ಭಾರತ ಅದ್ಭುತ ಮೂಲಿಕೆಗಳು ಮತ್ತು ಮಸಾಲೆಗಳ ಖಜಾನೆಯಾಗಿದ್ದು, ಇದನ್ನು ನಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ನೋಡಬಹುದು. ನಮ್ಮ ಅಡಿಗೆಯ ರುಚಿ ಹೆಚ್ಚಿಸುವುದರಿಂದ ಹಿಡಿದು ನೋವು ನಿವಾರಣೆಗೆ ಬಳಸುವವರೆಗೆ ನಮ್ಮ ಭಾರತೀಯ ಮಸಾಲೆ ಮತ್ತು ಮೂಲಿಕೆಗಳು ತಮ್ಮದೇ ಆದ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಆದರೆ ಒಂದು ಮಸಾಲೆ ಪದಾರ್ಥ ತನ್ನ ಅತ್ಯದ್ಭುತ ಪ್ರಯೋಜನಗಳಿಂದ ನಿಮಗೆ ಅಚ್ಚರಿ ಉಂಟುಮಾಡುತ್ತದೆ. ಈ ಮಸಾಲೆ ಪದಾರ್ಥದ ಹೆಸರು ಜಾಯಿಕಾಯಿ. ಇದು ಮನೆಯಲ್ಲಿ ಇದ್ದರೆ ಉತ್ತಮ ವೈದ್ಯರೊಬ್ಬರು ಮನೆಯಲ್ಲಿ ಇದ್ದಹಾಗೆ ಎಂದು ಹೇಳುತ್ತಾರೆ.
ಇದು ಕೈಕಾಲು ನೋವು, ಸೊಂಟ ನೋವು, ಮಂಡಿ ನೋವುಗಳಿಗೆ, ಗ್ಯಾಸ್ ಆಗಿ ಹೊಟ್ಟೆಯುಬ್ಬರ ಆಗುವವರಿಗೆ, ಮುಖದಲ್ಲಿ ಇರುವ ಮೊಡವೆಗಳ ಕಾಲ್, ಚರ್ಮ ಸುಕ್ಕಾಗುವುದಕ್ಕೆ, ಚಿಕ್ಕಮಕ್ಕಳಲ್ಲಿ ಉಂಟಾಗುವ ಜ್ವರ ಶೀತ ಕಫ ಇವುಗಳಿಗೆ ಹೇಗೆ ಇನ್ನೂ ಹಲವಾರು ಕಾಯಿಲೆಗಳಿಗೆ ಈ ಜಾಯಿಕಾಯಿ ಉತ್ತಮ ರಾಮಬಾಣ ಎಂದೇ ಹೇಳಬಹುದು. ಇಂತಹ ಜಾಗಿಕಾಯಿ ನಮಗೆ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತವೆ. ಜಾಯಿಕಾಯಿಯಿಂದ ನಮಗೆ ಏನೆಲ್ಲಾ ಲಾಭ ಇದೆ ಹಾಗೂ ಇದು ಯಾವೆಲ್ಲ ರೋಗಗಳಿಗೆ ಮನೆಮದ್ದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮೊದಲು ಈ ಜಾಯಿಕಾಯಿಯನ್ನು ನಾವು ಹೇಗೆ ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎನ್ನುವುದನ್ನು ನೋಡೋಣ. ಮಕ್ಕಳಿಗೆ ಕೂಡಾ ಹೇಗೆ ಯಾವ ಪ್ರಮಾಣದಲ್ಲಿ ಕೊಡಬಹುದು ಎಂದು ನೋಡೋಣ. ಈ ಕಾಯಿಕಾಯಿಯನ್ನು ಮೊದಲು ಕುಟ್ಟಿ ಅಥವಾ ತುರಿದು ಪುಡಿ ಮಾಡಿಕೊಳ್ಳಬೇಕು. ನಂತರ ದೊಡ್ಡವರಿಗೆ ಆದರೆ ಒಂದು ಟೀ ಚಮಚ ಜೇನುತುಪ್ಪಕ್ಕೆ ಅರ್ಧ ಟೀ ಚಮಚ ಜಾಯಿಕಾಯಿ ಪುಡಿ ಹಾಗೂ ಚಿಕ್ಕ ಮಕ್ಕಳಿಗೆ ಆದರೆ ಒಂದು ಟೀ ಚಮಚ ಜೇನುತುಪ್ಪಕ್ಕೆ ಒಂದು ಚಿಟಕಿ ಅಷ್ಟು ಜಾಯಿಕಾಯಿ ಪುಡಿಯನ್ನು ಹಾಕಿ ದಿನಕ್ಕೆ ಎರಡು ಬಾರಿ ನೀಡಬೇಕು.
