ಮುಖದ ಮೇಲೆ ಯಾವುದೇ ರೀತಿಯ ಕಲೆಗಳು ಇರದಿದ್ದರೆ ಮುಖ ಕಾಂತಿಯುತವಾಗಿ ಇರುತ್ತದೆ. ಆದರೆ ಕೆಲವರಿಗೆ ತುಂಬಾ ಕಲೆಗಳು ಮುಖದ ಮೇಲೆ ಇರುತ್ತವೆ. ಇದು ಅಸಹ್ಯವಾಗಿ ಕಾಣುತ್ತದೆ. ಮುಖದ ಅಂದವನ್ನೇ ಕೆಡಿಸಿಬಿಡುತ್ತದೆ. ಎಷ್ಟೋ ಔಷಧಿಗಳನ್ನು ಮಾಡಿದರೂ ಪರಿಣಾಮ ಉಂಟಾಗುವುದಿಲ್ಲ. ಮುಖದ ಕಲೆಯನ್ನು ಹೋಗಲಾಡಿಸಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ನಾವು ಇಲ್ಲಿ ಸುಲಭದ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊಡವೆಗಳು ಉಂಟಾಗಿ ಅವುಗಳು ನಂತರ ಕಪ್ಪು ಕಲೆಗಳಾಗುತ್ತವೆ. ಹಾಗೆಯೇ ಅತಿ ಹೆಚ್ಚು ಬಿಸಿಲಿನಲ್ಲಿ ಕೆಲಸ ಮಾಡುವುದರಿಂದ ಕೂಡ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳಿಗೆ ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದ ಮುಕ್ತಿ ಪಡೆಯಲು ಹೆಚ್ಚಾಗಿ ನೀರನ್ನು ಕುಡಿಯಬೇಕು. ಒಳ್ಳೊಳ್ಳೆಯ ಕ್ರೀಮ್ ಗಳನ್ನು ಹಚ್ಚಬೇಕು. ಹಾಗೆಯೇ ಮನೆಯಲ್ಲಿ ಇರುವ ಸುಲಭದ ಪದಾರ್ಥಗಳನ್ನು ಬಳಸಿ ಮುಖದ ಕಲೆಗಳನ್ನು ಹೋಗಲಾಡಿಸಿಕೊಳ್ಳಬಹುದು. ಇದಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇಲ್ಲ.
ಮೊದಲು ಆಲೂಗಡ್ಡೆಯನ್ನು ತೆಗೆದುಕೊಂಡು ಸಿಪ್ಪೆ ತೆಗೆದು ಅದನ್ನು ತುರಿದು ರಸವನ್ನು ತೆಗೆದುಕೊಳ್ಳಬೇಕು. ಅದಕ್ಕೆ ಒಂದು ಚಮಚ ಹಸಿಹಾಲನ್ನು ಹಾಕಬೇಕು. ಎರಡನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಮುಖವನ್ನು ಚೆನ್ನಾಗಿ ತೊಳೆದುಕೊಂಡು ಒಂದು ಹತ್ತಿಯ ಚೂರನ್ನು ತೆಗೆದುಕೊಂಡು ಅದ್ದಿ ಮುಖಕ್ಕೆ ಹಚ್ಚಬೇಕು. ಇದರಿಂದ ಕಲೆಗಳು ಕಡಿಮೆ ಆಗುತ್ತವೆ. ಹಾಗೆಯೇ ಕಪ್ಪುವರ್ತುಲಗಳು ಕಡಿಮೆ ಆಗುತ್ತವೆ. ಹಸಿ ಹಾಲು ಮುಖಕ್ಕೆ ಬಹಳ ಒಳ್ಳೆಯದು. ಐದು ನಿಮಿಷಗಳ ನಂತರ ಮುಖವನ್ನು ತೊಳೆಯಬೇಕು. ನಂತರ ಒಂದು ಚಮಚ ಅಕ್ಕಿಹಿಟ್ಟು, ಒಂದು ಚಮಚ ಆಲೂಗಡ್ಡೆ ರಸ, ಅರ್ಧ ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಇದನ್ನು ಮುಖಕ್ಕೆ ಹಚ್ಚಬೇಕು. ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು. ನಂತರ ತುರಿದ ಆಲೂಗಡ್ಡೆಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಮನೆಯಲ್ಲಿ ತಯಾರಿಸಿದ ಅರಿಶಿಣ ಪುಡಿಯನ್ನು ಒಂದು ಚಿಟಿಕೆ ಹಾಕಬೇಕು. ಅದಕ್ಕೆ ಒಂದು ಚಮಚ ಅಲೋವೆರಾ ಜೆಲ್ ನ್ನು ಹಾಕಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಬೇಕು. ಕೊನೆಯದಾಗಿ ವಿಟಮಿನ್ ಸಿ ಆದ ಸೇರಮ್ ನ್ನು ನಾಲ್ಕು ಹನಿ ಹಚ್ಚಬೇಕು. ಇದನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಮೂರು ಹಂತಗಳನ್ನು ದಿನನಿತ್ಯ ಮಾಡಿದರೆ ಪ್ರಯೋಜನ ಪಡೆದುಕೊಳ್ಳಬಹುದು.