ನಿದ್ರಾಹೀನತೆ ಸಮಸ್ಯೆಯನ್ನು ಬಹಳಷ್ಟು ಜನರು ಅನುಭವಿಸುತ್ತಿದ್ದಾರೆ ಈ ಸಮಸ್ಯೆಗೆ ಸುಲಭವಾದ ಮನೆಮದ್ದನ್ನು ಈ ಲೇಖನದ ಮೂಲಕ ತಿಳಿಯೋಣ
ನಿದ್ರಾಹೀನತೆಗೆ ಇಂಗ್ಲೀಷ್ ನಲ್ಲಿ ಇನ್ ಸೋಮಿಯಾ ಎನ್ನುತ್ತಾರೆ. ಮೊಬೈಲ್, ಲ್ಯಾಪ್ ಟಾಪ್, ಟಿ.ವಿ ಇವುಗಳನ್ನು ದೂರವಿಟ್ಟು ಮಲಗಬೇಕು. ಅವುಗಳಿಂದ ಬರುವ ಬ್ಲೂ ಲೈಟ್ ನಮ್ಮ ಬ್ರೇನ್ ಡ್ಯಾಮೇಜ್ ಮಾಡುತ್ತದೆ ಮತ್ತು ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ ಇದರಿಂದ ನಿದ್ರೆ ಬರುವುದಿಲ್ಲ. ಆದರೂ ನಿದ್ದೆ ಬರುವುದಿಲ್ಲ ಎಂದರೆ ಅದು ನಿದ್ರಾಹೀನತೆ ಅದಕ್ಕೆ ಮನೆ ಮದ್ದುಗಳಿವೆ. 50 ಗ್ರಾಂ ಶುದ್ಧ ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಒಂದು ಬಿಲ್ಲೆಯಷ್ಟು ಕರ್ಪೂರ ಹಾಕಿ ಮಿಕ್ಸ್ ಮಾಡಿ ಒಂದು ಗಾಜಿನ ಸೀಸದಲ್ಲಿ ಸ್ಟೋರ್ ಮಾಡಿ ಇಡಬೇಕು ಈ ಎಣ್ಣೆಯನ್ನು ಪ್ರತಿದಿನ ರಾತ್ರಿ ಪಾದಕ್ಕೆ 5 ನಿಮಿಷ ಮಸಾಜ್ ಮಾಡಿ ಸಾಕ್ಸ್ ಹಾಕಿಕೊಂಡು ಮಲಗುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. 200ml ನಷ್ಟು ಹಾಲನ್ನು ಉಗುರು ಬೆಚ್ಚಗೆ ಮಾಡಿಕೊಂಡು ಅದಕ್ಕೆ ಒಂದು ಸ್ಪೂನ್ ಅಶ್ವಗಂಧ ಪೌಡರ್ ಒಂದು ವೇಳೆ ಅಶ್ವಗಂಧ ಸಿಗದೆ ಇದ್ದರೆ 2-3 ಸ್ಪೂನ್ ಬೆಲ್ಲವನ್ನು ಅಥವಾ ಒಂದು ಟಿ ಸ್ಪೂನ್ ಜೇನುತುಪ್ಪವನ್ನು ಹಾಕಿಕೊಳ್ಳಬಹುದು, ಒಂದು ಸ್ಪೂನ್ ಕಲ್ಲು ಸಕ್ಕರೆ ಹಾಕಿ ರಾತ್ರಿ ಊಟದ ನಂತರ ಕುಡಿದು ಮಲಗುವುದರಿಂದ ನಿದ್ರೆ ಬರುತ್ತದೆ. ಶುಗರ್ ಇದ್ದವರು ಕಲ್ಲು ಸಕ್ಕರೆ ಹಾಕಬಾರದು. 3-4 ಟಿ ಸ್ಪೂನ್ ಗಸಗಸೆಯನ್ನು ಹುರಿದು ತೆಳುವಾದ ಹತ್ತಿ ಬಟ್ಟೆಯಲ್ಲಿ ಹಾಕಿ ಮೂಟೆ ಕಟ್ಟಿಕೊಳ್ಳಬೇಕು ಇದನ್ನು ಪೋಟಿಲ್ ಎನ್ನುವರು. ಇದರ ವಾಸನೆಯಿಂದ ನಿದ್ದೆ ಬರುತ್ತದೆ.