ಯಾವುದೇ ರೋಗಕ್ಕೆ ಆದರೂ ಒಂದು ದಿನಕ್ಕೆ ಐದು ಗ್ರಾಂ ಅಥವಾ ಎರಡು ಸ್ಪೂನ್ ಗಿಂತ ಅಧಿಕವಾಗಿ ಈ ಜಾಯಿಕಾಯಿ ಪುಡಿಯನ್ನು ಸೇವಿಸಬಾರದು. ಇದು ಮೇಲೆ ಹೇಳಿದ ಹಾಗೆ ಮುಖದ ಸೌಂದರ್ಯಕ್ಕೂ ಕೂಡಾ ಬಹಳ ಒಳ್ಳೆಯದಾಗಿದ್ದು, ಮುಖದ ಮೇಲೆ ಕಪ್ಪು ಕಲೆಗಳು, ಸುಕ್ಕುಗಳು ಆಗಿದ್ದವರು ಜಾಯಿಕಾಯಿಯನ್ನು ನೀರಿನಲ್ಲಿ ತೆಯಿದು ಮುಖಕ್ಕೆ, ಕಣ್ಣಿನ ಕೆಳಗೆ ಹಚ್ಚುವುದರಿಂದ ಕಣ್ಣಿನ ಕೆಳಗೆ ಕಪ್ಪಾಗಿರುವ ಕಲೆಗಳು, ಮುಖದ ಮೊಡವೆಗಳು ಸೆಪ್ಟಿಕ್ ಆಗಿ ಮುಖದಲ್ಲಿ ಎಲ್ಲಾ ಕಡೆ ಹರಡದ ಹಾಗೆ ಸಹ ಮಾಯವಾಗುತ್ತವೆ.
ಇನ್ನೂ ಜಾಯಿಕಾಯಿಯನ್ನು ಹಾಲಿನಲ್ಲಿ ತೇಯ್ದು ಅಥವಾ ಜಾಯಿಕಾಯಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲೆ ಬಿರುಕು ಬಿಡುವುದು ಅಥವಾ ಚರ್ಮ ಒಡೆಯುವುದನ್ನು ಕಡಿಮೆ ಮಾಡುತ್ತದೆ ಮತ್ತು ಸತ್ತುಹೋದ ಜೀವಕೋಶಗಳನ್ನು ತೆಗೆಯಲು ಇದು ಸಹಾಯ ಮಾಡುತ್ತದೆ ಹಾಗೂ ಮುಖದ ಹೊಳಪು ಸಹ ಹೆಚ್ಚುತ್ತದೆ. ಹಿಮ್ಮಡಿ ಒಡಕಿಗೂ ಸಹ ಇದು ಉತ್ತಮ ಔಷಧ ಎಂದು ಹೇಳಬಹುದು.
