ಈ ಒಂದು ಲೇಖನದ ಮೂಲಕ ಸಿಮೆಂಟ್ ಡೀಲರ್ ಶಿಪ್ ಮಾಡುವುದು ಹೇಗೆ ಅದರಲ್ಲೀ ಎಷ್ಟು ಇನ್ವೆಸ್ಟ್ಮೆಂಟ್ ಮಾಡಬೇಕು ಎನ್ನುವುದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಗಳಲ್ಲಿ ಮುಖ್ಯವಾದ ವಸ್ತುವೆಂದರೆ ಸಿಮೆಂಟ್. ಸದ್ಯ ಹೆಚ್ಚೆಚ್ಚಾಗಿ ಮನೆಗಳು ಹಾಗೂ ಕಂಪನಿಗಳು ನಿರ್ಮಾಣವಾಗುತ್ತಿರುವದರಿಂದ ಸಿಮೆಂಟ್ ಗೆ ಯಾವತ್ತೂ ಬೇಡಿಕೆ ಕಡಿಮೆ ಉಂಟಾಗುವುದಿಲ್ಲ. ಇದಕ್ಕಾಗಿ ಸಿಮೆಂಟನ್ನು ನೀವೇ ಸ್ವತಹ ತಯಾರಿಸಿ ಮಾರಾಟ ಮಾಡುವ ಅಗತ್ಯವಿಲ್ಲ ಇದರ ಬದಲು ಗೋಡೌನ್ ನಲ್ಲಿ ಶೇಖರಿಸಬಹುದು. ಈ ಸಿಮೆಂಟ್ ಡೀಲರ್ ಶಿಪ್ ಬಿಸಿನೆಸ್ ಅನ್ನು ನೀವು ಪಾರ್ಟ್ ಟೈಮ್ ಬಿಸಿನೆಸ್ ಕೂಡ ಮಾಡಬಹುದು ಸಾಕಷ್ಟು ಜನರು ಇದನ್ನು ಈಗಾಗಲೇ ತೆಗೆದುಕೊಂಡಿದ್ದಾರೆ. ಆದರೆ ನೀವು ಸಿಮೆಂಟ್ ಡೀಲರ್ ಶಿಪ್ ತೆಗೆದುಕೊಳ್ಳಬೇಕು ಎಂದರೆ ಮೊದಲಿಗೆ (TIN) ಟ್ಯಾಕ್ಸ್ ಐಡೆಂಟಿಫಿಕೇಷನ್ ನಂಬರ್ ಅನ್ನು ತೆಗೆದುಕೊಳ್ಳಬೇಕು ಹಾಗೂ ಇದರ ಜೊತೆಗೆ ಜಿಎಸ್ಟಿ ಲೈಸೆನ್ಸನ್ನು ತೆಗೆದುಕೊಂಡು ರಿಜಿಸ್ಟ್ರೇಷನ್ ಕೂಡ ಮಾಡಿಸಬೇಕು. ಹಾಗೂ ಮುನ್ಸಿಪಲ್ ಆಫೀಸಿನಲ್ಲಿ ಅಪ್ರುವಲ್ ಪಡೆದುಕೊಂಡು ಲಾಸ್ ಆಗದಹಾಗೆ ಜನರಲ್ ಲಿಯಾಬಿಲಿಟ್ ಇನ್ಸೂರೆನ್ಸ್ ಹಾಗೂ ಪ್ರಾಪರ್ಟಿ ಇನ್ಸೂರೆನ್ಸ್ ಮಾಡಿಸಿಕೊಳ್ಳಬೇಕು ಇದರಿಂದ ನಿಮಗೆ ಸೆಕ್ಯೂರಿಟಿ ದೊರೆತಂತಾಗುತ್ತದೆ.
