ಏಪ್ರಿಲ್ ತಿಂಗಳಿಂದ ಗೋಧಿ ಸಿಗಲ್ವಾ? ರೇಷನ್ ವಿತರಣೆಯಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಗೊತ್ತೆ

0 0

ಪಡಿತರ ಕಾರ್ಡ್ ಹೊಂದಿದವರಿಗೆ ಕೊರೋನ ವೈರಸ್ ಹರಡುವಿಕೆಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ಗೋಧಿ ಹಾಗೂ ಇನ್ನಿತರ ಅಡುಗೆ ಸಾಮಾಗ್ರಿಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದರು. ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗೋಧಿ ಕೊಡುವುದನ್ನು ನಿಲ್ಲಿಸಲಾಗುತ್ತದೆ ಎಂದು ಸರ್ಕಾರ ಆದೇಶ ಮಾಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಚಿಕ್ಕಬಳ್ಳಾಪುರದ ನ್ಯಾಯಬೆಲೆ ಅಂಗಡಿಗಳಲ್ಲಿ ಇದುವರೆಗೂ ವಿತರಿಸಲಾಗುತ್ತಿದ್ದ ಗೋಧಿ ಇನ್ನು ಪಡಿತರ ಚೀಟಿದಾರರಿಗೆ ಸಿಗುವುದಿಲ್ಲ. ಮಾರ್ಚ್ ತಿಂಗಳಿನಲ್ಲಿ ಗೋಧಿ ವಿತರಣೆ ಕೊನೆಯಾಗಲಿದೆ. ಇದರ ಬದಲು ಏಪ್ರಿಲ್‌ನಿಂದ ಹೆಚ್ಚುವರಿಯಾಗಿ ಪ್ರತಿ ಸದಸ್ಯನಿಗೆ 1 ಕೆ.ಜಿ. ಅಕ್ಕಿ ವಿತರಣೆಯಾಗಲಿದೆ ಎಂದು ಹೇಳುತ್ತಿದ್ದಾರೆ. ಪಡಿತರ ಅಂಗಡಿಗಳಲ್ಲಿ ಸರ್ಕಾರದಿಂದ ಇದುವರೆಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕೋಟಾದಲ್ಲಿ ಪ್ರತಿ ಸದಸ್ಯನಿಗೆ 10 ಕೆ.ಜಿ ಹಾಗೂ ಒಂದು ಪಡಿತರ ಕಾರ್ಡ್‌ಗೆ 2 ಕೆ.ಜಿ. ಗೋಧಿ ವಿತರಣೆ ಮಾಡಲಾಗುತ್ತಿತ್ತು ಆದರೆ ಏಪ್ರಿಲ್ ತಿಂಗಳಿನಿಂದ ಕೊರೋನ ವೈರಸ್ ಹರಡುವಿಕೆಯ ಕಾರಣ ಕೇಂದ್ರ ಸರ್ಕಾರ ವಿತರಣೆ ಮಾಡುತ್ತಿದ್ದ ತಲಾ 5 ಕೆ.ಜಿ. ಅಕ್ಕಿ ವಿತರಣೆಯ ಬಾಬ್ತು ಕೂಡ ಮುಗಿಯಲಿದೆ.

