ಶ್ರೀ ಸಿದ್ದಗಂಗಾ ಪಬ್ಲಿಕ್ ಸ್ಕೂಲ್ ಕೂಡಲ ಸಂಗಮ (ಆರ್. ಸಿ) ಹುನುಗುಂದ ತಾಲೂಕು, ಬಾಗಲಕೋಟ ಜಿಲ್ಲೆ ಇಲ್ಲಿ ಅಗತ್ಯ ಇರುವ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಾಸ್ಟೆಲ್ ವಾರ್ಡನ್, ಹಾಸ್ಟೆಲ್ ಅಡುಗೆಯವರು ಹುದ್ದೆಗಳ ಭರ್ತಿಗೆ ಪ್ರಕಟಣೆ ನೀಡಲಾಗಿದೆ. ಈ ಹುದ್ದೆಗಳನ್ನು ನೇರ ನೇಮಕ ಮಾಡಿಕೊಳ್ಳಲಾಗುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ, ನೇಮಕಾತಿ ವಿಧಾನ, ಅರ್ಜಿ ಸಲ್ಲಿಸುವ ವಿಧಾನ, ಇತರೆ ಮಾಹಿತಿಯನ್ನು ವಿವರವಾಗಿ ಈ ಕೆಳಗೆ ನಮೂದಿಸಲಾಗಿದೆ.

ಸೂಕ್ತ ವಿದ್ಯಾರ್ಹತೆ, ಅನುಭವಿ, ಉತ್ಸಾಹಿ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅರ್ಜಿ ಕರೆಯಲಾದ ಹುದ್ದೆಗಳ ವಿವರ ಇಂತಿದೆ.ಮುಖ್ಯ ಶಿಕ್ಷಕರು: ಇಂಗ್ಲೀಷ್ ಶಿಕ್ಷಕರು (ಪ್ರಾಥಮಿಕ ವಿಭಾಗ) 1 ಹುದ್ದೆ, ಇಂಗ್ಲೀಷ್ ಶಿಕ್ಷಕರು: ಟಿ ಜಿ ಟಿ 2 ಹುದ್ದೆ,
ಸಮಾಜ ವಿಜ್ಞಾನ ಶಿಕ್ಷಕರು: ಟಿ ಜಿ ಟಿ 3 ಹುದ್ದೆ,
ವಿಜ್ಞಾನ ಶಿಕ್ಷಕರು:4 ಹುದ್ದೆ,

ಪೂರ್ವ ಪ್ರಾಥಮಿಕ/ ಪ್ರಾಥಮಿಕ ಶಿಕ್ಷಕರು: ಎಲ್ ಕೆ ಜಿ/ ಯು ಕೆ ಜಿ 8 ಹುದ್ದೆ,
ಹಾಸ್ಟೆಲ್ ವಾರ್ಡನ್: 2ಹುದ್ದೆ,
ಕಲೆ ಮತ್ತು ಕ್ರಾಫ್ಟ್: 2ಹುದ್ದೆ,
ದೈಹಿಕ ಶಿಕ್ಷಕರು: 1ಹುದ್ದೆ, ಹಾಸ್ಟೆಲ್ ಅಡುಗೆಯವರು: 1ಹುದ್ದೆ. ಒಟ್ಟು 24 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿ ಹೊಂದಿರಬೇಕಾದ ವಿದ್ಯಾರ್ಹತೆ ಇಂತಿದೆ.
ಮುಖ್ಯ ಶಿಕ್ಷಕರು: ಇಂಗ್ಲೀಷ್ ಶಿಕ್ಷಕರು (ಪ್ರಾಥಮಿಕ ವಿಭಾಗ) M.A, B.Ed
ಇಂಗ್ಲೀಷ್ ಶಿಕ್ಷಕರು: ಟಿ ಜಿ ಟಿ B.A/M.A, B.Ed
ಸಮಾಜ ವಿಜ್ಞಾನ ಶಿಕ್ಷಕರು: ಟಿ ಜಿ ಟಿ BA/MA, B.Ed
ವಿಜ್ಞಾನ ಶಿಕ್ಷಕರು: B.Sc/ M.Sc, B.Ed(PCM/ CBZ)
ಪೂರ್ವ ಪ್ರಾಥಮಿಕ/ ಪ್ರಾಥಮಿಕ ಶಿಕ್ಷಕರು: ಎಲ್ ಕೆ ಜಿ/ ಯು ಕೆ ಜಿ NTC/D.Ed
ಹಾಸ್ಟೆಲ್ ವಾರ್ಡನ್: B.SC, B.Ed (PCM)
ಕಲೆ ಮತ್ತು ಕ್ರಾಫ್ಟ್: ಆರ್ಟ್ ಆಂಡ್ ಕ್ರಾಫ್ಟ್ ಕೋರ್ಸ್,
ದೈಹಿಕ ಶಿಕ್ಷಕರು: B.P.E.D ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಈ ಮೇಲೆ ತಿಳಿಸಲಾದ ವಿದ್ಯಾರ್ಹತೆ ಹೊಂದಿರಬೇಕು.

ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ ವಿವರವನ್ನು ಅವರು ನೀಡಿರುವ ಇ ಮೇಲ್ ಗೆ ಕಳುಹಿಸಿ ಕೊಡಲು ತಿಳಿಸಿದ್ದಾರೆ. ಇಮೇಲ್ ಐಡಿ: [email protected] ಅರ್ಹ ಅಭ್ಯರ್ಥಿಗಳನ್ನು ಯಾವುದೇ ಪರೀಕ್ಷೆ ಇಲ್ಲದೆ ಸಂದರ್ಶನದ ಮೂಲಕ ನೇರ ನೇಮಕ ಮಾಡಿಕೊಳ್ಳಲಾಗುವುದು. ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅವಶ್ಯಕತೆ ಇಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಸಂಬಳ, ಪಿಎಫ್ ಸೌಲಭ್ಯ, ಉಚಿತ ಊಟ ಮತ್ತು ವಸತಿ ಸೌಲಭ್ಯ ಇರುತ್ತದೆ.

ಸೂಕ್ತ ವಿದ್ಯಾರ್ಹತೆ, ಅನುಭವಿ, ಉತ್ಸಾಹಿ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಲಾದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ವಿಚಾರಿಸಬಹುದಾಗಿದೆ. 9164107907, 9986649963, 7619619118 ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!