ಇನ್ನೂ ಕೆಲವೊಮ್ಮೆ ರಾತ್ರಿ ಇದ್ದಕ್ಕಿದ್ದ ಹಾಗೇ ಸೊಂಟ ನೋವು, ಮಂಡಿ ನೋವು ಕುತ್ತಿಗೆ ನೋವು ಆರಂಭ ಆಗಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ಜಾಯಿಕಾಯಿ ಮತ್ತು ಎಳ್ಳೆಣ್ಣೆ ಉಪಯೋಗ ಬಹಳ ಉತ್ತಮ. ಎಳ್ಳೆಣ್ಣೆಗೆ ಜಾಯಿಕಾಯಿ ಪುಡಿಯನ್ನು ಮಿಶ್ರಣ ಮಾಡಿ ಆ ಮಿಶ್ರಣವನ್ನು ನೋವು ಕಾಣಿಸಿಕೊಂಡ ಜಾಗಕ್ಕೆ ಹಚ್ಚುವುದರಿಂದ ಬಹು ಬೇಗ ನೋವಿನಿಂದ ಮುಕ್ತಿ ಪಡೆಯಬಹುದು. ಹಾಗೆಯೇ ಜಾಯಿಕಾಯಿ ಇದರಲ್ಲಿ ಫೈಬರ್ ಅಂಶ ಇರುವುದರಿಂದ ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಲವರಿಗೆ ಹೊಟ್ಟೆಯುಬ್ಬರ ಉಂಟಾಗುತ್ತದೆ. ಆಸಿಡಿಟಿ ಗ್ಯಾಸ್ ಉಂಟಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಅಂತಹವರು ಈ ಜಾಯಿಕಾಯಿಯನ್ನು ಪುಡಿ ಮಾಡಿ ಚಿಟಿಕೆ ಅಷ್ಟು ಪುಡಿಯನ್ನು ನೀರಿಗೆ ಹಾಕಿ ಕುಡಿಯುವುದರಿಂದ ಬಹಳ ಬೇಗ ಹೊಟ್ಟೆಯುಬ್ಬರ ಕಡಿಮೆ ಆಗುತ್ತದೆ.
ಇನ್ನೂ ಜಾಯಿಕಾಯಿ ಮುಖ್ಯವಾಗಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಸ್ಯೆ, PCOD ಸಮಸ್ಯೆ ಇರುವವರಿಗೆ ಇದು ಬಹಳ ಸಹಾಯಕಾರಿ. ಪ್ರತೀ ದಿನ ರಾತ್ರಿ ಹಾಲಿನಲ್ಲಿ ಒಂದು ಕಿಟಕಿ ಜಾಯಿಕಾಯಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಕ್ರಮೇಣ PCOD ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇನ್ನೂ ಸ್ಟ್ರೆಸ್ ಮಾಡಿಕೊಂಡು ನಿದ್ರಾಹೀನತೆಯಿಂದ ಬಳಲುತ್ತಾ ಇದ್ದರೆ ಅಂತವರು ರಾತ್ರಿ ಒಂದು ಲೋಟ ಹಾಲನ್ನು ತೆಗೆದುಕೊಂಡು ಅದಕ್ಕೆ ಅರ್ಧ ಟೀ ಚಮಚ ಜಾಯಿಕಾಯಿ ಪುಡಿ ಹಾಕಿ ಎರಡು ನಿಮಿಷ ಜಾಯಿಕಾಯಿ ಸತ್ವ ಹಾಲಿನಲ್ಲಿ ಬಿಟ್ಟುಕೊಳ್ಳುವವರೆಗೆ ಚೆನ್ನಾಗಿ ಕುದಿಸಬೇಕು.
ನಂತರ ಹಾಲು ಸ್ವಲ್ಪ ತಣ್ಣಗಾದ ಮೇಲೆ ಅದಕ್ಕೆ ಒಂದು ಚಮಚ ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ಕುಡಿಯಬಹುದು. ಇದನ್ನು ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ, ಸುಸ್ತು ಸ್ಟ್ರೆಸ್ ಎಲ್ಲಾ ಕಡಿಮೆ ಆಗುತ್ತದೆ. ಇದನ್ನು ನಿದ್ರಾಹೀನತೆ ಇರುವವರು ಸತತ ಒಂದು ವಾರ ಮಾಡಿದರೆ ಸಾಕು. ಮಹಿಳೆಯರು ಒಂದು ಚಿಟಕಿ ಅಷ್ಟು ಮಾತ್ರ ತೆಗೆದುಕೊಂಡರೆ ಸಾಕು. ಜಾಯಿಕಾಯಿಯಲ್ಲಿ ಇಷ್ಟೇ ಅಲ್ಲದೆ ಇನ್ನೂ ಹತ್ತು ಹಲವಾರು ಔಷಧೀಯ ಗುಣಗಳು ಇವೆ. ಅವುಗಳ ಸದುಪಯೋಗವನ್ನು ಪಡೆದುಕೊಳ್ಳೋಣ.
ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430