ಹುರುಳಿ ಅನ್ನೋದು ಅತ್ಯಂತ ಪೌಷ್ಟಿಕ ಧಾನ್ಯಗಳಲ್ಲಿ ಒಂದಾಗಿದೆ, ಈ ಹುರುಳಿಯನ್ನು ದೇಹದ ಶಕ್ತಿ ವರ್ಧಕವಾಗಿ ಬಳಸಲಾಗುತ್ತದೆ, ಇದನ್ನು ಅಡುಗೆಗಳಲ್ಲಿ ಬಳಸಿ ಸೇವನೆ ಮಾಡುವುದರಿಂದ ದೇಹಕ್ಕೆ ಎನರ್ಜಿ ಸಿಗುತ್ತದೆ ಆದ್ದರಿಂದಲ್ಲೇ ಎತ್ತು, ಕುದುರೆ, ಕೋಣ ಇವುಗಳಿಗೆ ಹುರುಳಿ ತಿನ್ನಿಸುತ್ತಾರೆ, ಇನ್ನು ಇದಕ್ಕೆ ಆಂಗ್ಲ ಭಾಷೆಯಲ್ಲಿ ಹಾರ್ಸಿಗ್ರಾಮ್ ಎಂಬುದಾಗಿ ಕರೆಯಲಾಗುತ್ತದೆ. ಕುದುರೆಯ ಹೆಸರನ್ನೇ ಹೊಂದಿದೆ.
ಈ ಹುರುಳಿಯನ್ನು ಮನುಷ್ಯ ಸೇವನೆ ಮಾಡುವುದರಿಂದ ಎಷ್ಟೆಲ್ಲ ಲಾಭವನ್ನು ಪಡೆಯುತ್ತಾನೆ ಹಾಗೂ ಇದರಿಂದ ಯಾವೆಲ್ಲ ಕಾಯಿಲೆ ರೋಗಗಳನ್ನು ನಿಯಂತ್ರಿಸಬಹುದು ಅನ್ನೋದನ್ನ ಒಮ್ಮೆ ಇಲ್ಲಿ ತಿಳಿಯೋಣ. ಇದರಲ್ಲಿ ಪ್ರೊಟೀನ್, ಖನಿಜ, ಪಾಸಪರಸ್, ವಿಟಮಿನ್ A ಅಂಶವನ್ನು ಕಾಣಬಹುದು.
ಇನ್ನು ಹುರುಳಿ ಹೇಗೆ ಸಹಕಾರಿ ಅನ್ನೋದನ್ನ ನೋಡುವುದಾದರೆ, ಹುರುಳಿಯ ಸೇವನೆಯಿಂದ ಧಾರಾಳ ಮೂತ್ರ ವಿಸರ್ಜನೆಯಾಗುತ್ತದೆ. ಇದರಿಂದ ಮೂತ್ರ ಜನಕಾಂಗದಲ್ಲಿ ಹರಳಾಗುವ ಅಪಾಯ ದೂರವಾಗುತ್ತದೆ. ಒಂದು ವೇಳೆ ಹರಳುಗಳಾಗಿದ್ದರೆ ಹೊರಹಾಕಿಸಲು ಇದು ಪ್ರಯೋಜನಕಾರಿ. ಅಷ್ಟೇ ಅಲ್ಲದೆ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಬಿಳಿ ಸೆರಗು ನಿವಾರಣೆಗೆ ಸಹಕಾರಿಯಾಗಿದ್ದು. ಹುರುಳಿಯ ಕಷಾಯ ನೆಗಡಿ ಕೆಮ್ಮು ಜ್ವರ ದಾಹಗಳನ್ನು ನಿವಾರಿಸುತ್ತದೆ.
ಪ್ರತಿ ಸಾಮಾನ್ಯರಿಗೂ ಸುಲಭವಾಗಿ ಸಿಗುವಂತ ಈ ಹುರುಳಿ ಉತ್ತಮವಾದ ಆರೋಗ್ಯಕರ ಗುಣಗಳನ್ನು ಹೊಂದಿದೆ. ಆದ್ದರಿಂದ ತಿಂಗಳಲ್ಲಿ ಮೂರೂ ನಾಲ್ಕು ಬಾರಿಯಾದ್ರು ಇದನ್ನು ಸೇವಿಸಬೇಕು ಅನ್ನುತ್ತಾರೆ ತಜ್ಞರು. ಇನ್ನು ಮಲಬದ್ಧತೆ, ಮೂಲವ್ಯಾದಿ, ಮೂತ್ರ ಕೆಟ್ಟು ವಾಯು ಸಮಸ್ಯೆಗಳಿಗೆ ಇದು ಔಷಧಿಯಾಗಿ ಕೆಲಸ ಮಾಡುತ್ತದೆ. ಒಟ್ಟಾರೆಯಾಗಿ ಹುರುಳಿಯನ್ನು ಬಳಸುವುದರಿಂದ ದೇಹಕ್ಕೆ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ.