LPG ಗ್ರಾಹಕರಿಗೆ ಮತ್ತೊಮ್ಮೆ ಶಾ’ಕ್ ನೀಡಿದ ಸರ್ಕಾರ, ಬೆಲೆ ಏರಿಕೆ ಕಂಡು ಜನ ಏನ್ ಅಂದ್ರು ನೋಡಿ

0 1

ಅಡುಗೆಗೆ ಬಳಸುವ ಎಲ್ ಪಿಜಿ ಸಿಲಿಂಡರ್ ಹೆಚ್ಚಿನ ಅವಶ್ಯಗಳಲ್ಲಿ ಒಂದು.‌ ಎಲ್ಲಾ ಪಿಜಿ ಸಿಲಿಂಡರ್ ನ ಬೆಲೆಯಲ್ಲಿ ಏರು ಪೇರು ಕಂಡುಬರುತ್ತದೆ. ಎಲ್ ಪಿಜಿ ಸಿಲಿಂಡರ್ ನ ಬೆಲೆಯಲ್ಲಿ ದಿನೆ ದಿನೆ ಹೆಚ್ಚಳವಾಗುವುದನ್ನು ನೋಡುತ್ತಿದ್ದೇವೆ. ಇದೀಗ ಮತ್ತೆ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚು ಮಾಡಲಾಗಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕಳೆದ ವರ್ಷದ ಅಕ್ಟೋಬರ್ ಆರಂಭದ ನಂತರ ಮೊದಲ ಬಾರಿಗೆ ಗೃಹ ಅಡುಗೆ ಅನಿಲ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಮಂಗಳವಾರ ಪ್ರತಿ ಸಿಲಿಂಡರ್‌ ಗೆ 50 ರೂಪಾಯಿ ಹೆಚ್ಚಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಕಳೆದ ಬಾರಿ ಅಕ್ಟೋಬರ್ 6 ರಂದು ಎಲ್‌ಪಿಜಿ ಸಿಲಿಂಡರ್‌ ಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು. ಸರ್ಕಾರಿ ತೈಲ ಕಂಪನಿಗಳು ಮಂಗಳವಾರ ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ದರಗಳನ್ನು ಬಿಡುಗಡೆ ಮಾಡಿದೆ ಅದರಲ್ಲಿ 50 ರೂಪಾಯಿ ಏರಿಕೆಯಾಗಿದೆ. ಮಾರ್ಚ್ 22ರಂದು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯು ಲಕ್ನೋದಲ್ಲಿ ರೂಪಾಯಿ 938 ರಿಂದ ರೂಪಾಯಿ 987.5 ರೂಪಾಯಿಗೆ ಏರಿಕೆಯಾಗಿದೆ.

ದೆಹಲಿಯಲ್ಲಿ 14 ಕೆಜಿ ಗ್ಯಾಸ್ ಸಿಲಿಂಡರ್ 949.5 ರೂಪಾಯಿಗೆ ಏರಿಕೆ ಆಗಿದೆ. ಈ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಸಿಲಿಂಡರ್ ನ ಬೆಲೆ 899.50 ರೂಪಾಯಿ ಆಗಿತ್ತು. ದೆಹಲಿ ಹೊರತುಪಡಿಸಿ ಇತರ ಮೆಟ್ರೊ ನಗರಗಳಲ್ಲಿ ಎಲ್‌ಪಿಜಿ ಬೆಲೆಗಳು ಬದಲಾಗಿವೆ. ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ 926 ರೂಪಾಯಿಯಿಂದ 976 ರೂಪಾಯಿಗೆ ಏರಿಕೆಯಾಗಿದೆ. ಲಕ್ನೋದಲ್ಲಿ ಈಗ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ 987.5 ರೂಪಾಯಿಗೆ ಏರಿಕೆ ಕಂಡಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ನ ಬೆಲೆ ಮಾತ್ರವಲ್ಲದೆ 5 ಕೆಜಿ ಮತ್ತು 10 ಕೆಜಿ ಸಿಲಿಂಡರ್ ಗಳ ಬೆಲೆಯನ್ನು ಹೆಚ್ಚಿಸಲಾಗಿದೆ. 5 ಕೆಜಿ ಎಲ್‌ಪಿಜಿ ಸಿಲಿಂಡರ್ 349 ರೂಪಾಯಿಗೆ ಮತ್ತು 10 ಕೆಜಿ ಸಿಲಿಂಡರ್ ಗೆ 669 ರೂಪಾಯಿಗೆ ಏರಿಕೆಯಾಗಿದೆ.

