ಎಂತಹ ಥೈರಾಡ್ ಸಮಸ್ಯೆ ಇದ್ರು ಶಾಶ್ವತವಾಗಿ ಪರಿಹಾರ ನೀಡುತ್ತೆ ಈ ಬೀಜಗಳು

0 43

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಒಂದು ಮುಖ್ಯವಾದ ಆರೋಗ್ಯ ಸಮಸ್ಯೆಯಾಗಿದೆ. ಥೈರಾಯ್ಡ್ ಎಂದರೇನು, ಥೈರಾಯ್ಡ್ ಸಮಸ್ಯೆ ಹೇಗೆ ಬರುತ್ತದೆ. ಥೈರಾಯ್ಡ್ ನಲ್ಲಿ ಎಷ್ಟು ವಿಧ ಹಾಗೂ ಇದನ್ನು ಮನೆಯಲ್ಲೇ ಸುಲಭವಾಗಿ ಮನೆ ಮದ್ದಿನ ಮೂಲಕ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಥೈರಾಯ್ಡ್ ಇದು ಚಿಟ್ಟೆ ಆಕಾರದಲ್ಲಿ ಗಂಟಲಿನ ಮಧ್ಯ ಭಾಗದಲ್ಲಿ ಇರುತ್ತದೆ. ಥೈರಾಯ್ಡ್ ಇರುವವರು ತೂಕ ಕಡಿಮೆ ಮಾಡಿಕೊಂಡರೆ ಸಾಕು ಎಂದುಕೊಳ್ಳುತ್ತಾರೆ ಆದರೆ ಇದು ಸರಿಯಲ್ಲ. ಥೈರಾಯ್ಡ್ ಸಮಸ್ಯೆ ಆಹಾರವನ್ನು ಸರಿಯಾಗಿ ತೆಗೆದುಕೊಳ್ಳದಿದ್ದಾಗ ಥೈರಾಯ್ಡ್ ಹಾರ್ಮೋನ್ ಸರಿಯಾಗಿ ಕೆಲಸ ಮಾಡುವುದಿಲ್ಲ ಆಗ ಬರುತ್ತದೆ. ಥೈರಾಯ್ಡ್ ಹಾರ್ಮೋನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೆ ಅದು ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುವುದಿಲ್ಲ. ಥೈರಾಯ್ಡ್ ಗ್ರಂಥಿ ಕಡಿಮೆ ಪ್ರಮಾಣದ ಹಾರ್ಮೋನ್ ರಿಲೀಸ್ ಮಾಡಿದರೆ ಹೈಪೋ ಥೈರಾಯ್ಡಿಸಮ್ ಎಂದು ಹೆಚ್ಚಿನ ಪ್ರಮಾಣದ ಹಾರ್ಮೋನ್ ರಿಲೀಸ್ ಮಾಡಿದರೆ ಹೈಪರ್ ಥೈರಾಯ್ಡಿಸಮ್ ಎನ್ನುವರು.

ಈ ಸಮಸ್ಯೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಹೆಚ್ಚು ಸುಸ್ತಾಗುವುದು, ಚಳಿ ಹೆಚ್ಚಾಗಿ ಅನಿಸುವುದು, ಹಸಿವು ಆಗದೆ ಇರುವುದು, ತೂಕ ಹೆಚ್ಚುವುದು, ಕೂದಲು ಉದುರುವುದು ಇವು ಥೈರಾಯ್ಡ್ ಸಮಸ್ಯೆಯ ಲಕ್ಷಣವಾಗಿದೆ. ಔಷಧಿಯ ಜೊತೆಗೆ ಆಹಾರ ಪದ್ಧತಿಯ ಮೂಲಕ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಹೇಗೆಂದರೆ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ 2 ಸ್ಪೂನ್ ಧನಿಯಾ ಕಾಳುಗಳನ್ನು ಅಥವಾ ಧನಿಯಾ ಪುಡಿಯನ್ನು ಹಾಕಿ 10-15 ನಿಮಿಷ ಚೆನ್ನಾಗಿ ಕುದಿಸಬೇಕು.

