ಪಡಿತರ ಚೀಟಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರ ಹೆಸರು ಸೇರಿಸುವುದು ಬಹಳ ಮುಖ್ಯ. ನಿಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸಬೇಕಾದರೆ, ಈಗ ಚಿಂತೆ ಮಾಡಬೇಕಾಗಿಲ್ಲ. ನಿಮ್ಮ ಕೆಲಸವನ್ನು ನಿಮಿಷಗಳಲ್ಲಿ ಮಾಡಿಬಿಡಬಹುದು. ಪಡಿತರ ಚೀಟಿಯಲ್ಲಿ ಹೊಸ ಹೆಸರನ್ನು ಸೇರಿಸಲು, ಆನ್‌ಲೈನ್ ಅಥವಾ ಆಫ್‌ಲೈನ್ ಮೋಡ್ ಅನ್ನು (how to add name in ration card online) ಆಯ್ಕೆ ಮಾಡಿಕೊಳ್ಳಬಹುದು.

ಪಡಿತರ ಚೀಟಿ ಅಂದ್ರೆ ರೇಷನ್ ಕಾರ್ಡ್ ಅನ್ನು ಅನೇಕ ಸರ್ಕಾರಿ ಯೋಜನೆಗಳನ್ನು ತೆಗೆದುಕೊಳ್ಳಲು ಸಹ ಬಳಸಲಾಗುತ್ತದೆ. ಪಡಿತರ ಚೀಟಿಯಲ್ಲಿ ಕುಟುಂಬದ ಸದಸ್ಯರ ಹೆಸರು ಸೇರಿಸುವುದು ಅತಿ ಮುಖ್ಯವಾಗಿರೊದ್ರಿಂದ ಈ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಕೂಡ ಇರುತ್ತದೆ. ನಾವು ಈ ಲೇಖನದ ಮೂಲಕ ನಿಮ್ಮ ಪಡಿತರ ಚೀಟಿಯಲ್ಲಿ ಕುಟುಂಬದವರ ಹೊಸ ಹೆಸರನ್ನು ಆನ್‌ಲೈನ್‌ನ ಮೂಲಕ ಹೇಗೆ ಸೇರಿಸಬಹುದು? ಎನ್ನುವುದನ್ನು ನೋಡೋಣ.

ನಿಮ್ಮ ಪಡಿತರ ಚೀಟಿಯಲ್ಲಿ ಕುಟುಂಬದವರ ಹೊಸ ಹೆಸರನ್ನು ಆನ್‌ಲೈನ್‌ನ ಮೂಲಕ ಸೇರಿಸಬಹುದು. ಪಡಿತರ ಚೀಟಿಯನ್ನು ಅನೇಕ ಸರ್ಕಾರಿ ಯೋಜನೆಗಳನ್ನು ತೆಗೆದುಕೊಳ್ಳಲು ಅಥವಾ ಯೋಜನೆಗಳನ್ನು ಬಳಕೆ ಮಾಡಿಕೊಳ್ಳಲು ಸಹ ಬಳಸಲಾಗುತ್ತದೆ. ಪಡಿತರ ಚೀಟಿಯಲ್ಲಿ ಕುಟುಂಬದ ಸದಸ್ಯರ ಹೆಸರು ಸೇರಿಸುವುದು ಅತಿ ಮುಖ್ಯವಾಗಿರೊದ್ರಿಂದ ಈ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಕೂಡ ಇರುತ್ತದೆ. 

ಹಲವಾರು ಬಾರಿ, ಕುಟುಂಬವು ದೊಡ್ಡದಾಗುತ್ತಿದ್ದಂತೆ ಅವರ ಮಕ್ಕಳ ಹೆಸರನ್ನು ಪಡಿತರ ಚೀಟಿಗೆ ಸೇರಿಸುವುದು ತುಂಬಾ ಕಷ್ಟಕರವಾಗುತ್ತದೆ. ಪಡಿತರ ಕಾರ್ಡ್‌ನಲ್ಲಿ ನೀವು ನಿಮ್ಮ ಕುಟುಂಬದ ಹೊಸ ಸದಸ್ಯರ ಹೆಸರನ್ನು ಹೇಗೆ ನಮೂದಿಸಬಹುದು ಎಂದು ನೋಡುವುದಾದರೆ, ಮೊದಲಿಗೆ ನಿಮ್ಮ ಕುಟುಂಬದ ಒಂದು ಮಗುವಿನ ಹೆಸರನ್ನು ಪಡಿತರ ಚೀಟಿಯಲ್ಲಿ ಹೇಗೆ ನೋಂದಣಿ ಮಾಡಬಹುದು ಎಂದು ನೋಡೋಣ.

