ಹೊಸ ಮನೆ ಕಟ್ಟಿರತೀರಾ ಸ್ವಲ್ಪ ದಿನಗಳ ನಂತರ ಗೋಡೆಗಳಲ್ಲಿ ಕ್ರಾಕ್ ಬರುತ್ತದೆ. ಕ್ರಾಕ್ ಯಾಕೆ ಬರುತ್ತದೆ ಬಂದರೆ ಪರಿಹಾರವೇನು ಎಂಬುದರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಮನೆಯ ಗೋಡೆಗಳು ಕ್ರಾಕ್ ಬರುತ್ತದೆ ಕ್ರಾಕ್ ಗಳಲ್ಲಿ ಎರಡು ವಿಧ ಮೊದಲನೆಯದು ಅಪಾಯಕಾರಿ ಕ್ರಾಕ್ ಎರಡನೆಯದು ಅಪಾಯಕರಿಯಲ್ಲದ ಕ್ರಾಕ್. ಅಪಾಯಕಾರಿಯಲ್ಲದ ಕ್ರಾಕ್ ಅಂದರೆ ಯಾವುದೇ ಬಿರುಕಿರಲಿ 1mm ನಿಂದ 2mm ಇದ್ದರೆ ಅದು ಅಪಾಯಕಾರಿಯಲ್ಲದ ಕ್ರಾಕ್ ಇದರಿಂದ ಅಪಾಯವಿಲ್ಲ. ಅಪಾಯಕಾರಿ ಕ್ರಾಕ್ ಎಂದರೆ 2 mm ನಿಂದ 3mm ಇದ್ದರೆ ಅದು ಅಪಾಯಕಾರಿ ಕ್ರಾಕ್ ಇದರ ಜೊತೆಗೆ ಫಿಲ್ಲರ ಪಕ್ಕದಲ್ಲಿ ಕೋಲಂ ಪಕ್ಕ ಗೋಡೆ ಇರುವುದು ಅಲ್ಲಿಯೂ ಕ್ರಾಕ್ ಬರುತ್ತದೆ. ಅಪಾಯಕಾರಿಯಲ್ಲದ ಕ್ರಾಕ್ ಬರಲು ಕಾರಣವೆಂದರೆ ಪ್ಲಾಸ್ಟರಿಂಗ್ ಮಾಡುವಾಗ ಸಿಮೆಂಟ್ ಮತ್ತು ಸ್ಯಾಂಡ್ ನ ರೇಶಿಯೋ ಹೆಚ್ಚು-ಕಡಿಮೆ ಇದ್ದರೆ ಮತ್ತು ಬಳಸಿರುವ ಮಣ್ಣು ನದಿಯದಾಗಿದ್ದರೆ ಮಣ್ಣಿನ ಅಂಶ ಹೆಚ್ಚಿರುತ್ತದೆ ಆದ್ದರಿಂದ ಕ್ರಾಕ್ ಬರುತ್ತದೆ. ಅಲ್ಲದೆ ಕ್ಯೂರಿಂಗ್ ಸರಿಯಾಗಿ ಮಾಡದೆ ಇದ್ದರೆ ಅಪಾಯಕಾರಿಯಲ್ಲದ ಕ್ರಾಕ್ ಬರುತ್ತದೆ.
ಅಪಾಯಕಾರಿ ಕ್ರಾಕ್ ಬರಲು ಕಾರಣವೆಂದರೆ ಮನೆಯ ಫೌಂಡೇಶನ್ ಸರಿಯಾಗಿರದಿದ್ದರೆ ಅಪಾಯಕಾರಿ ಕ್ರಾಕ್ ಬರುತ್ತದೆ. ಈ ಕ್ರಾಕ್ ಅಪಾಯಕಾರಿಯಾಗಿದ್ದು ಸರಿಮಾಡಬೇಕಾಗುತ್ತದೆ. ಅಪಾಯಕಾರಿಯಲ್ಲದ ಕ್ರಾಕ್ ಬರದಂತೆ ತಡೆಯಲು ಮುಂಜಾಗ್ರತಾ ಕ್ರಮಗಳೆಂದರೆ ಪ್ಲಾಸ್ಟರಿಂಗ್ ಮಾಡುವಾಗ ಸಿಮೆಂಟ್ ಮತ್ತು ಮರಳಿನ ರೇಶಿಯೋ ಸರಿಯಾಗಿ ಇಟ್ಟುಕೊಳ್ಳಬೇಕು. ಅಪಾಯಕಾರಿ ಕ್ರಾಕ್ ಬರದಂತೆ ತಡೆಯಬೇಕೆಂದರೆ ಮನೆಯ ಫೌಂಡೇಶನ್ ಮಾಡಿದ ಮಣ್ಣಿನ ಬಗ್ಗೆ ತಿಳಿದುಕೊಳ್ಳಬೇಕು. ಅಪಾಯಕಾರಿಯಲ್ಲದ ಕ್ರಾಕ್ ಹೋಗಲಾಡಿಸಲು ಪರಿಹಾರವೆಂದರೆ ಕ್ರಾಕ್ ಬಂದ ಜಾಗದಲ್ಲಿ ಆ ಕಡೆ 2 mm ಈಕಡೆ 2mm ನಿಧಾನವಾಗಿ ಓಪನ್ ಮಾಡಿ ಅದರೊಳಗೆ ಡಾಕ್ಟರ್ ಫಿಕ್ಸಿಟ್ ಅವರ ಕ್ರಾಕ್ ಪಿಲ್ಲರನ್ನು ತುಂಬಿ 4-5ಗಂಟೆ ಬಿಡಬೇಕು. ಕ್ರಾಕ್ ಪಿಲ್ಲ್ ರಲ್ಲಿ 2ವಿಧ ಮೊದಲನೆಯದು ಪೌಡರ್ ಸಣ್ಣ ಪುಟ್ಟ ಕ್ರಾಕ್ ಬಂದರೆ ಇದನ್ನು ಬಳಸಬಹುದು ಇದಕ್ಕೆ ನೀರನ್ನು ಮಿಶ್ರಣ ಮಾಡಬೇಕು. ನಂತರ ಅದಕ್ಕೆ ಸ್ಯಾಂಡಿಂಗ್ ಮಾಡಿ ಪೇಂಟ್ ಮಾಡಿದರೆ ಗೋಡೆ ಚೆನ್ನಾಗಿ ಕಾಣುತ್ತದೆ. ಅಪಾಯಕಾರಿ ಕ್ರಾಕ್ ಗಳನ್ನು ಮುಚ್ಚಲು ಕ್ರಾಕ್ ಬಂದ ಜಾಗದಲ್ಲಿ ಆಕಡೆ ಅರ್ಧ ಇಂಚು ಈ ಕಡೆ ಅರ್ಧ ಇಂಚು ಓಪನ್ ಮಾಡಿ ಅದರೊಳಗೆ ಡಾಕ್ಟರ್ ಫಿಕ್ಸಿಟ್ ಅವರ ಕ್ರಾಕ್ ಎಕ್ಸಿಟ್ ಸಿಕ್ಸ್ ಪ್ರಿ ಪೇಸ್ಟ್ ಬರುತ್ತದೆ ಅದನ್ನು ಕ್ರಾಕ್ ಬಂದಲ್ಲಿ ತುಂಬಿ 4-5ಗಂಟೆ ಹಾಗೆ ಬಿಡಬೇಕು ನಂತರ ಇನ್ನೊಮ್ಮೆ ತುಂಬಬೇಕು. ನಂತರ ಸ್ಯಾಂಡಿಂಗ್ ಮಾಡಿ ಪೇಂಟ್ ಮಾಡಬೇಕು ಗೋಡೆ ಪಕ್ಕ ಕ್ರಾಕ್ ಬಂದಾಗ ಚಿಕನ್ ಮೆಷ 3ಇಂಚನ್ನು ಇಟ್ಟು ಮಳೆ ಹೊಡೆದು ಪ್ಲಾಸ್ಟ್ರಿಂಗ್ ಮಾಡುವುದರಿಂದ ಗೋಡೆ ಮೊದಲಿನಂತೆ ಕಾಣುತ್ತದೆ.