Horoscope October Month 2023: ಮೊದಲಿಗೆ ಸಿಂಹ ರಾಶಿ. ಸಿಂಹ ರಾಶಿಯವರಿಗೆ ಈ ತಿಂಗಳು ದೈಹಿಕ ಆರೋಗ್ಯದಲ್ಲಿ ಸಮಸ್ಯೆ ಬರುವುದಿಲ್ಲ ಆದರೆ ಮಾನಸಿಕ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಹಿಂದೆ ಉಂಟಾದ ಮನಸ್ತಾಪಗಳು ಈ ಸಮಯದಲ್ಲಿ ಸರಿಹೋಗುತ್ತವೆ. ಹಾಗೆಯೇ ಸಮಯದಲ್ಲಿ ಸಿಂಹ ರಾಶಿಯವರಿಗೆ ಕಂಟಕ ಶನಿಯ ಪ್ರಭಾವ ಇರುವುದರಿಂದ ಮಾನಸಿಕವಾಗಿ ಬೋಧನೆಯನ್ನು ಅನುಭವಿಸುತ್ತೀರಾ ಇನ್ನೂ ಭಾಗ್ಯ ಸ್ಥಾನದಲ್ಲಿರುವಂತಹ ಗುರು ಮತ್ತು ರಾಹು ನಿಮಗೆ ಭಾಗ್ಯವನ್ನ ಕೊಡುತ್ತಾರೆ ಆದ್ದರಿಂದ ನಿಮಗೆ ಈ ಸಮಯ ಮಿಶ್ರಫಲ ಕಂಡುಬರುತ್ತದೆ.

ಕನ್ಯಾ ರಾಶಿ. ಕನ್ಯಾ ರಾಶಿಯವರಿಗೆ ರಾಶಿ ಅಧಿಪತಿ ಉಚ್ಚ ಸ್ಥಾನದಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲ ಸಿಗಲಿದೆ ಹಾಗೂ ವಿದೇಶ ಪ್ರಯಾಣದ ಸಾಧ್ಯತೆ ಕೂಡ ಹೆಚ್ಚಾಗಿದೆ ಹಾಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯಬಹುದಾಗಿದೆ. ಕುಜ ಮತ್ತು ರಾಹು ಕೊಟ್ಟಿಗೆ ಇರುವುದರಿಂದ ಸ್ವಲ್ಪ ಸಂಬಂಧಗಳಲ್ಲಿ ಮನಸ್ತಾಪ ಉಂಟಾಗಬಹುದು ಕಚೇರಿಯ ವಿಚಾರದಲ್ಲೂ ಸಹ ವ್ಯಾಜ್ಯಗಳು ಉಂಟಾಗಬಹುದು ಅದನ್ನ ಅಲ್ಲಿಗೆ ಪರಿಹರಿಸಿಕೊಳ್ಳಬೇಕು ಇನ್ನು ಶನಿಯಿಂದ ನಿಮಗೆ ಒಳ್ಳೆಯ ಫಲಗಳೇ ಕನ್ಯಾ ರಾಶಿಯವರು ಆದಷ್ಟು ಶುಕ್ರನನ್ನ ಆರಾಧನೆ ಮಾಡುವುದರಿಂದ ಒಳ್ಳೆಯ ಫಲಗಳನ್ನು ಪಡೆಯಬಹುದು.

