ಕಾರನ್ನು ಖರೀದಿಸಬೇಕು ಎನ್ನುವುದು ಬಹುತೇಕ ಎಲ್ಲರ ಆಸೆಯಾಗಿರುತ್ತದೆ. ಆದರೆ ಹಣದ ಕೊರತೆ ಇನ್ನಿತರ ಕಾರಣಗಳಿಂದ ಕಾರನ್ನು ಖರೀದಿಸಲು ಮುಂದೆ ಆಗದೆ ತಮ್ಮ ಆಸೆಯನ್ನು ಪೂರೈಸುವುದಿಲ್ಲ. ಮಾರುಕಟ್ಟೆಗೆ ಹೊಂಡಾ ಸಿಟಿಯ ಕಾರು ಬಿಡುಗಡೆಯಾಗಲಿದೆ. ಈ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಐದನೆ ತಲೆಮಾರಿನ ಹೋಂಡಾ ಸಿಟಿಯು ಕಾಂಪ್ಯಾಕ್ಟ್ ಸೆಡಾನ್ ಸೆಗ್ಮೆಂಟ್ ಕಾರು ಮಾರುಕಟ್ಟೆಗೆ ಕಾಲಿಟ್ಟ ತಕ್ಷಣ ಹೊಸದಾದ ಛಾಪು ಮೂಡಿಸಿದೆ. ಈ ಕಾರನ್ನು ಬಲವಾದ ವೈಶಿಷ್ಟ್ಯಗಳೊಂದಿಗೆ ಉತ್ತಮ ಸ್ಟೈಲಿಂಗ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಈಗ ಕಂಪನಿಯು ಹೊಸ ತಲೆಮಾರಿನ ಸಿಟಿಯ ಹೈಬ್ರಿಡ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಬಹುತೇಕ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಕಾರಿಗೆ ಹೋಂಡಾದ ಐ-ಎಮ್ ಎಮ್ ಡಿ ಇಎಚ್ಐವಿ ಹೈಬ್ರಿಡ್ ಸಿಸ್ಟಮ್ ಅನ್ನು ನೀಡಲಾಗುವುದು. ಇದು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಬರುತ್ತದೆ. ಈ ವ್ಯವಸ್ಥೆಯೊಂದಿಗೆ ಹೊಸ ಹೋಂಡಾ ಸಿಟಿಯನ್ನು ವಿದ್ಯುತ್ ಶಕ್ತಿಯಿಂದ ಕೂಡಾ ಚಲಾಯಿಸಬಹುದಾಗಿದೆ.
ಟೊಯೊಟಾ ಕ್ಯಾಮ್ರಿಯನ್ನು ಹಿಂದಿಕ್ಕಿ ಭಾರತದಲ್ಲಿ ಮಾರಾಟವಾಗುವ ಅಗ್ಗದ ಸ್ವಯಂ ಚಾರ್ಜಿಂಗ್ ಹೈಬ್ರಿಡ್ ಕಾರು ಇದಾಗಲಿದೆ. ಹೋಂಡಾ ಸಿಟಿಯ ಹೊಸ ಹೈಬ್ರಿಡ್ ರೂಪಾಂತರವು 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಕಾರಿನಲ್ಲಿ 98ಪಿಎಸ್ ಪವರ್ ಮತ್ತು 127ಎನ್ ಎಮ್ ಪೀಕ್ ಟಾರ್ಕ್ ಇರಲಿದೆ. ಹೊಸ ಕಾರು ವೇಗದಲ್ಲಿ ಮಾತ್ರ ಮುಂದಿರುವುದಲ್ಲದೆ ಅತಿ ಹೆಚ್ಚು ಮೈಲೇಜ್ ಕೂಡಾ ನೀಡುತ್ತದೆ. ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 109ಪಿಎಸ್ ಪವರ್ ಮತ್ತು 253ಎನ್ ಎಮ್ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರಿನ ಇಂಜಿನ್ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಹೋಂಡಾ ಇಂಡಿಯಾ ನ್ಯೂ ಸಿಟಿ ಹೈಬ್ರಿಡ್‌ಗೆ ಮೂರು ಮೋಡ್‌ಗಳನ್ನು ನೀಡಲಾಗಿದೆ. ಇದರಲ್ಲಿ ಪ್ಯೂರ್ ಇವಿ, ಹೈಬ್ರಿಡ್ ಮತ್ತು ಎಂಜಿನ್ ಮಾತ್ರ ಸೇರಿವೆ.
ಕಾರಿನಲ್ಲಿ ಹೈಬ್ರಿಡ್ ಸಿಸ್ಟಮ್ ಅನ್ನು ಸ್ಥಾಪಿಸಿದ ನಂತರ ಕಾರಿನ ಮೈಲೇಜ್ 27.78 ಕೆಎಮ್ ಪಿಎಲ್ ಆಗಲಿದೆ ಎನ್ನಲಾಗಿದೆ. ಈ ಕಾರಿನ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಕಾಂಪ್ಯಾಕ್ಟ್ ಸೆಡಾನ್ ಗಳು ಈಗ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದ್ದು ಹೈಬ್ರಿಡ್ ವ್ಯವಸ್ಥೆಯಿಂದ ಇದರ ಬೆಲೆ ಹೆಚ್ಚಾಗುವುದು ಖಚಿತ. ಇಂತಹ ಪರಿಸ್ಥಿತಿಯಲ್ಲಿ ಹೋಂಡಾ ಸಿಟಿ ಹೈಬ್ರಿಡ್ ಅನ್ನು 17.5 ಲಕ್ಷ ರೂಪಾಯಿ ಎಕ್ಸ್ ಶೋ ರೂಂ ಬೆಲೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಅದರ ಪ್ರಸ್ತುತ ಪೆಟ್ರೋಲ್ ರೂಪಾಂತರದ ಆರಂಭಿಕ ಎಕ್ಸ್ ಶೋ ರೂಂ ಬೆಲೆ 11.23 ಲಕ್ಷ ರೂಪಾಯಿಗಳಾಗಿದೆ ಇದರ ಟಾಪ್ ಮಾಡೆಲ್ ಬೆಲೆ 15.18 ಲಕ್ಷ ರೂ. ಆಗಿದೆ. ಈ ಮಾಹಿತಿಯನ್ನು ಕಾರನ್ನು ಖರೀದಿಸುವ ಮನಸಿರುವವರಿಗೆ ತಪ್ಪದೆ ತಿಳಿಸಿ.