ಹೆಣ್ಣು ಮಕ್ಕಳಿಗಾಗಿ ಇರುವ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅರ್ಜಿ ಯಾವ ಸ್ಥಿತಿಯಲ್ಲಿದೆ ಹಾಗೂ ಭಾಗ್ಯಲಕ್ಷ್ಮಿ ಬಾಂಡ್ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ನೋಡಬಹುದು. ಹಾಗಾದರೆ ಭಾಗ್ಯಲಕ್ಷ್ಮಿ ಯೋಜನೆಗೆ ಸಲ್ಲಿಸಿರುವ ಅರ್ಜಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಮೊಬೈಲ್, ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ನೋಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಮೊದಲು ಮೊಬೈಲ್, ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಬ್ರೌಸರ್ ಓಪನ್ ಮಾಡಿಕೊಂಡು ಸರ್ಚ್ ಬಾರ್ ನಲ್ಲಿ ಭಾಗ್ಯಲಕ್ಷ್ಮಿ ಎಂದು ಟೈಪ್ ಮಾಡಿ ಸರ್ಚ್ ಮಾಡಿದಾಗ ಭಾಗ್ಯಲಕ್ಷ್ಮಿ ವೆಬ್ಸೈಟ್ ಬಿಲಕ್ಷ್ಮಿ ಡಾಟ್ ಕೆಎಆರ್ ಡಾಟ್ ಎನ್ಐಸಿ ಡಾಟ್ ಇನ್ ಎಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದಾಗ ವೆಬ್ಸೈಟ್ ಓಪನ್ ಆಗುತ್ತದೆ. ಇದು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೆಬ್ಸೈಟ್ ಆಗಿದೆ. ನಂತರ ಎಡಗಡೆ ಕಾಣಿಸುತ್ತಿರುವ ಸರ್ಚ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಕೆಳಗಡೆ ಮಲ್ಟಿ ಸರ್ಚ್ ಎಂದು ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಇದರಲ್ಲಿ ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವುದರ ಬಗ್ಗೆ ಯಾವುದೇ ದಾಖಲೆ ಇಲ್ಲದಿದ್ದರೂ ಅರ್ಜಿ ಸ್ಟೇಟಸ್ ಕಂಡುಹಿಡಿಯಬಹುದು. ಮಲ್ಟಿಪಲ್ ಆಪ್ಷನ್ಸ್ ನಲ್ಲಿ ಮೊದಲು ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು, ನಂತರ ತಾಲೂಕನ್ನು ಸೆಲೆಕ್ಟ್ ಮಾಡಬೇಕು. ಭಾಗ್ಯಲಕ್ಷ್ಮಿ ಯೋಜನೆಗೆ ಯಾವ ಸರ್ಕಲ್ ನಿಂದ ಅರ್ಜಿ ಸಲ್ಲಿಸಲಾಗಿದೆಯೋ ಆ ಸರ್ಕಲ್ ಹೆಸರನ್ನು ಸೆಲೆಕ್ಟ್ ಮಾಡಿ ಮಗುವಿನ ಹೆಸರು ಮತ್ತು ಹುಟ್ಟಿದ ದಿನಾಂಕವನ್ನು ಟೈಪ್ ಮಾಡಬೇಕು. ಚೈಲ್ಡ್ ಐಡಿ ಗೊತ್ತಿಲ್ಲದಿದ್ದರೆ ಹಾಗೆಯೇ ಬಿಟ್ಟು ಕ್ಯಾಪ್ಚರ್ ಕೋಡ್ ಎಂಟ್ರಿ ಮಾಡಿದ ನಂತರ ಸಬ್ಮಿಟ್ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿದ ನಂತರ ಮಗುವಿನ ಚೈಲ್ಡ್ ಐಡಿ ಸಿಗುತ್ತದೆ, ಅದನ್ನು ಬರೆದಿಟ್ಟುಕೊಳ್ಳಬೇಕು.
ನಂತರ ಎಡಗಡೆ ಸರ್ಚ್ ಮೇಲೆ ಕ್ಲಿಕ್ ಮಾಡಿ ಬೈ ಚೈಲ್ಡ್ ಐಡಿ ಮೇಲೆ ಕ್ಲಿಕ್ ಮಾಡಿ ಚೈಲ್ಡ್ ಐಡಿಯನ್ನು ಹಾಕಿ ಕ್ಯಾಪ್ಚರ್ ಕೋಡ್ ಹಾಕಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ಭಾಗ್ಯಲಕ್ಷ್ಮಿ ಯೋಜನೆಗೆ ಸಲ್ಲಿಸಿದ ಅರ್ಜಿಯ ಸ್ಟೇಟಸ್ ಬರುತ್ತದೆ. ಸ್ಟೇಟಸ್ ನಲ್ಲಿ ಬಾಂಡ್ ಪ್ರಿಂಟೆಡ್ ಎಲ್ಐಸಿ ಎಂದು ಇದ್ದರೆ ನಿಮ್ಮ ಮಗುವಿನ ಭಾಗ್ಯಲಕ್ಷ್ಮಿ ಬಾಂಡ್ ಪ್ರಿಂಟ್ ಆಗಿದೆ ಎಂದು ಅರ್ಥ. ಕೆಳಗಡೆ ಮಗುವಿನ ಹೆಸರು, ಮಗುವಿನ ತಂದೆ, ತಾಯಿಯ ಹೆಸರು, ಅಡ್ರೆಸ್, ರೇಷನ್ ಕಾರ್ಡ್ ನಂಬರ್, ಆದಾಯ ಪ್ರಮಾಣ ಪತ್ರದ ನಂಬರ್ ಇರುತ್ತದೆ ಹಾಗೆಯೇ ಯಾವ ದಿನಾಂಕದಂದು ಪ್ರಿಂಟ್ ಆಗಿದೆ ಹಾಗೂ ನಿಮ್ಮ ಮಗುವಿನ ಹೆಸರಿಗೆ ಸರ್ಕಾರ ಎಷ್ಟು ಅಮೌಂಟ್ ಎಲ್ಐಸಿಗೆ ಕಟ್ಟಿದೆ, ಚೆಕ್ ನಂಬರ್, ರಿಸಿಪ್ಟ ನಂಬರ್ ಕೂಡ ನೋಡಬಹುದು. ಇದನ್ನು ಪ್ರಿಂಟ್ ತೆಗೆದುಕೊಳ್ಳಬಹುದು ಅಥವಾ ನಿಮ್ಮ ಮೊಬೈಲ್ ಅಥವಾ ಲ್ಯಾಪ್ ಟಾಪ್ ನಲ್ಲಿ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು. ಒಂದುವೇಳೆ ಭಾಗ್ಯಲಕ್ಷ್ಮಿ ಬಾಂಡ್ ರಿಜೆಕ್ಟ್ ಆಗಿದ್ದರೆ, ವರ್ಕಿಂಗ್ ಪ್ರೋಸೆಸ್ ನಲ್ಲಿದ್ದರೆ ಸಮೀಪದ ಅಂಗನವಾಡಿ ಕಾರ್ಯಕರ್ತರನ್ನು ಸಂಪರ್ಕಿಸಿ, ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.