ಜ್ಞಾಪಕ ಶಕ್ತಿ ಎಂಬುದು ಮನುಷ್ಯನಲ್ಲಿರುವಂತಹ ಒಂದು ಅತ್ಯಮೂಲ್ಯವಾದ ಸಂಪತ್ತು ಜ್ಞಾನವನ್ನು ನಾವು ಸಂಪಾದಿಸಬಹುದು ಯಾಕಂದ್ರೆ ಜ್ಞಾನಕ್ಕೆ ಸಮಾನವಾದದ್ದು ಮತ್ತೊಂದು ಈ ಭೂಮಿಯ ಮೇಲೆ ಇಲ್ಲ, ಅಂತಹ ಜ್ಞಾನ ನಮಗೆ ಸರಿಯಾದ ಸಮಯದಲ್ಲಿ ಬಳಕೆಗೆ ಬರಬೇಕು ಅಂದ್ರೆ ನಮಗೆ ಜ್ಞಾಪಕ ಶಕ್ತಿಯ ಅಗತ್ಯ ತುಂಬಾನೇ ಇದೆ. ನಮ್ಮಲ್ಲಿ ಹಲವಾರು ಅಧಿಕಾರಿಗಳು ಬಹಳ ದೊಡ್ಡ ಕ್ಲಿಷ್ಟಕರವಾದ ಪರೀಕ್ಷೆಗಳನ್ನು ತೇರ್ಗಡೆಯಾಗಿ ಬಂದಿದ್ದಾರೆ ಎಂದರೆ ಅದು ಅವರಲ್ಲಿರುವ ಜ್ಞಾನದಿಂದ ಅವರಲ್ಲಿರುವ ಜ್ಞಾನವನ್ನು ಸರಿಯಾದ ಸಮಯದಲ್ಲಿ ಬಳಕೆಯಾಗುವಂತೆ ಮಾಡಿದ ಅವರ ಜ್ಞಾಪಕಶಕ್ತಿಯಿಂದ, ಹೀಗಾಗಿ ಜ್ಞಾಪಕ ಶಕ್ತಿಯೂ ಮನುಷ್ಯನ ಜೀವನದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಂತು ಈ ಜ್ಞಾಪಕ ಶಕ್ತಿಯು ಬಹಳ ಉತ್ತಮವಾದ ಪಾತ್ರವನ್ನು ನಿರ್ವಹಿಸುತ್ತದೆ ಪರೀಕ್ಷೆ ಬಂತೆಂದರೆ ಸಾಕು ಪೋಷಕರು ತಮ್ಮ ಮಕ್ಕಳಿಗೆ ಜ್ಞಾಪಕ ಶಕ್ತಿ ಒಲಿಯಲೆಂದು ಹಲವಾರು ಮನೆ ಮದ್ದುಗಳನ್ನು ಮಕ್ಕಳಿಗೆ ನೀಡುತ್ತಾರೆ, ಮತ್ತು ಮರೆವನ್ನು ಮರೆಸುವಂತೆ ಮಾಡುವಂತೆ ತಾಯಿ ಶಾರದೆಯಲ್ಲಿ ಬೇಡುತ್ತಾರೆ.
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಬೇರೆಯೇ ತೆರನಾದ ಜ್ಞಾಪಕ ಶಕ್ತಿಯನ್ನು ನಾವು ಗಮನಿಸಬಹುದಾಗಿದೆ. ಒಬ್ಬರಂತೆ ಒಬ್ಬರು ಇರಲು ಹೇಗೆ ಸಾಧ್ಯವಿಲ್ಲವೊ ಹಾಗೆಯೇ ನಾವು ಒಬ್ಬರ ಜ್ಞಾಪಕ ಶಕ್ತಿಯನ್ನು ಮತ್ತೊಬ್ಬನ ಜ್ಞಾಪಕ ಶಕ್ತಿಯೊಂದಿಗೆ ತುಲನೆ ಮಾಡಲು ಸಾಧ್ಯವಿಲ್ಲ, ಇಂತಹ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂಬ ಹಂಬಲ ಎಲ್ಲರಿಗೂ ಇರುವುದು ಸಹಜ ಆದರೆ ಅಂತಹ ಜ್ಞಾಪಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಬಳಸಬಹುದಾದ ಮನೆಮದ್ದುಗಳನ್ನು ನಾವಿಂದು ನಿಮಗಾಗಿ ತಂದಿದ್ದೇವೆ ಅವು ಯಾವುವು ಅವುಗಳಿಂದಾಗುವ ಪ್ರಯೋಜನಗಳೇನು ನೋಡೋಣ ಬನ್ನಿ.
ದಾಲ್ಚಿನ್ನಿ ಅಥವಾ ಚಕ್ಕೆಯ ಒಂದು ಚಿಕ್ಕ ತುಣುಕನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಪ್ರತಿದಿನ ಸೇವಿಸುವುದರಿಂದ ನಿಮ್ಮ ಜ್ಞಾಪಕ ಶಕ್ತಿಯು ಹೆಚ್ಚಾಗುತ್ತದೆ. ಇನ್ನು ರಾತ್ರಿ ವೇಳೆ ಎರಡರಿಂದ ಮೂರು ಬಾದಾಮಿಗಳನ್ನು ನೀರಿನಲ್ಲಿ ನೆನೆಸಿ ಇಟ್ಟು ಬೆಳಿಗ್ಗೆ ಅವುಗಳನ್ನು ಸೇವಿಸುವುದರಿಂದ ನಿಮ್ಮ ಜ್ಞಾಪಕ ಶಕ್ತಿಯು ವೃದ್ದಿಸುತ್ತದೆ. ಪ್ರತಿದಿನ ನೆನೆಸಿದ ಗೋಡಂಬಿಯೊಂದಿಗೆ ಒಂದು ಲೋಟ ಕೆನೆಬರಿತ ಹಾಲು ಕುಡಿಯುತ್ತಾ ಬರುವುದರಿಂದ ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚುಮಾಡಿಕೊಳ್ಳಬಹುದು.
ಜ್ಞಾಪಕ ಶಕ್ತಿಯನ್ನು ಹೆಚ್ಚಿಗೆ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸುವ ಮತ್ತೊಂದು ಧಾನ್ಯವೆಂದರೆ ಅದು ಹಳಸಂದೆ ಕಾಳು. ಹೌದು ಹಸಿ ಹಳಸಂದೆ ಕಾಳುಗಳನ್ನು ಒಂದು ಹಿಡಿಯಂತೆ ನಿಯಮಿತವಾಗಿ ಪ್ರತಿದಿನ ಸೇವಿಸುತ್ತಾ ಬಂದರೆ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಒಂದುವೇಳೆ ನಿಮಗೆ ಹಸಿ ಹಳಸಂದೆ ಸಿಗದಿದ್ದಲ್ಲಿ ರಾತ್ರಿವೇಳೆ ಒಣಗಿದ ಹಳಸಂದೆ ಕಾಳುಗಳನ್ನು ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಅವುಗಳನ್ನು ಸೇವಿಸುವುದು ಉತ್ತಮ.
ಹಾಗೆಯೇ ಕುಂಬಳ ಕಾಯಿ ಕೂಡಾ ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ ಕುಂಬಳಕಾಯಿಯನ್ನು ಪ್ರತಿನಿತ್ಯ ಊಟದಲ್ಲಿ ಬಳಸುವುದರಿಂದ ಪಲ್ಯದಲ್ಲಿ ಸಾಂಬಾರಿನಲ್ಲಿ ಹಲ್ವಾದಲ್ಲಿ ಕುಂಬಳಕಾಯಿಯನ್ನು ಬಳಸಿ ಸೇವಿಸುತ್ತಾ ಬಂದರೆ ನಿಮ್ಮ ಜ್ಞಾಪಕ ಶಕ್ತಿ ವೃದ್ದಿಯಾಗುವಲ್ಲಿ ಎರಡು ಮಾತಿಲ್ಲ, ಅಂತೆಯೇ ಆರರಿಂದ ಎಂಟು ಬಾದಮಿಗಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಈ ಪುಡಿಯನ್ನು ಒಂದು ಗ್ಲಾಸ್ ಹಾಲಿನಲ್ಲಿ ಹಾಕಿ ಕುದಿಸಿ ಆರಿಸಿ ನಂತರ ಇದನ್ನು ಕುಡಿಯುವುದರಿಂದ ನಿಮ್ಮ ಜ್ಞಾಪ ಶಕ್ತಿಯಲ್ಲಿ ವ್ಯತ್ಯಾಸ ಗಮನಿಸಬಹುದು.