ಒಂದು ಚಿಕ್ಕದಾದ ಸೊಳ್ಳೆ ಮನುಷ್ಯನ ಪ್ರಾಣವನ್ನೇ ತೆಗೆಯುತ್ತದೆ ಅಂದರೆ ಇದು ಎಷ್ಟು ಅಪಾಯಕಾರಿ ಆಗಿರಬಹುದು. ಈ ಸೊಳ್ಳೆಯಿಂದ ತುಂಬಾ ಜನರಿಗೆ ಹಾನಿಯಾಗಿದೆ. ತುಂಬಾ ಜನ ತಮ್ಮ ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಸೊಳ್ಳೆಗಳು ಮನುಷ್ಯನಿಗೆ ಡೆಂಗ್ಯೂ, ಚಿಕನ್ ಗುನ್ಯಾ ಇನ್ನು ಹಲವಾರು ಖಾಯಿಲೆಗಳನ್ನು ತರುತ್ತವೆ. ಈ ಸೊಳ್ಳೆಗಳು ಸ್ವಚ್ಛವಾದ ನೀರಿನಲ್ಲಿ ಬೆಳೆಯುತ್ತವೆ. ಆದ್ದರಿಂದ ಮನೆಯ ಒಳಗಡೆ ಬಾಟಲಿಗಳಲ್ಲಿ ನೀರು ಹಾಕಿ ತೆರೆದಿಡಬಾರದು. ನಾವು ಇಲ್ಲಿ ಸೊಳ್ಳೆಗಳು ನಮ್ಮ ಮನೆಯ ಹತ್ತಿರ ಬರದಂತೆ ನೋಡಿಕೊಳ್ಳುವ ಸಲಹೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮನೆಯಲ್ಲಿ ಒಳಗಡೆ ಕುಂಭಗಳಲ್ಲಿ ಸಸ್ಯಗಳನ್ನು ನೆಡಬಾರದು. ನೆಟ್ಟರೂ ಸಹ ನೀರು ಇರುವಂತಹವುಗಳಲ್ಲಿ ನೆಟ್ಟಬಾರದು. ಏಕೆಂದರೆ ಆ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಹಾಕುತ್ತವೆ. ಕೇವಲ15 ದಿನಗಳಿಗೆ ಮೊಟ್ಟೆ ಮರಿಗಳಾಗಿ ಹೊರಬರುತ್ತವೆ. ಬಹಳ ದಿನಗಳವರೆಗೆ ಗುಡ್ ನೈಟ್ ಕೊಯ್ಲ್ ಗಳನ್ನು ಬಳಸುವುದು ಒಳ್ಳೆಯದಲ್ಲ. ಅದರ ಬದಲು ಮನೆಯಲ್ಲಿ ಸಿಗುವ ಆಯುರ್ವೇದಿಕ್ ಪದಾರ್ಥಗಳನ್ನು ಬಳಸಿ ಸೊಳ್ಳೆಗಳನ್ನು ಮತ್ತು ಇನ್ನುಳಿದ ಕ್ರಿಮಿ, ಕೀಟಗಳನ್ನು ಓಡಿಸಬಹುದು.

ಮೊದಲು ಒಂದು ಮಣ್ಣಿನ ಹಣತೆ ತೆಗೆದುಕೊಳ್ಳಬೇಕು. ಅದಕ್ಕೆ ಒಂದು ಬೆಳ್ಳುಳ್ಳಿ ತೆಗೆದುಕೊಳ್ಳಬೇಕು. ಅದನ್ನು ಜಜ್ಜಿಕೊಳ್ಳಬೇಕು. ತುಂಬಾ ಜಜ್ಜಬಾರದು. ಸ್ವಲ್ಪ ಜಜ್ಜಿದರೆ ಸಾಕು. ನಂತರ ಕರ್ಪೂರವನ್ನು ತೆಗೆದುಕೊಳ್ಳಬೇಕು. ಆ ಹಣತೆಗೆ ಬೆಳ್ಳುಳ್ಳಿ ಮತ್ತು ಕರ್ಪೂರ ಪುಡಿ ಮಾಡಿ ಹಾಕಬೇಕು. ಅದಕ್ಕೆ ಓಮಿನಕಾಳು ಹಾಕಬೇಕು. ನಂತರ ಒಂದು ಚಮಚ ತುಪ್ಪ ಹಾಕಬೇಕು. ನಂತರ ಬೆಂಕಿ ಹಚ್ಚಲು ಎರಡು ಕರ್ಪೂರವನ್ನು ಮೇಲೆ ಹಾಕಬೇಕು. ಈಗ ಅದಕ್ಕೆ ಬೆಂಕಿ ಹಚ್ಚಬೇಕು. ಎಲ್ಲವೂ ಸರಿಯಾಗಿ ಮಿಕ್ಸ್ ಆಗಿ ಬೆಂಕಿ ಉರಿಯುತ್ತದೆ. ಇದರ ಪರಿಮಳದಿಂದ ಸೊಳ್ಳೆಗಳು ಓಡಿ ಹೋಗುತ್ತವೆ.

ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ. ಮನುಷ್ಯನ ದೇಹಕ್ಕೆ ಯಾವುದೇ ಅಪಾಯವಿಲ್ಲ. ಒಂದು ಲಿಂಬೆಹಣ್ಣನ್ನು ಎರಡು ಹೋಳುಗಳನ್ನು ಮಾಡಿ ಅದಕ್ಕೆ 8 ಲವಂಗಗಳನ್ನು ಸುಚ್ಚಿ ಇಡಬೇಕು. ಲಿಂಬೆಹಣ್ಣು ಮತ್ತು ಲವಂಗದ ಪರಿಮಳ ಸೊಳ್ಳೆಗಳಿಗೆ ಆಗುವುದಿಲ್ಲ. ಹಾಗೆಯೇ ಫಲಾವ್ ಎಲೆಗಳನ್ನು ಸುಡುವುದರಿಂದ ಬರುವ ಪರಿಮಳದಿಂದ ಸೊಳ್ಳೆಗಳು ಓಡಿ ಹೋಗುತ್ತವೆ. ಇದಲ್ಲದೆ ಈರುಳ್ಳಿ ಚೂರುಗಳನ್ನು ಮನೆಯ ಮೂಲೆ ಮೂಲೆಗಳಲ್ಲಿ ಇಡುವುದರಿಂದ ಕೂಡ ಸೊಳ್ಳೆಗಳು ಓಡಿ ಹೋಗುತ್ತವೆ.

Leave a Reply

Your email address will not be published. Required fields are marked *