ಪುರುಷರಲ್ಲಿ ಪಲವತ್ತತೆ ಹೆಚ್ಚಿಸಲು ಮನೆಯಲ್ಲೇ ಮಾಡಿ ಸರಳ ಮನೆಮದ್ದು

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಪುರುಷರಲ್ಲಿ ಸ್ಪರ್ಮ್ ಕೌಂಟ್ ಅಂದರೆ ವೀರ್ಯಾಣು ಹೆಚ್ಚಿಸಲು ಕೆಲವು ಮನೆಮದ್ದು ಇವೆ. ಮನೆಮದ್ದಿನೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕು. ಹಾಗಾದರೆ ಪುರುಷರ ಸಮಸ್ಯೆಯನ್ನು ನಿವಾರಿಸುವ ಮನೆಮದ್ದು ಯಾವುದು, ಹೇಗೆ ಸೇವಿಸಬೇಕು ಹಾಗೂ ಮನೆಮದ್ದಿನೊಂದಿಗೆ ಯಾವ ಆಹಾರ ಪದಾರ್ಥವನ್ನು ದಿನನಿತ್ಯ ಸೇವಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ಈರುಳ್ಳಿ, ಕಲ್ಲುಸಕ್ಕರೆಪುಡಿ, ತುಪ್ಪ. 20 ಗ್ರಾಂನಷ್ಟು ಈರುಳ್ಳಿ ಅಂದರೆ ದೊಡ್ಡ ಸೈಜ್ ಈರುಳ್ಳಿ ಆದರೆ ಒಂದು, ಮೀಡಿಯಂ ಸೈಜ್ ಈರುಳ್ಳಿ ಆದರೆ 2 ಬೇಕಾಗುತ್ತದೆ. ಈರುಳ್ಳಿಯನ್ನು ಮೊದಲು ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು ಅದಕ್ಕೆ 20 ಗ್ರಾಂ ಹಸುವಿನ ಶುದ್ಧ ತುಪ್ಪ ಸೇರಿಸಿ ಒಂದು ಪಾತ್ರೆಯಲ್ಲಿ ಚೆನ್ನಾಗಿ ಫ್ರೈ ಮಾಡಬೇಕು ಕಂದು ಬಣ್ಣ ಬಂದ ನಂತರ ಒಂದು ಪ್ಲೇಟ್ ಗೆ ಹಾಕಿ 20 ಗ್ರಾಮ್ ನಷ್ಟು ಕಲ್ಲುಸಕ್ಕರೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸೇವಿಸಬೇಕು. ಈ ಮನೆಮದ್ದನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಖಾಲಿಹೊಟ್ಟೆಯಲ್ಲಿ 45 ರಿಂದ 60 ದಿನಗಳವರೆಗೆ ಸೇವಿಸಬೇಕು. ಇನ್ನೊಂದು ಮನೆ ಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಲು, ಉದ್ದಿನಬೇಳೆ, ತುಪ್ಪ, ಕಲ್ಲುಸಕ್ಕರೆ ಪುಡಿ. ಮಾಡುವ ವಿಧಾನ ಹಸುವಿನ ಹಾಲು ಸಿಗದೇ ಇದ್ದರೆ ಪ್ಯಾಕೆಟ್ ಹಾಲನ್ನು ಬಳಸಬಹುದು.

ಪ್ಯಾಕೆಟ್ ಹಾಲು ತೆಗೆದುಕೊಳ್ಳುವುದಿದ್ದರೆ ಕೆನೆಭರಿತ ಹಾಲನ್ನು ತೆಗೆದುಕೊಳ್ಳಿ. ಅರ್ಧ ಕೆಜಿ ಉದ್ದಿನಬೇಳೆಗೆ 1 ಸ್ಪೂನ್ ತುಪ್ಪವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು ನಂತರ ನೈಸ್ ಆಗಿ ಪೌಡರ್ ಮಾಡಬೇಕು. ಪ್ರತಿದಿನ ರಾತ್ರಿ ಊಟವಾದ ಒಂದು ಗಂಟೆ ನಂತರ 200 ಎಂಎಲ್ ಬಿಸಿ ಹಾಲಿಗೆ 3 ಸ್ಪೂನ್ ಉದ್ದಿನಬೇಳೆ ಪೌಡರ್ 1 ಸ್ಪೂನ್ ಕಲ್ಲುಸಕ್ಕರೆಪುಡಿ ಅಥವಾ ಹಳೇ ಬೆಲ್ಲವನ್ನು ಸೇರಿಸಿ ಕುಡಿಯಬೇಕು. ಈ ಮನೆಮದ್ದನ್ನು ಸಹ 45ರಿಂದ 60 ದಿನಗಳವರೆಗೆ ತೆಗೆದುಕೊಳ್ಳಬೇಕು. ಈ ಎರಡು ಮನೆಮದ್ದುಗಳಲ್ಲಿ ಯಾವ ಮನೆಮದ್ದನ್ನಾದರೂ ಅನುಸರಿಸಬಹುದು. ಈ ಮನೆಮದ್ದಿನೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕು. ಬಾಳೆಹಣ್ಣು, ಮೆಂತೆ, ಮೆಂತೆಯನ್ನು ಪುಡಿ ಮಾಡಿಕೊಂಡು ನಿಮ್ಮ ದಿನನಿತ್ಯದ ಆಹಾರದಲ್ಲಿ ಬಳಸಬಹುದು ಅಥವಾ ಪ್ರತಿದಿನ 1 ಸ್ಪೂನ್ ಮೆಂತೆಯನ್ನು ಸೇವಿಸಬಹುದು.