ಕುಟುಂಬದಲ್ಲಿ ಒಂದು ಮಗು ಜನಿಸಿದರೆ ಆ ಮಗುವಿನ ಹೆಸರನ್ನು ಪಡಿತರ ಚೀಟಿಯಲ್ಲಿ ನೋಂದಾಯಿಸಿಕೊಳ್ಳಬೇಕಾದರೆ ಮೊದಲು ಮಗುವಿನ ಆಧಾರ್ ಕಾರ್ಡ್ ಅನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಮಗುವಿನ ಜನನ ಪ್ರಮಾಣಪತ್ರದ ಅಗತ್ಯವಿದೆ. ಆದ್ದರಿಂದ ಮಗುವಿನ ಜನನ ಪ್ರಮಾಣಪತ್ರವನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಅದಕ್ಕೆ ಸಂಬಂಧಿಸಿದ ಬಹಳಷ್ಟು ಕೆಲಸಗಳು ಸ್ಥಗಿತಗೊಳ್ಳಬಹುದು ಮುಂದೆ ಹೆಸರು ಸೇರಿಸಲು ಕಷ್ಟ ಸಹ ಆಗಬಹುದು.

ಇನ್ನೂ ಹೊಸ ಸದಸ್ಯರು ಅಂದರೆ, ಮನೆಯ ಸೊಸೆಯ ಹೆಸರನ್ನು ಪಡಿತರ ಚೀಟಿಯಲ್ಲಿ ನೋಂದಣಿ ಮಾಡಬೇಕಾದರೆ, ಮೊದಲನೆಯದಾಗಿ ಆ ಹೆಣ್ಣುಮಗಳ ಆಧಾರ್ ಕಾರ್ಡ್ ಅನ್ನು ಬದಲಾಯಿಸಬೇಕಾಗುತ್ತದೆ. ಇದಕ್ಕಾಗಿ ಮೊದಲು ಹುಡುಗಿ ತನ್ನ ಆಧಾರ್‌ ಕಾರ್ಡ್ ನಲ್ಲಿ ತಂದೆಯ ಬದಲು ಗಂಡನ ಹೆಸರನ್ನು ನಮೂದಿಸಬೇಕಾಗುತ್ತದೆ ಮತ್ತು ವಿಳಾಸವನ್ನು ತಂದೆಯ ಮನೆಯ ವಿಳಾಸವನ್ನು ಗಂಡನ ಮನೆಯ ವಿಳಾಸಕ್ಕೆ ನವೀಕರಿಸಬೇಕು. ಅದರ ನಂತರ ಪರಿಷ್ಕೃತ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಯ ಜೊತೆಗೆ ಆಹಾರ ಸರಬರಾಜು ಅಧಿಕಾರಿಗೆ ಅರ್ಜಿಯನ್ನು ನೀಡಬೇಕಾಗುತ್ತದೆ.

ಪಡಿತರ ಚೀಟಿಯಲ್ಲಿ ಆನ್‌ಲೈನ್‌ನಲ್ಲಿ ಹೆಸರನ್ನು ಸೇರಿಸಲು ಈ ಕೆಳಗಿನ ಅಧಿಕೃತ ವೆಬ್ ಸೈಟ್ ಗೆ ಲಾಗ್‌ ಇನ್ ಆಗುವ ಮೂಲಕ ನೋಂದಾವಣಿ ಮಾಡಿಕೊಳ್ಳಬಹುದು. https://ahara.kar.nic.in/home.aspx 

ಈ ವೆಬ್ಸೈಟ್ ನಲ್ಲಿ ಲಾಗ್‌ಇನ್‌ ಮಾಡಿದ ನಂತರ ಪುಟದಲ್ಲಿ ಇ-ಸೇವೆಯ ಆಯ್ಕೆಯಲ್ಲಿ ಇ-ಸ್ಥಿತಿ ಎನ್ನುವಲ್ಲಿ ತಿದ್ದುಪಡಿ ವಿನಂತಿಯನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಫಾರ್ಮ್‌ನಲ್ಲಿ ಎಲ್ಲ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ. ಅಷ್ಟಾದ ನಂತರ ಅಲ್ಲಿ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಬೇಕು ಹಾಗೂ ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ.  ಫಾರ್ಮ್ ಅನ್ನು ಸಲ್ಲಿಸಿದ ನಂತರ ನೋಂದಣಿ ಸಂಖ್ಯೆ ಸಿಗುತ್ತದೆ.

ಈ ನೋಂದಣಿ ಸಂಖ್ಯೆಯ ಮೂಲಕ ವೆಬ್ ಸೈಟ್ ಗೆ ಲಾಗ್‌ಇನ್‌ ಆಗಬಹುದು ಹಾಗೂ ಫಾರ್ಮ್ ಅನ್ನು ಟ್ರ್ಯಾಕ್ ಮಾಡಬಹುದು. ನೀಡಲಾದ ಎಲ್ಲ ದಾಖಲಾತಿ ಸರಿಯಾಗಿದ್ದರೆ ಅಂಚೆ ಮೂಲಕ ಮನೆಗೆ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ. ಹೀಗೆ ಆನ್ಲೈನ್ ಮೂಲಕ ಪಡಿತರ ಚೀಟಿ ಅಂದರೆ ರೇಷನ್ ಕಾರ್ಡ್ ಅನ್ನು ನೀವು ತಿದ್ದುಪಡಿ ಮಾಡಿ ಹೊಸ ರೇಷನ್ ಕಾರ್ಡ್ ಪಡೆಯಬಹುದು. ಇನ್ನೂ ಇವು ಆನ್ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದು ಪಡಿ ಬಗ್ಗೆ ಮಾಹಿತಿ ಆದರೆ, ಆಫ್ ಲೈನ್ ಮೂಲಕ ಹೇಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಬಹುದು ಎಂದು ನೋಡೋಣ.

ಪಡಿತರದಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ಇರುವ ಆಫ್‌ಲೈನ್ ಪ್ರಕ್ರಿಯೆಈ ರೀತಿಯಾಗಿ ಇರುತ್ತವೆ. ನಿಮ್ಮ ಎಲ್ಲಾ ಉಲ್ಲೇಖಿತ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಆಹಾರ ಪೂರೈಕೆ ಕೇಂದ್ರಕ್ಕೆ ಭೇಟಿ ನೀಡಬೇಕು.ಅಲ್ಲಿ ನೀವು ಹೊಸ ಸದಸ್ಯರ ಹೆಸರನ್ನು ಸೇರಿಸುವ ಫಾರ್ಮ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ. ಫಾರ್ಮ್‌ನಲ್ಲಿ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಇಲಾಖೆಗೆ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

ಇಲ್ಲಿ ಕೆಲವು ಅರ್ಜಿ ಶುಲ್ಕವನ್ನು ಜಮಾ ಮಾಡಬೇಕಾಗುವುದು. ಅರ್ಜಿ ಸಲ್ಲಿಸಿದ ನಂತರ, ಅಧಿಕಾರಿಗಳು ನಿಮಗೆ ರಶೀದಿಯನ್ನು ನೀಡುತ್ತಾರೆ, ಅದನ್ನು ಇಟ್ಟುಕೊಳ್ಳಬೇಕು. ಈ ರಶೀದಿಯ ಮೂಲಕ ನೀವು ಆನ್ಲೈನ್ ನಲ್ಲಿ ​​ಅರ್ಜಿಯ ಸ್ಟೇಟಸ್ ಅನ್ನು ಪರಿಶೀಲಿಸಬಹುದು. ಅಧಿಕಾರಿಗಳು ನಿಮ್ಮ ಫಾರ್ಮ್ ಅನ್ನು ಪರಿಶೀಲಿಸುತ್ತಾರೆ ಮತ್ತು ಡಾಕ್ಯುಮೆಂಟ್ ವೆರಿಫಿಕೇಶನ್ ನಂತರ ನಿಮ್ಮ ಪಡಿತರವನ್ನು ಕನಿಷ್ಠ ಎರಡು ವಾರಗಳಲ್ಲಿ ಪಡೆದುಕೊಳ್ಳಬಹುದು.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *