Ration Card: ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಹೆಸರು ಸೇರಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

0 1,045

How to add new member in ration card karnataka: ಪಡಿತರ ಚೀಟಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರ ಹೆಸರು ಇರುವುದು ಬಹಳ ಮುಖ್ಯವಾಗಿರುತ್ತದೆ. ಕಾಂಗ್ರೆಸ್ ಸರ್ಕಾರ ನೀಡಿರುವಂತಹ ಕೆಲವು ಯೋಜನೆಯ ಫಲವನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಪಡಿತರ ಚೀಟಿ ಸರಿಯಾಗಿರಬೇಕು. ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ನಿಮ್ಮ ಪಡಿತರ ಚೀಟಿಗೆ ಯಾವ ರೀತಿಯಾಗಿ ಸೇರಿಸಬೇಕು ಎಂದು ಇಲ್ಲಿ ತಿಳಿದುಕೊಳ್ಳುವುದು. ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಪಡಿತರ ಚೀಟಿಗೆ ಹೆಸರನ್ನು ಸೇರಿಸಬಹುದು. ಇದಕ್ಕೆ ಬೇಕಾಗುವ ದಾಖಲೆಗಳ ಮಾಹಿತಿ

ಮಗುವಿನ ಹೆಸರು ಸೇರ್ಪಡೆ ಮಾಡುವುದಾದರೆ ಮನೆಯ ಮುಖ್ಯಸ್ಥರ ಪಡಿತರ ಚೀಟಿ ಹಾಗೂ ಮಗುವಿನ ಜನನ ಪ್ರಮಾಣ ಪತ್ರ ಮತ್ತು ತಂದೆ ತಾಯಿಯ ಆಧಾರ್ ಕಾರ್ಡ್ ಬೇಕಾಗುತ್ತದೆ. ಮದುವೆಯಾದ ನಂತರ ಮನೆಗೆ ಬರುವ ಸೊಸೆಯ ಹೆಸರನ್ನು ಕೂಡ ಕುಟುಂಬದ ರೇಷನ್ ಕಾರ್ಡಿಗೆ ಸೇರಿಸಬೇಕಾಗುತ್ತದೆ. ಮಹಿಳೆಯ ಆಧಾರ್ ಕಾರ್ಡ್, ಮದುವೆ ಪ್ರಮಾಣ ಪತ್ರ ಹಾಗೂ ಗಂಡನ ಪಡಿತರ ಚೀಟಿಯ ಫೋಟೋ ಕಾಪಿಯನ್ನು ನೀಡಬೇಕಾಗುತ್ತದೆ.

How to add new member in ration card karnataka

ಅರ್ಜಿ ಸಲ್ಲಿಸುವ ವಿಧಾನ :
ಮೊದಲು ಆಹಾರ ಪೂರೈಕೆ ಕೇಂದ್ರದ ಅಧಿಕೃತ ವೆಬ್ಸೈಟ್ ಗೆ ಹೋಗಿ ಲಾಗಿನ್ ಆಗಬೇಕು.
ಲಾಗಿನ್ ಆದ ನಂತರ ಸೇರ್ಪಡೆ ಮಾಡುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಅದನ್ನು ಕ್ಲಿಕ್ ಮಾಡಿದ ನಂತರ ಅಲ್ಲಿ ಫಾರ್ಮ್ ಕಾಣಿಸುತ್ತದೆ ಅದನ್ನು ಸರಿಯಾಗಿ ಭರ್ತಿ ಮಾಡಬೇಕು. ಅಲ್ಲಿ ನಿಮ್ಮ ಕುಟುಂಬಸ್ಥರ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ ,ಮತ್ತು ಅಗತ್ಯ ದಾಖಲೆಗಳ ಸಾಫ್ಟ್ ಕಾಪಿಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

ಕೊನೆಯದಾಗಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ನಮೂನೆಯ ಸಲ್ಲಿಕೆಯ ನಂತರ ನೊಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ. ಅಧಿಕಾರಿಗಳು ನೀವು ಸಲ್ಲಿಸಿದ ನಮೂನೆ ಮತ್ತು ದಾಖಲಾತಿಗಳನ್ನು ಪರಿಶೀಲಿಸುತ್ತಾರೆ. ಎಲ್ಲವೂ ಸರಿಯಾಗಿದ್ದರೆ ನಮೂನೆಯನ್ನು ಸ್ವೀಕರಿಸಿ ಪಡಿತರ ಚೀಟಿಯನ್ನು ಅಂಚೆ ಮೂಲಕ ನಿಮಗೆ ತಲುಪಿಸಲಾಗುತ್ತದೆ.

ಆಫ್ಲೈನ್ ಮೂಲಕ ಸಲ್ಲಿಸುವುದಾದರೆ ನೀವು ನಿಮ್ಮ ಹತ್ತಿರದ ಆಹಾರ ಪೂರೈಕೆ ಕೇಂದ್ರಕ್ಕೆ ಹೋಗಬೇಕಾಗುತ್ತದೆ .ಅಲ್ಲಿ ಅವರು ಕೇಳಿರುವಂತಹ ದಾಖಲಾತಿಗಳನ್ನು ಅಧಿಕಾರಿಗಳಿಗೆ ನೀಡಬೇಕು, ಮತ್ತು ಅವರು ಒಂದು ಫಾರ್ಮನ್ನು ನೀಡುತ್ತಾರೆ .ಅದನ್ನು ಭರ್ತಿ ಮಾಡಿ ಅರ್ಜಿ ಶುಲ್ಕವನ್ನು ಜಮಾ ಮಾಡಬೇಕಾಗುತ್ತದೆ. ನಮೂನೆಯನ್ನು ಸಲ್ಲಿಸಿದ ನಂತರ ಅಧಿಕಾರಿಗಳು ನಿಮಗೆ ಒಂದು ರಸೀದಿಯನ್ನು ನೀಡುತ್ತಾರೆ. ರಸೀದಿಯ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲನೆ ಮಾಡಬಹುದು. ಇದನ್ನೂ ಓದಿ ಇವತ್ತಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ, ಈ ದಾಖಲಾತಿ ಕಡ್ಡಾಯ ನೋಡಿ

Leave A Reply

Your email address will not be published.