ನಮ್ಮ ಈಗಿನ ಜೀವನ ಶೈಲಿ, ಆಹಾರ ವಿಹಾರ ಇವುಗಳಿಂದಾಗಿ ಕೂದಲು ಉದುರುವ ಸಮಸ್ಯೆ, ವಯಸ್ಸಾಗುವ ಮೊದಲೇ ಬಿಳಿ ಕೂದಲು ಉಂಟಾಗುವುದು ಈ ರೀತಿಯ ಸಮಸ್ಯೆಗಳು ಸ್ತ್ರೀ ಪುರುಷರೀರ್ವರಲ್ಲೂ ಕಂಡು ಬರುವಂತಹ ಸರ್ವೇ ಸಾಮಾನ್ಯ ಸಮಸ್ಯೆ. ಇದರಿಂದ ಹೊರಬರೋಕೆ ಸಾಕಷ್ಟು ಜನರು ಕೂದಲಿಗೆ ಬಣ್ಣ ಹಾಕುತ್ತಾರೆ ಆದರೆ ಇದು ಕೇವಲ ತಾತ್ಕಾಲಿಕ ಪರಿಹಾರವೇ ಹೊರತು ಶಾಶ್ವತ ಅಲ್ಲ. ಬಿಳಿ ಕೂದಲು ಸಮಸ್ಯೆಗೆ ಶಾಶ್ವತ ಪರಿಹಾರವನ್ನ ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಈ ಒಂದು ಹರ್ಬಲ್ ಆಯಿಲ್ ಅನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಈ ಒಂದು ಆಯಿಲ್ ಬಿಳಿ ಕೂದಲನ್ನು ಹೋಗಲಾಡಿಸುವುದು ಮಾತ್ರವಲ್ಲದೆ ದಟ್ಟವಾಗಿ ಉದ್ದವಾಗಿ ಕಪ್ಪಾಗಿ ಕೂದಲು ಬೆಳೆಯಲೂ ಸಹ ಸಹಾಯ ಮಾಡುತ್ತದೆ. ಈ ಒಂದು ಹೇರ್ ಆಯಿಲ್ ಕೇರಳ ಶೈಲಿಯಲ್ಲಿದ್ದು ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ಯಾವುದೇ ಅಡ್ಡ ಪರಿಣಾಮ ಇಲ್ಲದೆಯೇ ಈ ಆಯಿಲ್ ಬಳಕೆ ಮಾಡಬಹುದು. ಈ ಹೇರ್ ಆಯಿಲ್ ಮಾಡೋದು ಹೇಗೆ? ಏನೆಲ್ಲ ಸಾಮಗ್ರಿಗಳು ಬೇಕು ಅನ್ನೋದನ್ನ ನೋಡೋಣ.
ಈ ಹೇರ್ ಆಯಿಲ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಸ್ವಲ್ಪ ತುಳಸಿ ಎಲೆಗಳು, ದಾಸವಾಳದ ಹೂವು ಹಾಗೂ ದಾಸವಾಳದ ಎಲೆಗಳು, ಈರುಳ್ಳಿ ಮತ್ತು ಈರುಳ್ಳಿ ಬೀಜ, ಕರಿಬೇವಿನ ಸೊಪ್ಪು, ಹರಳೆಣ್ಣೆ, ಮೆಂತೆ ಕಾಳು 2 ಸ್ಪೂನ್, ಬೆಟ್ಟದ ನೆಲ್ಲಿಕಾಯಿ ಪೌಡರ್, ಸಾಸಿವೆ, ಒಂದೆರಡು ಕಾಳು ಮೆಣಸು ಮತ್ತೆ ಲವಂಗ ಹಾಗೂ ಅಲೋವೆರ, ಶುದ್ಧವಾದ ಕೊಬ್ಬರಿ ಎಣ್ಣೆ. ಈ ಎಲ್ಲಾ ವಸ್ತುಗಳೂ ಸಹ ನಮ್ಮ ಬಿಳಿ ಕೂದಲನ್ನು ಹೋಗಲಾಡಿಸಿ ಕೂದಲು ಕಪ್ಪಾಗಲು, ಕೂದಲು ಉದುರುದಂತೆ ಹಾಗೂ ಡ್ಯಾಂಡ್ರಾಫ್ ಆಗದಂತೆ ತಡೆದು ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತವೆ.