ಬೇಯಿಸಿದ ಮೊಟ್ಟೆಯನ್ನು ಸೇವಿಸಬೇಕು, ವಾಲ್ ನಟ್ಸ್, ಪಾಲಕ್ ಸೊಪ್ಪು, ಅಂಜೂರದ ಹಣ್ಣು, ಒಣದ್ರಾಕ್ಷಿ, ಡಾರ್ಕ್ ಚಾಕಲೇಟ್, ಖರ್ಜೂರ, ಒಣ ಖರ್ಜೂರವಾದರೂ ಸೇವಿಸಬಹುದು ಅಥವಾ ಹಸಿ ಖರ್ಜೂರವನ್ನಾದರೂ ಸೇವಿಸಬಹುದು. ದಾಳಿಂಬೆ, ಬೆಳ್ಳುಳ್ಳಿಯನ್ನು ಹೆಚ್ಚು ಸೇವಿಸಬೇಕು. ಜಿಂಕ್ ಪ್ರಮಾಣ ಹೆಚ್ಚಿರುವ ಆಹಾರವಾದ ಬಾರ್ಲಿ, ರೆಡ್ ಮೀಟ್, ಬೀನ್ಸ್ ಸೇವಿಸಬೇಕು. ಸಿಟ್ರಸ್ ಅಂಶವಿರುವ ಕಿತ್ತಳೆ ಹಣ್ಣು, ಮೂಸುಂಬೆ ಹಣ್ಣು ನಿಂಬೆ ರಸವನ್ನು ಸೇವಿಸಬೇಕು. ನಿಮ್ಮ ಆಹಾರದಲ್ಲಿ ಗೋಧಿಯನ್ನು ಬಳಸಬೇಕು. ಮೀನನ್ನು ಆಹಾರದಲ್ಲಿ ಸೇವಿಸಬೇಕು.

ವಿಟಮಿನ್-ಡಿ ಹೆಚ್ಚಾಗಿರುವ ಹಾಲಿನ ಉತ್ಪನ್ನಗಳು ಹಾಗೂ ವಿಟಮಿನ್ ಇ ಹೆಚ್ಚಾಗಿರುವ ಆಹಾರವನ್ನು ಸೇವಿಸಬೇಕು. ಪ್ರತಿದಿನ ರಾತ್ರಿ ಒಂದು ಗ್ಲಾಸ್ ಹಾಲಿಗೆ 1 ಸ್ಪೂನ್ ಅಶ್ವಗಂಧ ಪೌಡರ್ ಸೇರಿಸಿ ಕುಡಿಯಬೇಕು. ಮೇಲೆ ಹೇಳಿದ ಮನೆಮದ್ದನ್ನು ಅನುಸರಿಸಿ ಎರಡು ತಿಂಗಳ ನಂತರ ಹಾಲಿಗೆ ಅಶ್ವಗಂಧ ಪೌಡರ್ ಅನ್ನು ಸೇರಿಸಿ ಕುಡಿಯಬಹುದು. ಈ ಮನೆಮದ್ದನ್ನು ಸೇವಿಸುವ ಸಮಯದಲ್ಲಿ ಗಂಡ ಹೆಂಡತಿ ಸೇರಬಾರದು. ಮನೆಮದ್ದಿನೊಂದಿಗೆ ಆಹಾರ ಪದಾರ್ಥಗಳನ್ನು ಸೇವಿಸುತ್ತಾ ಬಂದಲ್ಲಿ ಪುರುಷರಲ್ಲಿ ಸ್ಪರ್ಮ್ ಕೌಂಟ್ ಹೆಚ್ಚಾಗುವುದಲ್ಲದೆ ಯಾವುದೇ ರೀತಿಯ ಲೈಂಗಿಕ ಸಮಸ್ಯೆ ಬರುವುದಿಲ್ಲ. ಈ ಆಹಾರ ಪದಾರ್ಥಗಳ ಸೇವನೆಯಿಂದ ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ಇವುಗಳಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *