Hoskote News: ಬೆಂಗಳೂರಿನ ಫೇಮಸ್ ಬಿರಿಯಾನಿ ಸ್ಪಾಟ್ ಗಳಲ್ಲಿ ಒಂದು ಹೊಸಕೋಟೆ (Hoskote) ಧಮ್ ಬಿರಿಯಾನಿ ಸ್ಪಾಟ್ ಎಂದರೆ ತಪ್ಪಲ್ಲ. ಹೊಸಕೋಟೆಯಲ್ಲಿರುವ ಬಹಳಷ್ಟು ಬಿರಿಯಾನಿ ಹೋಟೆಲ್ ಗಳು, ರುಚಿ ಇಂದಾಗಿ ಇಡೀ ಬೆಂಗಳೂರಿನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದೆ. ಬೆಂಗಳೂರು ಮತ್ತು ಸುತ್ತ ಮುತ್ತಲಿನ ಊರುಗಳಿಂದ ಇಲ್ಲಿಗೆ ಬಿರಿಯಾನಿ ತಿನ್ನೋದಕ್ಕೆ ಬರ್ತಾರೆ ಎಂದರೆ ರುಚಿ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು.
ಇಷ್ಟು ಫೇಮಸ್ ಆಗಿರುವ ಹೊಸಕೋಟೆ ಧಮ್ ಬಿರಿಯಾನಿ ಹೋಟೆಲ್ ಗಳ ಮೇಲೆ ಇತ್ತೀಚೆಗೆ ಐಟಿ ರೈಡ್ (IT Ride) ಆಗಿದೆ. ಹೋಟೆಲ್ ಓನರ್ ಗಳು ಜಿ.ಎಸ್.ಟಿ ಟ್ಯಾಕ್ಸ್ ಪಾವತಿ ವಿಚಾರದಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಅನುಮಾನ ಬಂದಿದ್ದು, ಅಧಿಕಾರಿಗಳು ಹೋಟೆಲ್ ರೈಡ್ ಮಾಡಿದಾಗ ಅಸಲಿ ವಿಚಾರ ಗೊತ್ತಾಗಿದೆ. ಹೊಸಕೋಟೆಯಲ್ಲಿ ಇಂಥ ಮೋಸ ನಡೆಯುತ್ತಿದೆ ಎಂದು ಕೆಲ ದಿನಗಳ ಹಿಂದೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು.
ಹಾಗಾಗಿ 50 ಐಟಿ ಅಧಿಕಾರಿಗಳ ತಂಡ ಹೊಸಕೋಟೆಯ ಸುಮಾರು 7 ಬಿರಿಯಾನಿ ಹೋಟೆಲ್ ಗಳ (Biriyani Hotel) ಮೇಲೆ ದಾಳಿ ನಡೆಸಿದೆ. ಈ ವೇಳೆ ಹೋಟೆಲ್ ನಲ್ಲಿ ಒಂದಷ್ಟು ಹಣ, ಹಾಗೆಯೇ ಮಾಲೀಕರ ಮನೆಯಲ್ಲಿ ಚೆಕ್ ಮಾಡಿದಾಗ ಅಲ್ಲಿ ಸುಮಾರು 1.40 ಕೋಟಿ ರೂಪಾಯಿಗಳ ನಗದು ಸಿಕ್ಕಿದ್ದು, ಅದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಸ್ಥಳೀಯರಿಗೆ ಶಾಕ್ ನೀಡಿದೆ ಎಂದರೆ ತಪ್ಪಲ್ಲ.
