Horoscope on Shravana masa 2023 : ಶ್ರಾವಣ ತಿಂಗಳು ಅಂದರೆ ಆಗಸ್ಟ್ ತಿಂಗಳಲ್ಲಿ ಹತ್ತಾರು ವಿಶೇಷ ಕೆಲಸಗಳು ಆಗಲಿವೆ ಹಾಗೂ ಶುಭಕಾರ್ಯಗಳು ಆಗಲಿವೆ, ಈ ಶ್ರಾವಣ ತಿಂಗಳಲ್ಲಿ ಗ್ರಹಗಳ ಬದಲಾವಣೆಯಿಂದ ಕೆಲವು ರಾಶಿಗಳಿಗೆ ಅದೃಷ್ಟ ಒದಗಿ ಬರುತ್ತದೆ. ಮುಖ್ಯವಾಗಿ ಈ ನಾಲ್ಕು ರಾಶಿಯವರಿಗೆ ಶಿವನ ಶ್ರೀರಕ್ಷೆ ಇರುತ್ತೆ, ಜೊತೆಗೆ ಇವರ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಅಷ್ಟಕ್ಕೂ ಈ ನಾಲ್ಕು ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ಮುಂದೆ ನೋಡಿ

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಉತ್ತಮ ಫಲವಿದೆ, ಅಷ್ಟೇ ಅಲ್ಲದೆ ಮಾಡುವಂತ ಕೆಲಸ ಕಾರ್ಯದಲ್ಲಿ ಲಾಭವುಂಟು, ಯಾವುದೇ ಕಷ್ಟ ನಷ್ಟ ಬರದಂತೆ ಶಿವನ ಶ್ರೀರಕ್ಷೆ ಸಿಂಹ ರಾಶಿಯವರ ಮೇಲಿರಲಿದೆ. ನಿಮ್ಮ ಕೆಲಸಗಳಿಗೆ ಸಂಗಾತಿಯ ಬೆಂಬಲ ದೊರೆಯಲಿದ್ದು ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಗಳಿಸಲಿದ್ದೀರಿ.

ಮಿಥುನ ರಾಶಿ: ಈ ರಾಶಿಯವರಿಗೆ ಶ್ರಾವಣ ತಿಂಗಳಲ್ಲಿ ಒಳ್ಳೆಯ ಫಲವಿದೆ ಹಾಗೂ ಮಾಡುವಂತ ಕೆಲಸ ಕಾರ್ಯದಲ್ಲಿ ಜಯ ನಿಮ್ಮದೇ. ಶಿವ ಪಾರ್ವತಿಯ ಆಶೀರ್ವಾದ ಇರುವುದರಿಂದ ಈ ರಾಶಿಯವರಿಗೆ ಮದುವೆ ಯೋಗ ಕುಡಿ ಬಂದಿದೆ. ಇನ್ನು ಹೊಸ ಕೆಲಸಗಳಿಗೆ ಕೈ ಹಾಕುವ ಮುನ್ನ ಹಿರಿಯರ ಸಲಹೆ ಪಡೆಯುವುದು ಉತ್ತಮ. ಒಟ್ಟಾರೆ ಮಿಥುನ ರಾಶಿಯವರಿಗೆ ಹೆಚ್ಚಾಗಿ ಶುಭ ಫಲಗಳು ಇವೆ.

ಮಕರ ರಾಶಿ: ಈ ಶ್ರಾವಣ ತಿಂಗಳಲ್ಲಿ ಮಕರ ರಾಶಿಯವರ ಜೀವನ ಹೇಗಿರುತ್ತೆ ಅಂದ್ರೆ, ಆಗಸ್ಟ್ ತಿಂಗಳ ಗ್ರಹ ಬದಲಾವಣೆಗಳಿಂದ ಮಕರ ರಾಶಿಯಲ್ಲಿ ವಿಶೇಷ ಬದಲಾವಣೆ ಆಗಲಿದೆ. ಪ್ರೇಮಿಗಳಿಗೆ ಸಿಹಿ ಸುದ್ದಿ ಇದೆ, ಇನ್ನೂ ವ್ಯಾಪಾರ ವ್ಯವಹಾರ ಮಾಡುವವರಿಗೆ ವಿಶೇಷ ಯೋಗವಿದೆ ಹಣಕಾಸಿನ ಸ್ಥಿತಿ ಉತ್ತಮವಾಗಿದೆ. ಮನೆಯರ ಸಹಕಾರ ಸಿಗಲಿದೆ ದೂರದ ಪ್ರಯಾಣದಲ್ಲಿ ಸ್ವಲ್ಪ ಎಚ್ಚರವಹಿಸಿ ಎಲ್ಲ ಒಳ್ಳೆಯದಾಗುತ್ತೆ.

ವೃಶ್ಚಿಕ ರಾಶಿ: ಈ ಶ್ರವಣ ತಿಂಗಳಲ್ಲಿ ಹಲವು ಬದಲಾವಣೆಗಳು ಆಗಲಿವೆ ವೃಶ್ಚಿಕ ರಾಶಿಯವರಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚಿನ ಆರ್ಥಿಕ ಲಾಭವು ಕೂಡ ಸಿಗುತ್ತದೆ. ವಿವಾಹಕ್ಕೆ ಸಂಬಂಧಪಟ್ಟ ಹಾಗೆ ಹಿರಿಯರ ಸಲಹೆ ಪಡೆದುಕೊಳ್ಳಿ ಕಷ್ಟ ಉಂಟಾಗುವ ಸೂಚನೆ ಇದ್ದರೂ ಅಂತಹ ಕೆಲಸಕ್ಕೆ ಕೈ ಹಾಕುವುದನ್ನು ಬಿಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಇದನ್ನೂ ಓದಿ Horoscope August: ಹಲವು ವರ್ಷಗಳ ನಂತರ ಮಂಗಳ ಶುಕ್ರ ಮೈತ್ರಿ, ಈ 3 ರಾಶಿಯವರಿಗೆ ಸಂಪತ್ತು ಹೆಚ್ಚಾಗಲಿದೆ. ಇವರನ್ನ ಯಾರಿಂದಲೂ ತಡೆಯೋಕೇ ಆಗಲ್ಲ

By AS Naik

Leave a Reply

Your email address will not be published. Required fields are marked *