರಮಗಳನ್ನು ಪಾಲಿಸುವುದರಿಂದ ನೈಸರ್ಗಿಕವಾಗಿ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

Leave A Reply

Your email address will not be published.