ಪ್ರತಿ ಸದಸ್ಯನಿಗೆ 1 ಕೆ.ಜಿ. ಅಕ್ಕಿ ಪಡಿತರದಾರರಿಗೆ ಏಪ್ರಿಲ್‌ನಿಂದ ಪ್ರತಿ ಸದಸ್ಯನಿಗೆ ತಲಾ 5 ಕೆ.ಜಿ ಅಕ್ಕಿ ಹಾಗೂ ಗೋಧಿ ಬದಲು ಪ್ರತಿ ಸದಸ್ಯನಿಗೆ 1 ಕೆ.ಜಿ. ಸೇರಿ 6 ಕೆ.ಜಿ ಅಕ್ಕಿ ಸಿಗಲಿದ್ದು, ಇನ್ನುಮುಂದೆ ಗೋಧಿ ವಿತರಣೆ ಇರುವುದಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಅಕ್ಕಿಯಷ್ಟೆ ಪಡಿತರದಾರರಿಗೆ ಸಿಗಲಿದೆ. ರಾಜ್ಯ ಸರ್ಕಾರದಿಂದ ಆದೇಶ ಬಂದಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ಮುಂದಿನ ತಿಂಗಳಿನಿಂದ ಗೋಧಿ ಸಿಗುವುದಿಲ್ಲ. ಗೋಧಿ ಬದಲು ಪ್ರತಿ ಸದಸ್ಯನಿಗೆ 1 ಕೆ.ಜಿ ಅಕ್ಕಿ ಹೆಚ್ಚುವರಿಯಾಗಿ ವಿತರಿಸಲಿದ್ದಾರೆ ಎಂದು ತಿಳಿಸಲಾಗಿದೆ. ಜೊತೆಗೆ ಕೇಂದ್ರ ಸರ್ಕಾರದಿಂದ ಕೋವಿಡ್ ಪ್ರಯುಕ್ತ ನೀಡಲಾಗುತ್ತಿದ್ದ ತಲಾ 5 ಕೆ.ಜಿ ಅಕ್ಕಿ ಕೂಡ ಏಪ್ರಿಲ್‌ನಿಂದ ಸಿಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ ಈ ನಿರ್ಧಾರಕ್ಕೆ ಆಗಲೆ ಪಡಿತರದಾರರಲ್ಲಿ ಆಕ್ಷೇಪ ವ್ಯಕ್ತವಾಗಿದೆ. ರಾಜ್ಯದ ಅಂತ್ಯೋದಯ ಕಾರ್ಡ್ ಇರುವ ಪಡಿತರದಾರರಿಗೆ ಸರ್ಕಾರದಿಂದ ರಾಗಿ ಖರೀದಿ ಮಾಡಿ ಪ್ರತಿ ಕಾರ್ಡ್ ಗೆ 15 ಕೆ.ಜಿ ರಾಗಿ ಕೂಡ ವಿತರಣೆ ಮಾಡಲು ನಿರ್ಧರಿಸಿದ್ದಾರೆ, ಈಗಾಗಲೆ ರಾಗಿಯನ್ನು ಬೆಂಬಲ ಬೆಲೆಗೆ ಖರೀದಿ ಮಾಡಲಾಗಿದ್ದು, ಏಪ್ರಿಲ್ ನಿಂದಲೆ ರಾಗಿ ವಿತರಣೆ ಮಾಡುವುದಾಗಿ ಸರ್ಕಾರ ಹೇಳಿದೆ. ಪಡಿತರ ಕಾರ್ಡ್ ಗೆ ಒಟ್ಟು 35 ಕೆ.ಜಿ ನೀಡಬೇಕಿದ್ದು, ರಾಗಿ 15 ಕೆ.ಜಿ ಹಾಗೂ ಅಕ್ಕಿ 20 ಕೆ.ಜಿ ವಿತರಣೆಯಾಗಲಿದೆ. ಹೆಚ್ಚುವರಿ ಅಕ್ಕಿ ಸಿಕ್ಕರೂ ಗೋಧಿ ವಿತರಣೆಗೆ ಬ್ರೇಕ್ ಹಾಕಿರುವುದಕ್ಕೆ ಸಹಜವಾಗಿಯೆ ಜನರ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿದೆ.

ಪಡಿತರ ಅಂಗಡಿ ಎಂದರೆ ಕೇವಲ ಅಕ್ಕಿ ವಿತರಣೆ ಕೇಂದ್ರವಾಗಿ ಮಾರ್ಪಾಡಾಗಿದೆ. ಈ ಮೊದಲು ಎಣ್ಣೆ, ಸೋಪು, ಸಕ್ಕರೆ ಹೀಗೆ ಇನ್ನಷ್ಟು ಪದಾರ್ಥಗಳನ್ನು ಮಾರಲಾಗುತ್ತಿತ್ತು. ಸಕ್ಕರೆ ವಿತರಣೆ ಕೂಡ ನಿಂತು ವರ್ಷಗಳಾಗಿವೆ. ಈಗ ಗೋಧಿಯನ್ನು ನಿಲ್ಲಿಸಲಾಗುತ್ತಿದೆ. ಹೀಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಸದ್ಯಕ್ಕೆ ಕೇವಲ ಅಕ್ಕಿ ಮಾತ್ರ ಸಿಗಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಸಕ್ಕರೆ, ಗೋಧಿ, ಅಕ್ಕಿಯ ಅವಶ್ಯಕತೆ ಈ ಭಾಗದ ಜನರಿಗೆ ಹೆಚ್ಚಿದೆ. ಇದುವರೆಗೂ ನೀಡುತ್ತಿದ್ದ ಅಲ್ಪ ಪ್ರಮಾಣದ ಗೋಧಿಯನ್ನೆ ಅಲ್ಲಿಯ ಜನರು ಹಿಟ್ಟು ಮಾಡಿಸಿಕೊಂಡು ವಿವಿಧ ಅಡುಗೆಗಳಲ್ಲಿ ಬಳಸುತ್ತಿದ್ದರು ಆದರೆ ಈಗ ಗೋಧಿ ನಿಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ನ್ಯಾಯಬೆಲೆ ಅಂಗಡಿ ಎಂದರೆ ಕೇವಲ ಅಕ್ಕಿ ವಿತರಣಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಪಡಿತರದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಕೇವಲ ಅಕ್ಕಿ ವಿತರಿಸಿದರಷ್ಟೆ ಸಾಲದು ಅತ್ಯವಶ್ಯವಾದ ಗೋಧಿ, ಸಕ್ಕರೆ ಸೇರಿದಂತೆ ಇನ್ನಿತರ ಅಗತ್ಯ ಸಾಮಗ್ರಿಗಳು ಜನರಿಗೆ ದೊರಕಬೇಕು ಎಂಬುದು ಪಡಿತರದಾರರ ಆಗ್ರಹವಾಗಿದೆ. ರಾಜ್ಯ ಸರ್ಕಾರ ಜನರ ಬೇಡಿಕೆಗೆ ಸ್ಪಂದಿಸುತ್ತಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಸರ್ಕಾರ ಗೋದಿ ಕೊಡುವುದನ್ನು ನಿಲ್ಲಿಸುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

Leave A Reply

Your email address will not be published.