ನಂತರ ಅದರ ನೀರನ್ನು ಸೋಸಿ ಆರಿದ ನಂತರ ಅದಕ್ಕೆ ಬೇಕಾದರೆ ಅರ್ಧ ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಸಾಮಾನ್ಯವಾಗಿ ಹೈಪೋ ಥೈರಾಯ್ಡಿಸಮ್ ಕಂಡುಬರುತ್ತದೆ. ಧನಿಯಾ ಕಾಳುಗಳಲ್ಲಿ ವಿಟಮಿನ್ಸ್, ಮಿನರಲ್ಸ್ ಇರುವುದರಿಂದ ದೇಹದಲ್ಲಿ ಇನಫೆಕ್ಷನ್ ಆಗದಂತೆ ತಡೆಯುತ್ತದೆ ಹಾಗೂ ಹಾರ್ಮೋನ್ ರೆಗ್ಯುಲೇಟ್ ಮಾಡಲು ಸಹಾಯವಾಗುತ್ತದೆ. ಹಾರ್ಮೋನ್ ಬ್ಯಾಲೆನ್ಸ್ ಮಾಡಿ ಥೈರಾಯ್ಡ್ ಸಮಸ್ಯೆಯಿಂದ ದೂರ ಮಾಡುತ್ತದೆ. ಧನಿಯಾ ಕಷಾಯ ಕುಡಿಯುವುದರಿಂದ ಹೆಚ್ಚಾದ ತೂಕ ಕಡಿಮೆ ಯಾಗುತ್ತದೆ.

ಅಗಸೆ ಬೀಜವನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು ನಂತರ ಇದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಬೇಕು. ಈ ಪುಡಿಯನ್ನು ಏರ್ ಟೈಟ್ ಕಂಟೇನರ್ ನಲ್ಲಿ ಹಾಕಿ ಒಂದು ತಿಂಗಳು ಸ್ಟೋರ್ ಮಾಡಬಹುದು. ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಅಗಸೆ ಬೀಜದ ಪುಡಿಯನ್ನು ಹಾಕಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಅಥವಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸ್ಪೂನ್ ಅಗಸೆ ಬೀಜದ ಪುಡಿಯನ್ನು ಸೇವಿಸಿ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಬಹುದು. ಅಗಸೆ ಬೀಜದಲ್ಲಿ ಒಮೆಗಾ ತ್ರಿ ಫ್ಯಾಟಿಯಾಸಿಡ್ ಹೆಚ್ಚಾಗಿರುವುದರಿಂದ ಥೈರಾಯ್ಡ್ ಸಮಸ್ಯೆ ದೂರ ಮಾಡಲು ಸಹಾಯಕಾರಿಯಾಗಿದೆ.

ಅಗಸೆ ಬೀಜದ ಪುಡಿಯನ್ನು ದಿನನಿತ್ಯದ ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಥೈರಾಯ್ಡ್ ಸಮಸ್ಯೆಯಿಂದ ಬಳಲುವವರು ಉಪ್ಪನ್ನು ಕಡಿಮೆ ಸೇವಿಸಬೇಕು ದಿನಕ್ಕೆ 5 ಗ್ರಾಂ ಉಪ್ಪನ್ನು ಮಾತ್ರ ಸೇವಿಸಬೇಕು. ಹೈಪೋ ಥೈರಾಯ್ಡ್ ಸಮಸ್ಯೆ ಇರುವವರು ಹಸಿ ತರಕಾರಿಗಳನ್ನು, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬಾರದು. ಐರನ್ ಅಂಶ ಮತ್ತು ವಿಟಮಿನ್ ಎ ಇರುವ ಆಹಾರವನ್ನು ಸೇವಿಸಬೇಕು. ಥೈರಾಯ್ಡ್ ಸಮಸ್ಯೆ ದೊಡ್ಡ ಸಮಸ್ಯೆ ಏನಲ್ಲ ಔಷಧಿಯ ಜೊತೆಗೆ ಆಹಾರ ಪದ್ದತಿ ಹಾಗೂ ಮನೆ ಮದ್ದನ್ನು ಅನುಸರಿಸಿದಾಗ ಕೆಲವು ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ದೂರವಾಗುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

Leave A Reply

Your email address will not be published.