ಸಾಂಬಾರ್ ಸೊಪ್ಪಿನ ಜ್ಯೂಸನ್ನು ಮಾಡಿ ಅದಕ್ಕೆ ಒಂದು ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಮಿಕ್ಸ್ ಮಾಡಿ ದಿನಕ್ಕೆ ಒಂದು ಬಾರಿ ಬೆಳಿಗ್ಗೆ ಅಥವಾ ರಾತ್ರಿ ಊಟದ ನಂತರ ಕುಡಿಯುವುದರಿಂದ ನಿದ್ರೆ ಬರುತ್ತದೆ. ಒಂದು ಸ್ಪೂನ್ ಧನಿಯಾ ಪೌಡರ್ ನ್ನು 200ml ನೀರಿಗೆ ಸೇರಿಸಿ ಮಿಕ್ಸ್ ಮಾಡಿ ಕುಡಿಯಬೇಕು. ಎರಡು ಬಾಳೆಹಣ್ಣನ್ನು ಸಿಪ್ಪೆ ಸಹಿತ ಕಟ್ ಮಾಡಿ 200ml ನೀರಿಗೆ ಸೇರಿಸಿ ಕುದಿಸಿ ಅದಕ್ಕೆ 1-2 ಚಿಟಿಕೆಯಷ್ಟು ಚಕ್ಕೆ ಪೌಡರ್ ಹಾಕಿ ಕಲಸಿ ಉಗುರುಬೆಚ್ಚಗಿದ್ದಾಗ ಊಟದ ನಂತರ ಕುಡಿಯಬೇಕು. ಒಂದು ಹಸಿ ಈರುಳ್ಳಿಯನ್ನು ರಾತ್ರಿ ಊಟದೊಂದಿಗೆ ತಿನ್ನುವುದರಿಂದ ನಿದ್ರೆ ಬರುತ್ತದೆ. ಅಲ್ಲದೆ ಈರುಳ್ಳಿಯನ್ನು ಸ್ಲೈಸ್ ರೀತಿ ಕಟ್ ಮಾಡಿಕೊಂಡು ಪಾದಕ್ಕೆ ಇಟ್ಟುಕೊಂಡು ಸಾಕ್ಸ್ ಹಾಕುವುದರಿಂದ ನಿದ್ದೆ ಬರುತ್ತದೆ ಮತ್ತು ಪಾದ ಬಿರುಕು ಬಿಟ್ಟಿದ್ದರೆ ಸರಿಯಾಗುತ್ತದೆ. ಒಂದು ಬೆಳ್ಳುಳ್ಳಿ ಎಸಳನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ನಿದ್ರೆ ಬರುತ್ತದೆ. ಇದರೊಂದಿಗೆ ಮಧ್ಯಾಹ್ನ ನಿದ್ರೆ ಮಾಡಬಾರದು. ಮಲಗುವ ಮುನ್ನ ವಾಷ್ ರೂಮಗೆ ಹೋಗಬನ್ನಿ. ರಾತ್ರಿ ಜಾಸ್ತಿ ನೀರು ಕುಡಿಯಬಾರದು. ಊಟದ ನಂತರ 100 ಹೆಜ್ಜೆ ನಡೆಯಬೇಕು. ಮಲಗುವ ಕೋಣೆ ಕತ್ತಲಾಗಿರಬೇಕು. ಹೀಗೆ ಮಾಡುವುದರಿಂದ ನಿದ್ರಾಹೀನತೆ ವಾಸಿಯಾಗುತ್ತದೆ.