ಒಂದು ಮನೆಯ ನಿರ್ಮಾಣ ಮಾಡುವಾಗ ಹಲವಾರು ಸಂಗತಿಗಳು ಪ್ರಮುಖವಾಗಿರುತ್ತದೆ. ಮನೆಯ ನಿರ್ಮಾಣಕ್ಕೆ ಹೆಚ್ಚಿನ ವೆಚ್ಚ ಬಿಡುವುದರಿಂದ ಮನೆಯ ನಿರ್ಮಾಣ ಮಾಡುವಾಗ ಸರಿಯಾದ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮನೆಯ ಪೌಂಡೇಶನ್ ಹಾಕುವಾಗ ಪಿಲ್ಲರ್ ಹಾಕುವಾಗ ಸ್ಲ್ಯಾಬ್ ಅನ್ನು ಹಾಕುವಾಗ ಸರಿಯಾದ ನಿಯೋಜಿತ ಕ್ರಮಗಳನ್ನು ಅನುಸರಿಸಬೇಕು. ಮನೆ ಸ್ಲಾಬ್ ನಿರ್ಮಾಣದಲ್ಲಿ ಸರಿಯಾದ ಕ್ರಮ ಅನುಸರಿಸದಿದ್ದರೆ ಕ್ರಾಕ್ ಗಳು ಆಗುತ್ತದೆ. ಆದ್ದರಿಂದ ಸ್ಲಾಬ್ ನಲ್ಲಿ ಕ್ರಾಕ್ ಹೇಗೆ ಸಂಭವಿಸುತ್ತದೆ ಮತ್ತು ಅದನ್ನು ತಡೆಗಟ್ಟುವ ವಿಧಾನವನ್ನು ನಾವೇನು ತಿಳಿದುಕೊಳ್ಳೋಣ.

ರೂಪಿಗೆ ಕಾಂಕ್ರೆಟ್ ಹಾಕುವ ಮುಂಚೆ ಶಟರಿಂಗ್ ಮಾಡುವಾಗ ಕೆಲವೊಮ್ಮೆ ಆ ರೂಪಿನ ಕಾಂಕ್ರೀಟ್ ಒಳಗಡೆ ಮರದ ತುಂಡುಗಳು ಉಳಿದುಕೊಂಡುಬಿಡುತ್ತವೆ. ಮನೆ ಕಟ್ಟುವಾಗ ಇದರ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ. ಇದರಿಂದ ನಂತರದ ದಿನಗಳಲ್ಲಿ ಕ್ರ್ಯಾಕ್ ಗಳನ್ನು ಉಂಟುಮಾಡುತ್ತದೆ. ಮೋಲ್ಡ್ ಹಾಕುವ ಸಮಯದಲ್ಲಿ ಹೆಚ್ಚಿನ ಉಷ್ಣಾಂಶವು ಇರಬಾರದು. ಉಷ್ಣಾಂಶ ಹೆಚ್ಚಿರುವ ಸಮಯದಲ್ಲಿ ಮೊಲ್ಡ್ ಹಾಕುವುದರಿಂದ ಕ್ರ್ಯಾಕ್ ಬರುವ ಸಂಭವ ಇರುತ್ತದೆ. ಅತಿಯಾದ ಮಳೆ ಇರುವ ಸಂದರ್ಭದಲ್ಲಿಯೂ ಕೂಡ ಮೋಲ್ಡಿಂಗ್ ಅನ್ನು ಹಾಕಬಾರದು. ಮಳೆ ಬರುವ ಸಂದರ್ಭ ವಿದ್ದಲ್ಲಿ ತಾಡಪಾಲ್ ಗಳನ್ನು ಬಳಸಿ ಸ್ಲ್ಯಾಬ್ ಹಾಕಬೇಕು.