ತುಲಾ ರಾಶಿ. ತುಲಾ ರಾಶಿಯವರು ಈ ತಿಂಗಳಿನ ನಂತರದಲ್ಲಿ ರಾಹು ಕೇತುವಿನ ಬದಲಾವಣೆಯಿಂದ ಉತ್ತಮ ಫಲಗಳನ್ನು ಪಡೆಯುತ್ತಾರೆ ಇನ್ನು ಕೆಲವೊಂದು ಸಮಯದಲ್ಲಿ ನಿಮ್ಮ ಸ್ವಂತದವರಿಂದ ಸ್ವಲ್ಪ ಕಿರುಕುಳ ಉಂಟಾಗುವ ಸಾಧ್ಯತೆ ಇರುತ್ತದೆ ಹಾಗೆಯೇ ಕೆಲವೊಂದು ವ್ಯವಹಾರಗಳಲ್ಲಿಯೂ ಕೂಡ ಸ್ವಲ್ಪ ಏರುಪೇರು ಕಾಣಿಸಿಕೊಳ್ಳಬಹುದು ಈ ಅಕ್ಟೋಬರ್ ತಿಂಗಳು ಮುಗಿದ ನಂತರ ನಿಮ್ಮ ರಾಶಿಯಲ್ಲಿ ಫಲಗಳು ತುಂಬಾ ಚೆನ್ನಾಗಿರುವುದರಿಂದ ಆದಷ್ಟು ಶುಭಕಾರ್ಯಗಳನ್ನ ಅಕ್ಟೋಬರ್ ನ ನಂತರದ ದಿನಗಳಲ್ಲಿ ನಡೆಸಲು ಪ್ರಯತ್ನಿಸಿ. ಹಾಗೆಯೇ ತುಲಾ ರಾಶಿಯವರಿಗೆ ಈ ಒಂದು ತಿಂಗಳಲ್ಲಿ ಕಣ್ಣಿನ ಸಮಸ್ಯೆ ಹಾಗೂ ಬೆನ್ನಿನ ಸಮಸ್ಯೆ ಕಾಣುವ ಸಾಧ್ಯತೆಗಳು ಸಹ ಇದೆ ಆದ್ದರಿಂದ ಈ ತಿಂಗಳಲ್ಲಿ ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದು ಉತ್ತಮ. ತುಲಾ ರಾಶಿಯವರು ಈ ತಿಂಗಳಿನಲ್ಲಿ ಧನ್ವಂತರಿ ಜಪವನ್ನು ಮಾಡುವುದರಿಂದ ಒಳ್ಳೆಯ ಫಲಗಳನ್ನು ಪಡೆಯಬಹುದು.

Horoscope October Month 2023

ವೃಶ್ಚಿಕ ರಾಶಿ. ವೃಶ್ಚಿಕ ರಾಶಿಯವರು ಈ ಸಮಯದಲ್ಲಿ ಬೇರೆಯವರಿಗೆ ಮಾಡುವ ಸಹಾಯ ಹೆಚ್ಚಾಗುತ್ತದೆ ಆದ್ದರಿಂದ ಊರಿಗೆ ಉಪಕಾರಿಯಾಗಿ ಮನೆಗೆ ಮಾರಿಯಾಗುವ ಸಂದರ್ಭದಲ್ಲಿ ಕೊಳ್ಳಬೇಡಿ. ಇನ್ನು ಈ ಸಂದರ್ಭದಲ್ಲಿ ಹೊಸ ಹೊಸ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುತ್ತೀರಿ ಹಾಗೆಯೇ ಹೊಸ ಸ್ಥಳಗಳಿಗೆ ಭೇಟಿ ನೀಡುತ್ತೀರಿ ಇದರಿಂದ ಮನಸ್ಸಿಗೆ ಇದು ನಿಮ್ಮ ಖುಷಿಗೆ ಕಾರಣವಾಗುತ್ತದೆ. ಹಾಗೇ ಈ ತಿಂಗಳಲ್ಲಿ ನೀವು ಹಣವನ್ನು ಉಳಿಸಲು ಕಷ್ಟಪಡುತ್ತೀರಿ ಆದರಿಂದ ಸ್ವಲ್ಪ ಮಾನಸಿಕ ಒತ್ತಡ ನಿಮ್ಮನ್ನು ಕಾಡಬಹುದು. ಅರ್ಧಾಷ್ಟಮ ಶನಿ ನಿಮ್ಮಲ್ಲಿ ನಡೆಯುತ್ತಿರುವುದರಿಂದ ನೀವು ಎಚ್ಚರಿಕೆ ವಹಿಸಬೇಕಾಗುತ್ತದೆ ಆದ್ದರಿಂದ ಶಿವನನ್ನು ಮತ್ತು ಶನಿಯನ್ನು ಆರಾಧನೆ ಮಾಡುವುದರಿಂದ ಒಳ್ಳೆಯ ಫಲವನ್ನು ಪಡೆಯಬಹುದು.