19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ನ ಬೆಲೆಯು 2,003.50 ರೂಪಾಯಿಗೆ ತಲುಪಿದೆ. ಇದಲ್ಲದೆ ಪೆಟ್ರೋಲ್ ಮತ್ತು ಡೀಸಲ್ ಬೆಲೆಯಲ್ಲಿಯೂ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 80 ಪೈಸೆ ಏರಿಕೆಯಾಗಿದೆ. ಮಂಗಳವಾರ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 96.21 ಇದ್ದರೆ ಡೀಸೆಲ್ ದರವು ಲೀಟರ್‌ಗೆ 87.47 ರೂಪಾಯಿ ಆಗಿದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ 110.82 ರೂಪಾಯಿ, ಚೆನ್ನೈನಲ್ಲಿ 102.16 ರೂಪಾಯಿ ಇದೆ. ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ಬೆಲೆಗಳಿಂದ ಜನತೆಗೆ ಪರಿಹಾರ ನೀಡಲು ಕೇಂದ್ರವು ನವೆಂಬರ್ 4 ರಂದು ಅಬಕಾರಿ ಸುಂಕವನ್ನು ಕಡಿತಗೊಳಿಸಿತು. ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಸುಂಕವನ್ನು 5 ರೂಪಾಯಿ ಮತ್ತು ಡೀಸೆಲ್‌ಗೆ 10 ರೂಪಾಯಿಯಷ್ಟು ಕಡಿತಗೊಳಿಸಿದ್ದು ಇಂಧನದ ಬೆಲೆಯಲ್ಲಿ ಗಣನೀಯ ಇಳಿಕೆಗೆ ಕಾರಣವಾಯಿತು.

ಈಗಾಗಲೇ ಸತತ 2 ವರ್ಷಗಳಿಂದ ಜನರ ಸ್ಥಿತಿ ಅದೋಗತಿಗೆ ಹೋಗಿದೆ, ನಾವು ಬದುಕೋದೇ ಕಷ್ಟವಾಗುತ್ತಿದೆ ಕೊರೊನ ಕಾರಣದಿಂದ ಕೆಲಸ ಇಲ್ಲದೆ ಪರದಾಡುತ್ತಿದ್ದೆವು, ಆದ್ರೆ ಇವತ್ತು ಸ್ವಲ್ಪ ಮಟ್ಟಿಗೆ ಅದೋ ಇದೋ ಕೆಲಸ ಸಿಕ್ಕಿದೆ ಅಂತದ್ರಲ್ಲಿ ಅಡುಗೆ ಎಣ್ಣೆ, ಗ್ಯಾಸ್, ಪೆಟ್ರೋಲ್, ಡೀಸೆಲ್ ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯಾಗಿದ್ದು ನಾವುಗಳು ಬದುಕೋದು ಕಷ್ಟಕರವಾಗಿದೆ ಸರ್ಕಾರ ನಮ್ಮ ಕಡೆ ಒಲವು ತೋರಿಸೋದು ಬಿಟ್ಟು ದಿನೆ ದಿನೇ ಒಂದಲ್ಲ ಒಂದು ವಸ್ತು ಅಥವಾ ಸಾಮಗ್ರಿಗಳ ಬೆಲೆ ಏರಿಕೆ ಮಾಡುತ್ತಲೇ ಬರುತ್ತಿದೆ ಇದರಿಂದ ನಾವುಗಳು ಬದುಕೋದು ತುಂಬಾನೇ ಕಷ್ಟಕರವಾಗಿದೆ ಎಂಬುದಾಗಿ ಜನ ಸಾಮಾನ್ಯರು ಆ’ಕ್ರೋಶ ವ್ಯಕ್ತ ಪಡಿಸಿದ್ದಾರೆ

Leave A Reply

Your email address will not be published.