ಶಟರಿಂಗ್ ಮಾಡುವಾಗ ಕಂಬವನ್ನು ಕೊಡುತ್ತಾರೆ. ಈ ಕಂಬದ ಬುಡ ಗಟ್ಟಿಯಾಗಿರಬೇಕು. ಸಾದ ಮಣ್ಣಿನ ಮೇಲಕ್ಕೆ ಇದನ್ನು ಕೂರಬಾರದು. ಏಕೆಂದರೆ ಮೇಲ್ಗಡೆ ಹಾಕಿರುವ ಕಾಂಕ್ರೆಟ್ ಶೇಕ್ ಆಗುತ್ತಾ ಹೋಗುತ್ತದೆ ಹಾಗೂ ಕಾಂಕ್ರೀಟ್ಟ್ ತೂಕ ಜಾಸ್ತಿ ಆಗುತ್ತಾ ಹೋಗುತ್ತದೆ. ಇದರಲ್ಲಿಯೂ ಕೂಡ ಹಲವು ದಿನಗಳ ನಂತರ ಕ್ರ್ಯಾಕ್ ಬರುವ ಸಂಭವ ಇರುತ್ತದೆ. ಹೀಗಾಗಿ ಶಟರಿಂಗ್ ಕಂಬಗಳು ಸ್ಟ್ರಾಂಗ್ ಆಗಿ ಇರುವ ಹಾಗೆ ನೋಡಿಕೊಳ್ಳಬೇಕು. ಸ್ಲ್ಯಾಬ್ ಹಾಕುವಾಗ ವೈಬ್ರೇಟರ್ ಗಳನ್ನು ಸರಿಯಾದ ವಿಧಾನದಲ್ಲಿ ಬಳಸಬೇಕು. ಏಕೆಂದರೆ ವೈಬ್ರೇಟರ್ ಹೆಚ್ಚು ಅಥವಾ ಕಡಿಮೆ ಬಳಕೆ ಮಾಡಬಾರದು. ಇದರಿಂದ ಕಾಂಕ್ರೀಟ್ ಮಿಶ್ರಣದಲ್ಲಿ ಏರುಪೇರಾಗುತ್ತದೆ. ಹೀಗಾಗಿ ಸರಿಯಾಗಿ ಮಾರ್ಗದರ್ಶನ ಹೊಂದಿರುವವರು ಮಾತ್ರ ವೈಬ್ರೆಟರ್ ಗಳನ್ನು ಉಪಯೋಗಿಸಬೇಕು.

ಸ್ಲ್ಯಾಬ್ ಗೆ ಸಿಮೆಂಟನ್ನು ಬಳಸುವಾಗ ಪ್ರಯೋಗ ಮಾಡಬಾರದು. ಸರಿಯಾದ ಬ್ರಾಂಡ್ ನ ಸಿಮೆಂಟ್ ಗಳನ್ನು ಸ್ಲ್ಯಾಬ್ ಗೆ ಬಳಕೆಮಾಡಬೇಕು. ಕೊಂಕ್ರೆಟ್ ಮಿಕ್ಸಿಂಗ್ ಮಾಡುವಾಗ ಸರಿಯಾದ ಮಿಶ್ರಣದ ಪ್ರಮಾಣದಲ್ಲಿ ಮಾಡಬೇಕು.ಮತ್ತೊಂದು ಮುಖ್ಯವಾದ ವಿಚಾರವೆಂದರೆ ಸ್ಲ್ಯಾಬ್ ಗೆ ಕ್ಯೂರಿಂಗ್ ಮಾಡುವುದಾಗಿದೆ. ಕ್ಯೂರಿಂಗ್ ಮಾಡುವ ಸರಿಯಾದ ವಿಧಾನವೆಂದರೆ ಸ್ಲ್ಯಾಬ್ ಹಾಕಿ ಒಂದು ತಾಸಿನ ನಂತರದಿಂದಲೇ ಅಗತ್ಯಕ್ಕೆ ತಕ್ಕಂತೆ ನೀರನ್ನು ಹಾಕುತ್ತಾ ಇರಬೇಕು. ಹದಿನೈದು ದಿನಗಳವರೆಗೆ ಸರಿಯಾದ ಕ್ಯೂರಿಂಗ್ ಅನ್ನು ಮಾಡಬೇಕು. ಹೀಗೆ ಸರಿಯಾದ ವಿಧಾನದಲ್ಲಿ ಸ್ಲ್ಯಾಬ್ ಹಾಕುವುದರಲ್ಲಿ ಕಾರ್ಯನಿರ್ವಹಿಸಿದರೆ ಬಿರುಕುಗಳನ್ನು ತಡೆಗಟ್ಟಬಹುದಾಗಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್
 9448001466

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!