ಧನು ರಾಶಿ. ಧನು ರಾಶಿಯವರಿಗೆ ಈ ಸಮಯದಲ್ಲಿ ಗುರುಬಲ ಇರುವುದರಿಂದ ಒಳ್ಳೆಯ ಫಲಗಳನ್ನು ಕಾಣಬಹುದು ಆದ್ದರಿಂದ ಈ ತಿಂಗಳಿನಲ್ಲಿ ಒಳ್ಳೆಯ ಫಲಗಳನ್ನೇ ಕಾಣುತ್ತೀರಿ ಅದರಿಂದ ಭಯಪಡುವ ಸಂದರ್ಭ ಇರುವುದಿಲ್ಲ ಇದನ್ನು ಹೊರತುಪಡಿಸಿ ನಿಮ್ಮ ವೃತ್ತಿ ಜೀವನದಲ್ಲಿ ಅಥವಾ ಕುಟುಂಬದಲ್ಲಿ ಸಣ್ಣಪುಟ್ಟ ಬದಲಾವಣೆಗಳು ಉಂಟಾಗಬಹುದು ಅದರಿಂದ ನಿಮಗೆ ಯಾವುದೇ ಹಾನಿ ಉಂಟಾಗುವುದಿಲ್ಲ ಆದ್ದರಿಂದ ಈ ಸಮಯ ಧನಸ್ಸು ರಾಶಿಯವರಿಗೆ ತುಂಬಾ ಚೆನ್ನಾಗಿದೆ ಎಂದು ಹೇಳಬಹುದು ವಿಶೇಷವಾಗಿ ದ್ರವ ಪದಾರ್ಥದ ವ್ಯಾಪಾರ ಮಾಡುವಂಥವರಿಗೆ ಒಳ್ಳೆಯ ಫಲ ಕಂಡುಬರುತ್ತದೆ.

ಮಕರ ರಾಶಿ. ಮಕರ ರಾಶಿಯವರಿಗೆ ಈ ತಿಂಗಳಿನಲ್ಲಿ ಮಿಶ್ರಫಲ ಕಂಡುಬರಲಿದ್ದು ನಿಮ್ಮ ರಾಶಿಯಲ್ಲಿ ಶುಕ್ರನ ವಿಚಾರದಲ್ಲಿ ಕೆಲವೊಂದು ತೊಂದರೆಗಳು ಉಂಟಾಗಬಹುದು ಅಂದರೆ ಮಾಡಲಿಂಗ್ ಎಡಿಟಿಂಗ್ ಅಥವಾ ಚಿತ್ರರಂಗ ಇತ್ಯಾದಿ ಕಲಾವಿದರಿಗೆ ಸ್ವಲ್ಪ ಹಿನ್ನಡೆ ಉಂಟಾಗಬಹುದು ಆದ್ದರಿಂದ ಶುಕ್ರನಿಗೆ ಅಧಿಪತಿಯಾಗಿರುವಂತಹ ಅಮ್ಮನವರನ್ನು ಆರಾಧನೆ ಮಾಡುವುದರಿಂದ ಈ ದೋಷಗಳನ್ನು ಪರಿಹರಿಸಿಕೊಳ್ಳಬಹುದು ಕೇತುವಿನಿಂದ ಈ ಸಮಯದಲ್ಲಿ ನಿಮ್ಮಲ್ಲಿ ವೈರಾಗ್ಯ ಕಾಣಬಹುದು. ಹಾಗೆಯೇ ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುವವರು ಸ್ವಲ್ಪ ಎಚ್ಚರಿಕೆ ವಹಿಸಬೇಕು ಇದನ್ನು ಹೊರತುಪಡಿಸಿ ಹೆಚ್ಚಿಗೆ ಪರಿಹಾರ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ.

