Home remedies For piles: ಇತ್ತೀಚಿನ ದಿನಗಳಲ್ಲಿ ಇರುವ ಆಹಾರ ಪದ್ಧತಿಗಳಿಂದ ಪೈಲ್ಸ್ ಎನ್ನುವ ರಾಕ್ಷಸ ತುಂಬಾ ಕಾಡುತ್ತಿದ್ದಾನೆ. ಹಲವಾರು ಜನ ಈ ಸಮಸ್ಯೆಯಿಂದ ತುಂಬಾ ಬಳಲುತ್ತಿದ್ದಾರೆ ಹಾಗಾದರೆ ಇದಕ್ಕೆ ಕಾರಣವೇನು? ಇದು ಏಕೆ ಬರುತ್ತದೆ ಇದನ್ನ ಶಮನ ಮಾಡಿಕೊಳ್ಳುವುದು ಹೇಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಕೆಲವು ಜನರು ಬಹಳಷ್ಟು ಹಣವನ್ನು ಖರ್ಚು ಮಾಡಿ ಇನ್ನು ಕೆಲವರು ಆಪರೇಷನ್ ಕೂಡ ಮಾಡಿದರು ಕೂಡ ಈ ಸಮಸ್ಯೆ ಕಡಿಮೆ ಆಗದಿರುವ ಕಾರಣ ತುಂಬಾ ನೋವನ್ನು ಅನುಭವಿಸುತ್ತಿದ್ದಾರೆ.
ಹಳ್ಳಿಯಲ್ಲಿ ಬೆಳೆಯುವ ಈ ಸೊಪ್ಪು ಕಡಿಮೆ ಖರ್ಚಿನಲ್ಲಿ ನಿಮಗೆ ಈ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಬಹಳ ಆರೋಗ್ಯ ಲಾಭವಿರುವ ಈ ಸೊಪ್ಪಿನಲ್ಲಿ ದೇಹಕ್ಕೆ ತಂಪನ್ನೆರೆಯುವ ಗುಣವಿದೆ. ಮುನಿ ಅಂತ ಕರೆಯುತ್ತಾರೆ. ಇದು ಹಳ್ಳಿಯಲ್ಲಿ ದಾರಿಯ ಬದಿಗಳಲ್ಲಿ ಬೆಳೆದುಕೊಂಡಿರುವ ಸೊಪ್ಪಾಗಿದ್ದು, ಯಾರಾದರೂ ಇದನ್ನು ಮುಟ್ಟಿದರೆ ಅದು ಮುದುರಿಕೊಳ್ಳುತ್ತದೆ. ಈ ರೀತಿಯ ಗುಣವಿರುವ ಈ ಸೊಪ್ಪು ಪೈಲ್ಸ್ ಸಮಸ್ಯೆಗೆ ರಾಮಬಾಣ ಅಂತಾನೆ ಹೇಳಬಹುದು.
ಈ ಸೊಪ್ಪನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಇದನ್ನ ಪೇಸ್ಟ್ ಮಾಡಿಕೊಳ್ಳಿ. ಹಾಗೆ ಇದರ ರಸವನ್ನು ತೆಗೆದು ಕುಡಿಯಿರಿ. ಒಂದು ವೇಳೆ ನಿಮಗೆ ಈ ಸೊಪ್ಪು ಸಿಗುವುದಿಲ್ಲ ಅಂತಾದರೆ ಒಂದು ಬಾರಿ ಈ ಸೊಪ್ಪನ್ನು ತರಿಸಿಕೊಂಡು ಅದನ್ನು ಒಣಗಿಸಿ ಪೌಡರ್ ಮಾಡಿಟ್ಟುಕೊಳ್ಳಿ. ಅದನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯುತ್ತಾ ಬನ್ನಿ. ಈ ರೀತಿ ನೀವು ಎರಡು ವಾರಗಳ ಕಾಲ ಮಾಡಿದರೆ ನಿಮಗೆ ಎಂತಹದ್ದೇ ಫೈಲ್ ಸಮಸ್ಯೆ ಇದ್ದರೂ ಕೂಡ ಅದು ಕಮ್ಮಿಯಾಗುತ್ತದೆ.
ಒಂದು ವೇಳೆ ಇದರ ಸೂಪ್ಪು ನಿಮಗೆ ಸಿಗದೇ ಇದ್ದಲ್ಲಿ ಕೊನೆಯ ಪಕ್ಷ ಆಯುರ್ವೇದ ಔಷದ ಅಂಗಡಿಗಳಲ್ಲಿ ಈ ಸೊಪ್ಪಿನ ಪುಡಿ ಲಭ್ಯವಿರುತ್ತದೆ. ಅದನ್ನು ತಂದಿಟ್ಟುಕೊಳ್ಳಿ ವಾರದಲ್ಲಿ ಎರಡು ದಿನಗಳ ಕಾಲ ಅದನ್ನು ನೀರಿನಲ್ಲಿ ಹಾಕಿ ಕುದಿಸಿ ಸೋಸಿ ಆ ನೀರನ್ನು ಕುಡಿಯಿರಿ ಈ ರೀತಿ ತಿಂಗಳುಗಳ ಕಾಲ ನೀವು ಮಾಡುತ್ತಾ ಬಂದರೆ ಖಂಡಿತವಾಗಲೂ ನಿಮ್ಮ ಪೈಲ್ಸ್ ಸಮಸ್ಯೆಯಲ್ಲಿ ಬಹಳ ಬದಲಾವಣೆ ಕಂಡು ಬರುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.