ಹಣ ದುರುಪಯೋಗ ಪಡಿಸಿಕೊಳ್ಳುವುದನ್ನು ನಾವು ನೋಡಿರುತ್ತೇವೆ ಇತ್ತೀಚೆಗೆ ಆಧಾರ್ ಕಾರ್ಡ್ ನಂಬರ್ ಅನ್ನು ಬಳಸಿಕೊಂಡು ಸಿಮ್ ಕಾರ್ಡ್ ಖರೀದಿಸಿ ದುರುಪಯೋಗ ಪಡಿಸಿಕೊಳ್ಳುವುದು ಹೆಚ್ಚಾಗಿದೆ. ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಬಳಸಿಕೊಂಡು ಯಾರಾದರೂ ಸಿಮ್ ಕಾರ್ಡ್ ಖರಿದಿಸಿದ್ದಾರೆಯೇ ಎಂಬುದನ್ನು ಕಂಪ್ಯೂಟರ್ ನಲ್ಲಿ ನೋಡಬಹುದು. ಹಾಗಾದರೆ ಆಧಾರ್ ಕಾರ್ಡ್ ನಂಬರ್ ನಿಂದ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ನೋಡುವುದು ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕೆಲವರು ಆಧಾರ ಕಾರ್ಡ್ ಝೆರಾಕ್ಸ್ ಪಡೆದುಕೊಂಡು ಸಿಮ್ ಗಳನ್ನು ಖರೀದಿಸುತ್ತಾರೆ ಅಂತಹ ನಂಬರ್ ಅನ್ನು ನೋಡಬಹುದು ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಗೆ ಎಷ್ಟು ಮೊಬೈಲ್ ನಂಬರ್ ಆಕ್ಟೀವ್ ಇದೆ ಎಂದು ನೋಡಬಹುದು. ಕಂಪ್ಯೂಟರ್ ನಲ್ಲಿ ಟಿಎಎಫ್ ಸಿಒಪಿ ಪೋರ್ಟಲ್ ಎಂಬ ಅಫೀಷಿಯಲ್ ವೆಬ್ಸೈಟ್ ಇದೆ ಅಲ್ಲಿ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರನ್ನು ಹಾಕಬೇಕು.
ನಂತರ ರಿಕ್ವೆಸ್ಟ್ ಓಟಿಪಿ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು. ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಎಂಟ್ರಿ ಮಾಡಿ ನಂತರ ವ್ಯಾಲಿಡೇಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ನಿಂದ ರಿಜಿಸ್ಟರ್ ಆಗಿರುವ ಎಲ್ಲಾ ಮೊಬೈಲ್ ನಂಬರ್ ಗಳ ಲೀಸ್ಟ್ ಕಾಣಿಸುತ್ತದೆ.
ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಬಳಸಿಕೊಂಡು ಸಿಮ್ ಕಾರ್ಡ್ ಖರೀದಿಸಿದರೆ ಅಂತಹ ನಂಬರ್ ನ ಮೊದಲ ಎರಡು ಸಂಖ್ಯೆ ಕಾಣಿಸುತ್ತದೆ ಮತ್ತು ಕೊನೆಯ ನಾಲ್ಕು ಸಂಖ್ಯೆ ಕಾಣಿಸುತ್ತದೆ ಮದ್ಯದ ನಂಬರ್ ಕಾಣಿಸುವುದಿಲ್ಲ. ಅಂತಹ ನಂಬರ್ ನ ಪಕ್ಕದಲ್ಲಿ ಸಣ್ಣದಾಗಿ ಬಾಕ್ಸ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಕೆಳಗಡೆ ರಿಪೋರ್ಟ್ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು ಆಗ ಆ ಮೊಬೈಲ್ ನಂಬರ್ ಬ್ಲಾಕ್ ಆಗುತ್ತದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಇಂದ ಬೇರೆಯವರು ರಿಜಿಸ್ಟರ್ ಮಾಡಿಕೊಳ್ಳದೆ ಇದ್ದರೆ ಲಾಗೌಟ್ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು.
ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಬೇರೆಯವರ ಆಧಾರ್ ಕಾರ್ಡ್ ನಂಬರ್ ಅನ್ನು ಬಳಸಿ ಸಿಮ್ ಕಾರ್ಡ್ ಖರೀದಿಸಿ ಮೊಬೈಲ್ ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಆಧಾರ್ ಕಾರ್ಡ್ ನಂಬರ್ ಬಗ್ಗೆ ಹೆಚ್ಚು ಜಾಗೃತರಾಗಿರಿ. ಅನಾವಶ್ಯಕವಾಗಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಯಾರಿಗೂ ಕೊಡಬೇಡಿ. ಈ ಮಾಹಿತಿ ಉಪಯುಕ್ತವಾಗಿದ್ದು ತಪ್ಪದೆ ಎಲ್ಲರಿಗೂ ತಿಳಿಸಿ, ಆಧಾರ್ ಕಾರ್ಡ್ ನಂಬರ್ ನ ದುರುಪಯೋಗವನ್ನು ತಡೆಯಿರಿ.