ಕುಂಭ ರಾಶಿ. ಸಿಂಹ ರಾಶಿಯವರಿಗೆ ಈ ತಿಂಗಳು ಇಷ್ಟೊಂದು ಯೋಗದಾಯಕವಾಗಿ ಇರುವುದಿಲ್ಲ ಕುಂಭ ರಾಶಿಯವರು ಈ ಸಮಯದಲ್ಲಿ ಕೆಲಸದ ಒತ್ತಡದಿಂದ ನಿಮ್ಮ ತಾಳ್ಮೆಯಿಂದ ಕಳೆದುಕೊಳ್ಳಬಹುದು ಹಾಗೂ ನಿಮ್ಮ ಆರೋಗ್ಯದಲ್ಲಿ ಸಮಸ್ಯೆಯನ್ನು ತಂದುಕೊಳ್ಳಬಹುದು ಅದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನವಹಿಸಬೇಕು ನಿಮ್ಮ ಮಾತಿನ ಮೇಲೆ ನಿಗಾ ವಹಿಸಿ ಬುದ್ದಿವಂತಿಕೆಯಿಂದ ನಿಮ್ಮ ಕೆಲಸದಲ್ಲಿ ತೊಡಗಿದರೆ ಯಶಸ್ಸನ್ನ ಗಳಿಸಿಕೊಳ್ಳಬಹುದು ಈ ತಿಂಗಳಿನಲ್ಲಿ ಕುಂಭ ರಾಶಿಯವರಿಗೆ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಲಿದ್ದು ವಿಶೇಷವಾಗಿ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಬೇಕು.ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ಈ ಸಮಯ ಅಷ್ಟು ಲಾಭದಾಯಕವಾಗಿ ಇರುವುದಿಲ್ಲ ಓದಿನಲ್ಲಿ ಆಸಕ್ತಿ ಕಡಿಮೆಯಾಗಬಹುದು ಆದ್ದರಿಂದ ಸರಸ್ವತಿಯ ಆರಾಧನೆಯನ್ನ ಮಾಡುವುದರಿಂದ ಒಳ್ಳೆಯ ಫಲಗಳನ್ನು ಪಡೆದುಕೊಳ್ಳಬಹುದು.

ಮೀನ ರಾಶಿ. ಮೀನ ರಾಶಿಯವರು ಹಿಂದೇ ಅನುಭವಿಸಿದ್ದ ಕಷ್ಟಕಾರ್ಪಣ್ಯಗಳೆಲ್ಲ ಈ ಸಮಯದಲ್ಲಿ ಒಂದೊಂದಾಗಿ ನಿವಾರಣೆಗೊಳ್ಳುತ್ತವೆ ಈ ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಯೋಗವು ಚೆನ್ನಾಗಿದ್ದು ಅಕ್ಟೋಬರ್ ನ ನಂತರವೂ ಸಹ ರಾಹು ಕೇತುವಿನ ಬದಲಾವಣೆಯಿಂದ ನಿಮ್ಮ ರಾಶಿಯಲ್ಲಿ ಉತ್ತಮ ಬದಲಾವಣೆಗಳು ಉಂಟಾಗುತ್ತದೆ ಆದರೆ ತಾಳ್ಮೆಯಿಂದ ಕಾಯಬೇಕು ನಿಮ್ಮ ಅದೃಷ್ಟದ ಬಾಗಿಲು ಮುಂಬರುವ ದಿನಗಳಲ್ಲಿ ತೆರೆದುಕೊಳ್ಳುತ್ತದೆ ವಿಶೇಷವಾಗಿ ಮೀನ ರಾಶಿಯವರು ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಅಷ್ಟೇ ಅಲ್ಲದೆ ನೀವು ಈ ಸಮಯದಲ್ಲಿ ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೀರಿ ಹಾಗೆ ದೈವದ ಆರಾಧನೆಯಲ್ಲಿ ತೊಡಗಿರುತ್ತೀರಿ ಆದ್ದರಿಂದ ನಿಮ್ಮ ರಾಶಿಯವರಿಗೆ ದೈವದ ಆಶೀರ್ವಾದ ಕವಚವಾಗಿ ನಿಲ್ಲುತ್ತದೆ.

ಇದನ್ನೂ ಓದಿ Sagittarius Horoscope: ಧನು ರಾಶಿಯವರ ಪಾಲಿಗೆ ನವೆಂಬರ್ ತಿಂಗಳು ಹೇಗಿರತ್ತೆ ಗೊತ್ತಾ? ಕಷ್ಟಗಳು ಪರಿಹಾರವಾಗ್ತವಾ..

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!