ಕೆಲವೊಮ್ಮೆ ನಾವುಗಳು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೇ ಹೊಟ್ಟೆ ಕೆಟ್ಟಿರುವ ಅನುಭವ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಆಹಾರ ಜೀರ್ಣವಾಗುವುದು ಕಷ್ಟವಾಗಿರುತ್ತದೆ. ಮುಖ್ಯವಾಗಿ ನಾವು ತೆಗೆದುಕೊಂಡಂತಹ ಆಹಾರ ಸ್ವಲ್ಪ ಹೊತ್ತಿಗೆ ಹೊಟ್ಟೆ ಹಸಿವು ಆದಂತೆ ಆಗುವುದು, ಊಟ ಮಾಡಿದ ತಕ್ಷಣ ಹೊಟ್ಟೆ ನೋವಿನ ಅನುಭವ ಆಗುವುದು, ಗಂಟಲಿನಲ್ಲಿ ಉರಿ, ಹುಳಿತೇಗು ಇವೆಲ್ಲವೂ ಕೂಡ ಗ್ಯಾಸ್ ಅಸಿಡಿಟಿ ಮಲಬದ್ಧತೆಯಿಂದ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಬಹಳಷ್ಟು ಜನರು ಇದನ್ನು ಚಿಕ್ಕ ಸಮಸ್ಯೆ ಎಂದು ನಿರ್ಲಕ್ಷ್ಯವಹಿಸುತ್ತಾರೆ. ಆದರೆ ಇದರಿಂದ ಅಲ್ಸರ್ ಜೀವನ ಸಂಬಂಧಿತ ಕಾಯಿಲೆಗಳಿಗೆ ನಾವಾಗಿ ನಾವೇ ದಾರಿ ಮಾಡಿಕೊಟ್ಟ ಹಾಗೆ ಆಗುತ್ತದೆ. ಹಾಗಾಗಿ ನಾವು ನಮಗೆ ಗ್ಯಾಸ್ ಸಮಸ್ಯೆ ಬಂದಿದೆ ಎಂದು ತಿಳಿದ ತಕ್ಷಣ ಅದನ್ನು ಹೋಗಲಾಡಿಸುವ ಸಲುವಾಗಿ ಯಾವುದಾದರೂ ಒಂದು ಮಾರ್ಗವನ್ನು ಹುಡುಕಿಕೊಳ್ಳಲೇಬೇಕು. ಮುಖ್ಯವಾಗಿ ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಲ್ಲಿ ಇದು ನಮ್ಮ ಶರೀರವು ಯಾವುದೇ ಉಪಯೋಗವಿಲ್ಲ ಹಾಗೂ ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಇಂಥ ಸಮಸ್ಯೆಗಳಿಗೆ ನಾವು ಮಾತ್ರೆಗಳನ್ನು ತೆಗೆದುಕೊಂಡರೂ ಸಹ ಅದು ಆ ಕ್ಷಣಕ್ಕೆ ಮಾತ್ರ ಕಡಿಮೆಯಾದಂತೆ ಅನಿಸಿದರೂ ಸಹ ಶಾಶ್ವತವಾದ ಪರಿಹಾರವನ್ನು ನೀಡುವುದಿಲ್ಲ. ಆದರೆ ನಾವಿಲ್ಲಿ ತಿಳಿಸುವಂತಹ ಸುಲಭವಾದ ಮನೆಮದ್ದನ್ನು ಬಳಸುವುದರಿಂದ ಗ್ಯಾಸ್ಟ್ರಬಲ್, ಆಸಿಡಿಟಿ ಅಂತಹ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಬಹುದು.

