ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಯಾವುವು, ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಸರ್ಕಾರದಿಂದ ಎಷ್ಟು ಹಣ ಬರುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಶೌಚಾಲಯ ಕಟ್ಟಿಕೊಳ್ಳಲು ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳೆಂದರೆ ಆಧಾರ ಕಾರ್ಡ್ ಪ್ರತಿ, ಪಾಸ್ಪೋರ್ಟ್ ಸೈಜ್ ಫೋಟೋ, ಬಿ.ಪಿ.ಎಲ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಗೂ ಬ್ಯಾಂಕ್ ಪಾಸಬುಕ್ ಪ್ರತಿ. ಅರ್ಜಿಯನ್ನು ಎರಡು ರೀತಿಯಲ್ಲಿ ಸಲ್ಲಿಸಬಹುದು. ಸಿಟಿಯಲ್ಲಿ ಇರುವವರು ಆನಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಳ್ಳಿಯಲ್ಲಿರುವವರು ದಾಖಲಾತಿಗಳನ್ನು ತೆಗೆದುಕೊಂಡು ತಮ್ಮ ಗ್ರಾಮಪಂಚಾಯಿತಿಗೆ ಹೋಗಿ ಡಾಟಾ ಆಪರೇಟರ್ ಅವರನ್ನು ಭೇಟಿ ಮಾಡಬೇಕು, ಅವರು ಅರ್ಜಿ ಸಲ್ಲಿಸುತ್ತಾರೆ.
ನಂತರ ನೀವು ಕಟ್ಟಿಸಿದ ಅಥವಾ ನಿರ್ಮಾಣ ಹಂತದಲ್ಲಿರುವ ಶೌಚಾಲಯದ ಪೋಟೋ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ನಿರ್ಮಾಣ ಹಂತದಲ್ಲಿದ್ದರೆ ಎರಡು ಸಲ ಪೋಟೊ ಹೊಡೆದುಕೊಳ್ಳುತ್ತಾರೆ ನಂತರ 7-10 ದಿವಸದ ಒಳಗೆ ಸಾಮಾನ್ಯ ಜನರಿಗೆ 12,000 ರೂ ಹಾಗೂ ಎಸ್ಸಿ ಮತ್ತು ಎಸ್ಟಿ ಆಗಿದ್ದರೆ 15,000 ರೂ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತನ್ನು ಭೇಟಿ ಮಾಡಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.