ಸಿಮೆಂಟ್ ಡೀಲರ್ ಶಿಪ್ ಗಳನ್ನು ತೆಗೆದುಕೊಳ್ಳುವ ರೀತಿ ನಮ್ಮಲ್ಲಿ ಸಾಕಷ್ಟು ಸಿಮೆಂಟ್ ಕಂಪನಿಗಳಿವೆ. ದೊಡ್ಡ ಸಿಮೆಂಟ್ ಕಂಪನಿಗಳು ನಿಮ್ಮಲ್ಲಿ 5 ಲಕ್ಷದವರೆಗೆ ಸೆಕ್ಯೂರಿಟಿ ಡೆಪಾಸಿಟ್ ಮಾಡಿಸಿಕೊಳ್ಳುತ್ತಾರೆ. ಹಾಗೆ ದೊಡ್ಡ ಕಂಪನಿಗಳು ಅಷ್ಟು ಸುಲಭಕ್ಕೆ ಡೀಲರ್ ಶಿಪ್ ನೀಡುವುದಿಲ್ಲ ಇವರ ಮುಖ್ಯ ಉದ್ದೇಶ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಎಕ್ವಿಪ್ಮೆಂಟ್ ಗಳನ್ನು ಮಾರಾಟ ಮಾಡುವವರು, ಹಾರ್ಡ್ವೇರ್ ಹಾಗೂ ಪೇಂಟ್ ಶಾಪ್ ಇಂಥವರಿಗೆ ಸಿಮೆಂಟ್ ಕಂಪನಿಗಳು ತಮ್ಮ ಡೀಲರ್ಶಿಪ್ ಅನ್ನು ನೀಡುತ್ತದೆ. ಯಾಕೆಂದರೆ ಇಂತಹ ಬ್ಯುಸಿನೆಸ್ ಗಳಲ್ಲಿ ತೊಡಗಿದ್ದವರ ಬಳಿ ಸಿಮೆಂಟ್ ಗಳು ಅತಿಯಾಗಿ ಮಾರಾಟ ಹೊಂದುತ್ತದೆ. ಹಾಗಾಗಿ ದೊಡ್ಡ ದೊಡ್ಡ ಸಿಮೆಂಟ್ ಕಂಪನಿಗಳು ಇಂಥವರಿಗೆ ಮೊದಲ ಆದ್ಯತೆ ನೀಡಿ ನಂತರ ಹೊಸಬರಿಗೆ ಅವಕಾಶ ನೀಡುತ್ತಾರೆ. ಇಲ್ಲಿ ಹೊಸಬರಿಗೆ ಸೆಕ್ಯೂರಿಟಿ ಡೇಪೋಸಿಟ್ ಕೂಡ ಕಡಿಮೆ ಇದ್ದು ಒಂದರಿಂದ ಒಂದೂವರೆ ಲಕ್ಷದವರೆಗೆ ಇರುತ್ತದೆ. ಹಾಗಾಗಿ ನಿಮಗೆ ಯಾವ ಸಿಮೆಂಟ್ಕಂಪನಿ ಲೀಡರ್ಶಿಪ್ ಬೇಕು ಎನ್ನುವುದನ್ನು ನಿರ್ಧರಿಸಿ ಅವರ ಅಫಿಶಿಯಲ್ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅವರನ್ನು ಸಂಪರ್ಕಿಸಬಹುದು. ಇನ್ನು ಸಿಮೆಂಟ್ ಶಾಪ್ ತಯಾರಿಸುವುದರ ಬಗ್ಗೆ ನೋಡುವುದಾದರೆ ಸಿಮೆಂಟ್ ಶಾಪ್ ಇಡಲು 500 ಸ್ಕ್ವಾರ್ ಫೀಟಿನ ಜಾಗ ಬೇಕಾಗುತ್ತದೆ.
ಯಾವುದೇ ರೀತಿಯ ಶುಷ್ಕ ವಾತಾವರಣ ಇಲ್ಲದೆ ಜಾಗ ಒಣಗಿಕೊಂಡಿರಬೇಕು. ಹಾಗೆ ಸಿಮೆಂಟನ್ನು ಲೋಡ್ ಮಾಡಲು ನಾಲ್ಕರಿಂದ ಐದು ಜನರ ಕಾರ್ಮಿಕರ ಅವಶ್ಯಕತೆ ಕೂಡ ಇರುತ್ತದೆ. ಸಿಮೆಂಟ್ ಮಾರ್ಕೆಟಿಂಗ್ ಮಾಡಲು ನಿಮ್ಮ ಏರಿಯಾದಲ್ಲಿ ಇರುವಂತಹ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಕಾಂಟ್ರಾಕ್ಟರ್ ಮೇಸ್ತ್ರಿಗಳನ್ನು ಭೇಟಿ ಮಾಡಿ ನಿಮ್ಮ ಸಿಮೆಂಟ್ ಬಗ್ಗೆ ಅವರ ಬಳಿ ತಿಳಿಸಬೇಕು ಹಾಗಿದ್ದಾಗ ನಿಮ್ಮ ಸಿಮೆಂಟ್ ಮಾರ್ಕೆಟಿಂಗ್ ಆಗುತ್ತದೆ. ಇನ್ನು ಈ ಸಿಮೆಂಟ್ ಡೀಲರ್ ಶಿಪ್ ನಲ್ಲಿ ನಿಮ್ಮ ಆದಾಯವನ್ನು ನೋಡುವುದಾದರೆ ಒಂದು ಸಿಮೆಂಟಿನ ಚೀಲಕ್ಕೆ ಸರಿಸುಮಾರು 15ರಿಂದ 20 ರೂಪಾಯಿ ಆದಾಯ ಹೆಚ್ಚಾಗಿ ಸಿಗುತ್ತದೆ ಆದರೆ ಇದೇ ದರ ಫಿಕ್ಸ್ ಆಗಿ ಇರುವುದಿಲ್ಲ ಸಿಮೆಂಟಿನ ಬೇಡಿಕೆ ಹೆಚ್ಚಾದ ಹಾಗೆ ಅದರ ದರವು ಹೆಚ್ಚಾಗಿ ನಿಮಗೆ ಆದಾಯ ಕೂಡ ಹೆಚ್ಚಾಗಬಹುದು.