ಅಧಿಕಾರಿಗಳು ತಮಗೆ ಸಿಕ್ಕ ಮಾಹಿತಿಯ ಮೇರೆಗೆ ರೈಡ್ ಮಾಡಿದಾಗ ಕೋಟಿಗಟ್ಟಲೇ ಹಣ ಸಿಕ್ಕಿದ್ದು, ಅಕ್ಷಯ್ ಧಮ್ ಬಿರಿಯಾನಿ, ರಾಜು ಧಮ್ ಬಿರಿಯಾನಿ, ಮಣಿ ಧಮ್ ಬಿರಿಯಾನಿ, ಆನಂದ್ ಧಮ್ ಬಿರಿಯಾನಿ ಸೇರಿದಂತೆ ಸುಮಾರು 7 ಕಡೆ ಐಟಿ ದಾಳಿ ನಡೆಸಲಾಗಿದೆ. ರೈಡ್ ವೇಳೆ ಇವರು ಮೋಸ ಮಾಡಿರುವುದಕ್ಕೆ ಸಾಕ್ಷಿಗಳು ಸಹ ಸಿಕ್ಕಿದೆ.
ಕೆಲವು ಹೋಟೆಲ್ ಗಳಲ್ಲಿ ಓನರ್ ಗಳು ಜಿ.ಎಸ್.ಟಿ ಇಂದ ತಪ್ಪಿಸಿಕೊಳ್ಳಲು ಒಂದು ಹೋಟೆಲ್ ನಲ್ಲಿ ಹಲವು QR ಕೋಡ್ ಗಳನ್ನು ಇಡಲಾಗುತ್ತಿತ್ತು, ಪೇಮೆಂಟ್ ಮಾಡುವಂಥ ಬ್ಯಾಂಕ್ ಅಕೌಂಟ್ ಗಳು ಜಾಸ್ತಿ ಆದಾಗ ಕೊಡಬೇಕಾದ ಲೆಕ್ಕ ಕಡಿಮೆ ಆಗುತ್ತದೆ. ಹೀಗೆ ಪೇಮೆಂಟ್ ಅಕೌಂಟ್ ಚೇಂಜ್ ಮಾಡಿ ಪೇಮೆಂಟ್ ಮಾಡಲಾಗುತ್ತಿತ್ತು. ಒಂದೇ ಹೋಟೆಲ್ ನಲ್ಲಿ ಬರೋಬ್ಬರಿ 30 QR ಕೋಡ್ ಗಳು ಕೂಡ ಇದ್ದಿದ್ದು ಇದೆ.
ಅಷ್ಟೇ ಅಲ್ಲದೆ, ಬಿಲ್ ವಹಿವಾಟು ಇದಕ್ಕೆಲ್ಲ ಸಂಬಂಧಿಸಿದ ಹಾಗೆ ಸರಿಯಾದ ಲೆಕ್ಕವನ್ನು ಕೂಡ ನಿರ್ವಹಣೆ ಮಾಡಿರಲಿಲ್ಲ ಎನ್ನುವುದು ಕೂಡ ಗೊತ್ತಾಗಿದೆ. ಈ ಬಿರಿಯಾನಿ ಹೋಟೆಲ್ ಗಳು ಫೇಮಸ್ ಆಗಿದ್ದ ಕಾರಣ ಯಾವಾಗಲೂ ಇಲ್ಲಿ ಹೆಚ್ಚು ಜನರು ಇರುತ್ತಿದ್ದರು. ಹಾಗಾಗಿ ಮೋಸ ಮಾಡುವುದು ಕೂಡ ಹೆಚ್ಚಾಗಿದೆ. ಒಟ್ಟಿನಲ್ಲಿ ರೈಡ್ ಮಾಡಿದಾಗ ಐಟಿ ಅಧಿಕಾರಿಗಳ ಕೈಗೆ ಬರೋಬ್ಬರಿ 1.40 ಕೋಟಿ ರೂಪಾಯಿ ಸಿಕ್ಕಿದೆ.
ಇದನ್ನೂ ಓದಿ: ಸ್ವಂತ ಮನೆ ಆಸ್ತಿ ಹೊಂದಿರುವವರಿಗೆ ಸರ್ಕಾರದಿಂದ ಹೊಸ ನಿಯಮ