ಈ ಮನೆಮದ್ದನ್ನು ಮಾಡುವುದಕ್ಕಾಗಿ ಮೊದಲು ಸ್ಟೋರ್ ಮೇಲೆ ಒಂದು ಪ್ಯಾನ್ ಅನ್ನು ಕಾಯಲು ಇಟ್ಟು ಅದಕ್ಕೆ ಒಂದು ಟೀ ಸ್ಪೂನ್ ನಷ್ಟು ಜೀರಿಗೆಯನ್ನು ಹಾಕಿ, 1 ಟೀ ಸ್ಪೂನ್ ನಷ್ಟು ಅಜವಾನ ಅಥವಾ ಓಂಕಾಳು ಹಾಕಿ ಸಣ್ಣ ಉರಿಯಲ್ಲಿ ಇವೆರಡನ್ನು ಸ್ವಲ್ಪ ಬಿಸಿಯಾಗುವವರೆಗೆ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಒಂದು ಟೀಸ್ಪೂನ್ ಸೋಂಪನ್ನು ಸೇರಿಸಬೇಕು. ಮೂರನ್ನೂ ಸೇರಿಸಿ ಹುರಿದುಕೊಂಡು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ನಂತರ ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. (ಕಲ್ಲುಪ್ಪು ಇದ್ದರೆ ಅದನ್ನು ಸಹ ಸೇರಿಸಿ ಪುಡಿ ಮಾಡಿಕೊಂಡು ಗಾಳಿಯಾಡದ ಡಬ್ಬದಲ್ಲಿ ಹಾಕಿ ಶೇಖರಿಸಿ ಇಟ್ಟುಕೊಳ್ಳಬಹುದು). ಈ ಪೌಡರನ್ನು ನಿಮಗೆ ಯಾವ ಸಂದರ್ಭದಲ್ಲಿ ಗ್ಯಾಸ್ ಹೆಸರಿಟ್ಟು ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ ಅಂತಹ ಸಂದರ್ಭದಲ್ಲಿ ಅರ್ಧ ಟೀ ಸ್ಪೂನ್ ಅಷ್ಟೇ ಪೌಡರನ್ನು ತಿನ್ನಬೇಕು ನಂತರ ಒಂದು ಲೋಟದಷ್ಟು ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಒಂದು ವೇಳೆ ಔಷಧಿಯನ್ನು ಚಿಕ್ಕಮಕ್ಕಳಿಗೆ ಕೊಡುವುದಾದರೆ ಕಾಲು ಟೀಸ್ಪೂನ್ ಅಷ್ಟು ಕೊಡಬೇಕು ಹಾಗೂ ನಂತರ ಒಂದಷ್ಟು ಉಗುರು ಬೆಚ್ಚಗಿನ ನೀರನ್ನು ಸಹ ಕುಡಿಸಬೇಕು. ಇದನ್ನು ಯಾವ ಸಮಯದಲ್ಲಿ ಬೇಕಾದರೂ ತೆಗೆದುಕೊಳ್ಳಬಹುದು. ಈ ಕುಡಿಯಲು ತೆಗೆದುಕೊಳ್ಳುವುದರಿಂದ ತಕ್ಷಣವೇ ಆರಂಭಿಸಿದ ಹಾಗೂ ಜೀರ್ಣಶಕ್ತಿಯನ್ನು ಸಹ ಸರಿ ಮಾಡುತ್ತದೆ. ಈ ಪುಡಿಯನ್ನು ರಾತ್ರಿ ಸಮಯದಲ್ಲಿ ತಿಂದು ನೀರು ಕುಡಿಯುವುದರಿಂದ ನಮ್ಮ ತೂಕವನ್ನು ಇಳಿಸಲು ಸಹ ಇದು ನೆರವಾಗುತ್ತದೆ ಹೊಟ್ಟೆಯ ಸುತ್ತಲೂ ಇರುವಂತಹ ಬೊಜ್ಜನ್ನು ಕರಗಿಸಲು ಸಹಾಯವಾಗುತ್ತದೆ.

ಜೀರಿಗೆ ಸೋಂಪು ಹಾಗೂ ಓಂಕಾಳು ಈ ಮೂರರಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವಂತಹ ಮೇಟಬೊಲೀಸಂ ಅನ್ನು ಹೆಚ್ಚಿಸುವ ಅದ್ಭುತವಾದ ಔಷಧೀಯ ಗುಣಗಳಿವೆ. ಇದೆಲ್ಲವೂ ನಮ್ಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ನಾವು ತೆಗೆದುಕೊಂಡ ಆಹಾರ ಸರಿಯಾಗಿ ಜೀರ್ಣವಾಗುವಂತೆ ಮಾಡಿ ನಮ್ಮ ಶರೀರದಲ್ಲಿರುವ ಅಂತಹ ವ್ಯರ್ಥ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಸಹ ಹೆಚ್ಚಿಸುತ್ತದೆ. ಮುಖ್ಯಮಂತ್ರಿ ಮೂರು ಪದಾರ್ಥಗಳು ಗ್ಯಾಸ್ಟ್ರಿಕ್ ಅಸಿಡಿಟಿ ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರಮಾಡಲು ಸಹಾಯ ಮಾಡುತ್ತದೆ.

By

Leave a Reply

Your email address will not be published. Required fields are marked *