ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಬಳಿ ಇರುವ ಹಣಕ್ಕೆ ಸರಿಯಾಗುವಂತೆ ಸುಂದರ ಮನೆ ಕಟ್ಟಬೇಕು ಎನ್ನುವ ಕನಸಿರುತ್ತದೆ ಆದರೆ ಅದು ಸಾಧ್ಯವಾಗುತ್ತಿರುವುದಿಲ್ಲ, ಕಟ್ಟಡ ಕಟ್ಟುವಾಗ ವೆಸ್ಟೇಜ್ ಜಾಸ್ತಿ ಆಗುತ್ತದೆ, ವರ್ಷಗಳು ಉರುಳಿದರೂ ಮನೆ ಕಟ್ಟುವ ಕೆಲಸ ಮಾತ್ರ ಮುಗಿಯುವುದಿಲ್ಲ. ಈ ಎಲ್ಲಾ ಚಿಂತೆಗೆ ಇಲ್ಲಿದೆ ಪರಿಹಾರ ಅದೇನೆಂದರೆ ಸುರಕ್ಷಾ ಇಂಟರ್ಲಾಕ್ ಮಡ್ ಬ್ಲಾಕ್. ಇದನ್ನು ಬಳಸಿ ಮನೆ ನಿರ್ಮಿಸಿದರೆ ನಿಮ್ಮ ಕನಸಿನಂತೆ ಮನೆ ನಿರ್ಮಾಣವಾಗುತ್ತದೆ. ಅದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.
ಸುರಕ್ಷಾ ಮಡ್ ಬ್ಲಾಕ್ ನಿಂದ ಕಟ್ಟಿದ ಮನೆಯು ಬಾಳಿಕೆ ಬರುತ್ತದೆ. ಮೂಡಬಿದಿರೆಯ ನವೀನ್ ಅವರು ಸುರಕ್ಷಾ ಮಡ್ ಬ್ಲಾಕ್ ಬಳಸಿ ಫಸ್ಟ್ ಫ್ಲೋರ್ ಅನ್ನು ಸುಂದರವಾಗಿ ಕಟ್ಟಿಸಿಕೊಂಡಿದ್ದಾರೆ. ಟ್ರೆಂಡಿಯಾಗಿ ಕಟ್ಟಿಸಿಕೊಂಡಿರುವ ಫಸ್ಟ್ ಫ್ಲೋರ್ ನವೀನ್ ಅವರಿಗೆ ಖುಷಿ ಕೊಡುತ್ತದೆ. ಅವರ ಬಜೆಟ್ ಗಿಂತ ಮೂವತ್ತರಿಂದ ನಲವತ್ತು ಪರ್ಸೆಂಟ್ ಕಡಿಮೆ ವೆಚ್ಚದಲ್ಲಿ ಮನೆಯನ್ನು ಕಟ್ಟಿಸಿದ್ದಾರೆ. ಮೂರು ಜನ ನುರಿತ ಕೆಲಸಗಾರರು ಕೇವಲ ಮೂರು ದಿನದಲ್ಲಿ ಗೋಡೆಯನ್ನು ಕಟ್ಟಿ ಕೆಲಸ ಮುಗಿಸಿದ್ದಾರೆ, ಉಳಿದ ಎಲ್ಲಾ ಕೆಲಸಗಳನ್ನು ಮಾಡಲು ಅವರು ಒಂದು ತಿಂಗಳು ಮಾತ್ರ ತೆಗೆದುಕೊಂಡಿದ್ದಾರೆ. ನವೀನ್ ಅವರ ಕನಸಿನಂತೆ ಅವರ ಮನೆ ಸಾಂಪ್ರದಾಯಿಕವಾಗಿಯೂ ಇದೆ, ನೋಡಲು ಟ್ರೆಂಡಿಯಾಗಿಯೂ ಇದೆ. ನವೀನ್ ಅವರು ನನ್ನ ಕನಸು ಸುರಕ್ಷಾ ಮಡ್ ಬ್ಲಾಕ್ ಗಳ ಮೂಲಕ ನೆರವೇರಿದೆ ಎಂದು ಹೇಳಿಕೊಂಡಿದ್ದಾರೆ. ಅವರು ಗ್ರಾನೈಟ್ ಮತ್ತು ರೂಫ್ ಗೆ ಮಂಗಳೂರು ಹಂಚನ್ನು ಬಳಸಿ ಕಟ್ಟಿಸಿದ್ದಾರೆ. ಮನೆಯ ಒಳಗೆ ನವೀನ್ ಅವರು ತಮಗೆ ಬೇಕಾದ ಹಾಗೆ ಡಿಸೈನ್ ಮಾಡಿಸಿಕೊಂಡಿದ್ದಾರೆ.
ನವೀನ್ ಅವರ ಮನೆಯ ಗೋಡೆಯು ಇಟ್ಟಿಗೆಗಳಂತೆ ಕಾಣುತ್ತದೆ, ಮಡ್ ಬ್ಲಾಕ್ ನಿಂದ ಗೋಡೆ ಕಟ್ಟುವಾಗ ಸಿಮೆಂಟ್ ಬಳಸುವುದಿಲ್ಲ. ಬ್ಲಾಕ್ ನ ನಾಲ್ಕು ಕಡೆ ಲಾಕ್ ಸಿಸ್ಟಮ್ ಇರುತ್ತದೆ ಒಂದಕ್ಕೊಂದು ಗಟ್ಟಿಯಾಗಿ ಅಂಟಿಕೊಳ್ಳುತ್ತದೆ, ನೋಡಲು ಸುಂದರವಾಗಿ ಕಾಣುತ್ತದೆ. ನವೀನ್ ಅವರು ಫಸ್ಟ್ ಫ್ಲೋರ್ ನಲ್ಲಿ ಒಂದು ದೊಡ್ಡ ಹಾಲ್ ಮತ್ತು ಪಕ್ಕದಲ್ಲಿ ಬಾಥರೂಮ್ ಹಾಗೂ ಟಾಯ್ಲೆಟ್ ಕಟ್ಟಿಸಿದ್ದಾರೆ, ಎಲ್ಲ ಗೋಡೆಗಳಿಗೆ ಸುರಕ್ಷಾ ಮಡ್ ಬ್ಲಾಕ್ ಗಳನ್ನು ಬಳಸಿದ್ದಾರೆ. ಈ ಬ್ಲಾಕ್ ನ ವಿಶೇಷತೆ ಎಂದರೆ ಹೊರಗಡೆ ಎಷ್ಟೆ ಬಿಸಿಲಿದ್ದರೂ ಬ್ಲಾಕ್ ತಂಪಾಗಿರುತ್ತದೆ, ಮನೆಯ ಒಳಗೆ ತಂಪನ್ನು ನೀಡುತ್ತದೆ. ದೊಡ್ಡ ಕಿಟಕಿಗಳನ್ನು ಹಾಕಿದರೆ ಗಾಳಿ ಪಾಸಾಗಿ ಬೇಸಿಗೆಯಲ್ಲಿ ಸೆಕೆ ಆಗುವುದಿಲ್ಲ. ಗೋಡೆಗೆ ಪೇಂಟ್ ಮಾಡಿಸಲಾಗಿದೆ. ಗೋಡೆಯ ಮೇಲೆ ಆರ್ಟ್ ಗಳನ್ನು ಹಾಕಿಕೊಳ್ಳಬಹುದು. ಕರೆಂಟ್ ವೈರಿಂಗ್ ಮಾಡಿರುವುದು ಕಾಣುವುದಿಲ್ಲ, ಗೋಡೆಯ ಒಳಗೆ ವೈರಿಂಗ್ ಮಾಡಿ ಸಿಮೆಂಟ್ ನ ಪ್ಲಾಸ್ಟರಿಂಗ್ ಮಾಡಿಸಲಾಗುತ್ತದೆ. ಈ ಬ್ಲಾಕ್ ಗಳನ್ನು ಬಳಸಿ ನಿರ್ಮಿಸಿದ ಮನೆಯು ಪರಿಸರಸ್ನೇಹಿಯಾಗಿರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಸುರಕ್ಷಾ ಮಡ್ ಬ್ಲಾಕ್ ಗಳನ್ನು ಬಳಸಿ ನಿಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಿ.