ಸಾಮಾನ್ಯವಾಗಿ ಗಂಡು ಮಕ್ಕಳು ಒಂದು ಹಂತದ ಪ್ರಾಯಕ್ಕೆ ಬಂದಾಗ ಅಂದರೆ ಅವರ ಟೀನೇಜ್ ನಲ್ಲಿ ಗಂಡಸ್ಥಾನದ ಲಕ್ಷಣಗಳಾದ ಮೀಸೆ ಹಾಗೂ ಗಡ್ಡ ಮುಖದ ಮೇಲೆ ಚಿಗುರಲು ಪ್ರಾರಂಭವಾಗುವುದು ಇದು ಹುಡುಗರಲ್ಲಿನ ಅಂಡ್ರೋಜನ್ ಗ್ರಂಥಿಗಳ ಪ್ರಭಾವವೆಂದು ನಮ್ಮ ವಿಜ್ಞಾನ ಸ್ಪಷ್ಟಪಡಿಸುತ್ತದೆ ಹಾಗೂ ಇದು ಸರ್ವೇ ಸಾಮಾನ್ಯವೂ ಹೌದು. ಆದರೆ ಅದೇ ಮೀಸೆ ಚಿಗುರುವಂತಹ ಕೂದಲುಗಳು ಹುಡುಗಿಯರಲ್ಲಿ ಅಂದರೆ ಮೇಲ್ದುಟಿಯ ಮೇಲೆ ಕಾಣಿಸಿಕೊಂಡರೆ ಇವು ಅನಾವಶ್ಯಕ ಕೂದಲುಗಳಾಗಿರುತ್ತವೆ ಮತ್ತು ಹುಡುಗಿಯರಲ್ಲಿ ಮುಖದ ಮೇಲೆ ಕೂದಲು ಬೆಳೆಯುವುದು ಒಳ್ಳೆಯ ಲಕ್ಷಣವಲ್ಲ ಈ ರೀತಿಯ ಕೂದಲುಗಳು ಹುಡುಗಿಯರಲ್ಲಿ ಮುಜುಗರವನ್ನುಂಟುಮಾಡುತ್ತದೆ.
ಎಷ್ಟೋ ಮಂದಿ ಹೆಣ್ಣುಮಕ್ಕಳು ಈ ಬೇಡವಾದ ಕೂದಲುಗಳನ್ನುತೆಗೆಸಲು ಹಲವಾರು ಬಾರಿ ಪಾರ್ಲರ್ ಗಳ ಮೊರೆ ಹೋಗಿ ಮತ್ತೆ ಮುಖದ ಮೇಲೆ ಕೂದಲುಗಳು ಬೆಳೆಯಲು ಶುರುವಿಟ್ಟಾಗ ಬೇಸರಗೊಂಡದ್ದು ಇದೆ. ಹಾಗಾಗಿ ಮನೆಯಲ್ಲಿಯೇ ಸುಲಭವಾಗಿ ಸರಳವಾಗಿ ಸಿಗುವಂತ ಇವುಗಳನ್ನು ಬಳಸಿ ಮುಖದಮೇಲಿನ ಬೇಡವಾದ ಕೂದಲನ್ನು ನಿವಾರಿಸಿಕೊಳ್ಳಬಹದಾಗಿದೆ.
ಮೊದಲಿಗೆ ಒಂದು ಚಿಕ್ಕ ಬೌಲ್ ನಲ್ಲಿ ಒಂದು ಚಮಚ ಗೋಧಿ ಹಿಟ್ಟನ್ನು ಹಾಕಿ ನಂತರ ಒಂದು ಚಮಚ ಕಡಲೆ ಹಿಟ್ಟನ್ನು ಹಾಕಿ ಒಂದೆರಡು ಹನಿಗಳಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ನಂತರ ಇದಕ್ಕೆ ಸ್ವಲ್ಪ ರೋಸ್ ವಾಟರ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಒಂದು ಗಟ್ಟಿ ಮಿಶ್ರಣವನ್ನಾಗಿ ಮಾಡಿಕೊಳ್ಳಿ. ನಂತರ ಈ ಪೇಸ್ಟ್ ಅನ್ನು ನಿಮ್ಮ ತುಟಿಗಳ ಮೇಲ್ಭಾಗಕ್ಕೆ ಅಂದರೆ ಅನಗತ್ಯ ಕೂದಲುಗಳು ಇರುವ ಜಾಗಕ್ಕೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಅಂದರೆ ಹಚ್ಚಿರುವ ಪೇಸ್ಟ್ ಸಂಪೂರ್ಣ ಒಣಗಿದ ಮೇಲೆ ಅದನ್ನು ನೀರಿನಿಂದ ತೊಳೆಯದೆ ಕೂದಲು ಬೆಳೆದಿರುವ ವಿರುದ್ಧ ದಿಕ್ಕಿಗೆ ಅಂದರೆ ಮೇಲ್ಮುಖವಾಗಿ ತಿಕ್ಕಿ ಅಂದರೆ ರಬ್ ಮಾಡಿ ತೆಗೆಯಬೇಕಾಗುತ್ತದೆ.
ಈ ಮನೆಮದ್ದನ್ನು ವಾರದಲ್ಲಿ ಮೂರು ಬಾರಿಯಾದರೂ ನೀವು ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಕೂದಲುಗಳ ಬೆಳವಣಿಗೆ ಕುಂಟಿತವಾಗುವುದಲ್ಲದೆ ಕ್ರಮೇಣ ಕೂದಲುಗಳ ಬೆಳವಣಿಗೆಯು ಸಂಪೂರ್ಣವಾಗಿ ನಿಲ್ಲುತ್ತದೆ. ಈ ಮನೆಮದ್ದು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಮುಂದಿನ ಲೇಖನದಲ್ಲಿ ಇದರ ಬಗ್ಗೆ ಒನ್ನೊಂದಷ್ಟು ಮನೆಮದ್ದುಗಳನ್ನ ತಿಳಿಸಲು ಪ್ರಯತ್ನಿಸುತ್ತೇವೆ.