ಮೊದಲಿಗೆ ಕರಿಬೇವಿನ ಎಲೆ, ಈರುಳ್ಳಿ, ತುಳಸಿ ಎಲೆಗಳು, ದಾಸವಾಳದ ಹೂವು ಹಾಗೂ ದಾಸವಾಳದ ಎಲೆಗಳು ಇವೆಲ್ಲವನ್ನೂ ನೀರು ಸೇರಿಸದೇ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಈ ಪೇಸ್ಟ್ ಅನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಹರಳೆಣ್ಣೆ ಹಾಗೂ ಅರ್ಧ ಲೀಟರ್ ಕೊಬ್ಬರಿ ಎಣ್ಣೆ ಸೇರಿಸಿ ಮಿಕ್ಸ್ ಮಾಡಿಕೊಂಡು ಸ್ಟೋವ್ ಮೇಲೆ ಸಣ್ಣ ಉರಿಯಲ್ಲಿ ಬಿಸಿ ಆಗೋಕೆ ಇಡಬೇಕು. ನಂತರ ಮೆಂತೆ ಕಾಳು, ಬೆಟ್ಟದ ನೆಲ್ಲಿಕಾಯಿ ಪೌಡರ್, ಸಾಸಿವೆ, ಒಂದೆರಡು ಕಾಳು ಮೆಣಸು, ಲವಂಗ, ಈರುಳ್ಳಿ ಬೀಜ, ಕಟ್ ಮಾಡಿಕೊಂಡ ಎಲೋವೆರ ಎಲ್ಲಾ ಸಾಮಗ್ರಿಗಳನ್ನು ಒಂದೊಂದೇ ಆಗಿ ಸೇರಿಸುತ್ತಾ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಒಂದು ಹತ್ತು ನಿಮಿಷ ಸಣ್ಣ ಉರಿಯಲ್ಲಿ ಕುದಿಸಬೇಕು. ನಂತರ ಸ್ಟೋವ್ ಸ್ವಲ್ಪ ದೊಡ್ಡ ಉರಿಯಲ್ಲಿ ಇಟ್ಟು ನಾವು ಹಾಕಿರುವ ಪದಾರ್ಥಗಳ ಸತ್ವ ಬಿಟ್ಟುಕೊಂಡು ಕೊಬ್ಬರಿ ಎಣ್ಣೆಯ ಬಣ್ಣ ಬದಲಾಗುವವರೆಗೂ ಕುದಿಸಬೇಕು. ಎಲ್ಲಾ ಚೆನ್ನಾಗಿ ಕುದಿದ ನಂತರ ಸ್ಟೋವ್ ಆಫ್ ಮಾಡಿ ಎಣ್ಣೆ ಪೂರ್ತಿಯಾಗಿ ತಣ್ಣಗಾಗಲು ಬಿಟ್ಟು , ತಣ್ಣಗಾದ ಮೇಲೆ ಅದನ್ನು ಯಾವುದೇ ಒಂದು ಡಬ್ಬದಲ್ಲಿ ಸೋಸಿಕೊಂಡು ಶೇಖರಿಸಿ ಇಟ್ಟುಕೊಳ್ಳಬಹುದು. ಇದನ್ನು ಬಳಕೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆಯಿಂದ ಹಿಡಿದು ಬಿಳಿ ಕೂದಲ ಸಮಸ್ಯೆವರೆಗೂ ಪರಿಹಾರ ಕಂಡುಕೊಳ್ಳಬಹುದು.