ಹೆಣ್ಣು ಮಕ್ಕಳಿರಲಿ, ಗಂಡುಮಕ್ಕಳಿರಲಿ ಹರೆಯ ವಯಸ್ಸಿಗೆ ಬಂದ ತಕ್ಷಣ ಮುಖದ ಮೇಲೆ ಮೊಡವೆಗಳಾಗುವುದು, ಕಲೆ ಹಾಗೆ ಉಳಿಯುವುದು ಸಾಮಾನ್ಯವಾಗಿದೆ. ಮುಖದ ಮೇಲಿರುವ ಕಲೆಗಳನ್ನು, ಮೊಡವೆಗಳನ್ನು ಹೋಗಿಸಲು ಕೆಮಿಕಲ್ ಕ್ರೀಮ್ ಗಳನ್ನು ಬಳಸಿ ಇನ್ನಷ್ಟು ಮುಖವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಮುಖದ ಮೇಲಾಗುವ ಮೊಡವೆ ಮತ್ತು ಕಲೆಗಳ ನಿವಾರಣೆಗೆ ಇರುವ ಮನೆಮದ್ದಿನ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಹೆಣ್ಣುಮಕ್ಕಳ ಕೈ ಮುಖದ ಮೇಲೆ ಇರುತ್ತದೆ, ಮುಖದ ಮೇಲಾಗುವ ಕಲೆ, ಮೊಡವೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಅನೇಕರು ಬೇರೆ ಬೇರೆ ಕ್ರೀಮ್ ಗಳನ್ನು ಬಳಸಿ ಮುಖದ ಅಂದವನ್ನು ಹಾಳು ಮಾಡಿಕೊಳ್ಳುತ್ತಾರೆ ಅಲ್ಲದೆ ಹಣ ಖರ್ಚು ಮಾಡುತ್ತಾರೆ. ಮುಖದ ಮೇಲೆ ಮೊಡವೆ, ಕಲೆ ಹೆಚ್ಚಾಗಲು ಮಲಬದ್ಧತೆ, ರಕ್ತದ ಅಶುದ್ಧತೆ, ಅಜೀರ್ಣ, ಪಿತ್ತ ಕಾರಣವಾಗಿದೆ.

ಈ ಸಮಸ್ಯೆಗೆ ಒಂದು ಉತ್ತಮ ಮನೆ ಮದ್ದಿದೆ ಬೆಳಗ್ಗೆ 30 ml ಗೋಮೂತ್ರ ಹಿಡಿದು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ದೇಹದ ಕಲ್ಮಶ ನಿವಾರಣೆಯಾಗುತ್ತದೆ. ಕೇವಲ ಮೂರು ದಿನಗಳಲ್ಲಿ ಕರುಳು ಸ್ವಚ್ಚವಾಗುತ್ತದೆ. ಪ್ರತಿನಿತ್ಯ ಆಹಾರದೊಂದಿಗೆ ಸೌತೆಕಾಯಿ, ಮೂಲಂಗಿ, ಕ್ಯಾರೆಟ್ ಸೇವಿಸಬೇಕು ಇದರಿಂದ ದೇಹಕ್ಕೆ ಪೋಷಕಾಂಶ ದೊರೆತು ರಕ್ತ ಶುದ್ಧಿಯಾಗುತ್ತದೆ.

ಪುದೀನಾ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ. 20 ಪುದೀನಾ ಎಲೆಗಳಿಗೆ ಸ್ವಲ್ಪ ನೀರು ಹಾಕಿ ಮಿಕ್ಸಿಗೆ ಹಾಕಿ ರುಬ್ಬಿ ಅದಕ್ಕೆ ಸ್ವಲ್ಪ ಸೈಂಧವಲವಣ, ಬೇಕಾದರೆ ನಿಂಬೆ ರಸ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಇದರಿಂದ ಮುಖದ ಮೇಲೆ ಮೊಡವೆ ಕಡಿಮೆ ಆಗುತ್ತದೆ.

ಎಣ್ಣೆ ಚರ್ಮ ಇರುವವರು ನಿಂಬೆ ಹಣ್ಣನ್ನು ಮುಖದ ಮೇಲೆ ಉಜ್ಜಿ ಅರ್ಧ ಗಂಟೆಯ ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು ಇದರಿಂದ ಮೊಡವೆಗಳು ಕಡಿಮೆ ಆಗುತ್ತದೆ ಕಲೆಗಳು ಸಹ ನಿವಾರಣೆಯಾಗುತ್ತದೆ. ಒಣ ಚರ್ಮ ಹೊಂದಿರುವವರು ಲೋಳೆಸರದಿಂದ ಚೆನ್ನಾಗಿ ಉಜ್ಜಬೇಕು ಅರ್ಧ ಗಂಟೆಯ ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು ಇದರಿಂದ ಮುಖ ಕ್ಲೀನ್ ಆಗುತ್ತದೆ.

ಒಣ ಚರ್ಮ ಹೊಂದಿರುವವರು ಮುಲ್ತಾನಿ ಮಿಟ್ಟಿಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಮುಖಕ್ಕೆ ಹಚ್ಚಿಕೊಂಡರೆ ಬಹಳ ಒಳ್ಳೆಯದು. ಆಯಿಲ್ ಸ್ಕಿನ್ ಹೊಂದಿರುವವರು ಮುಲ್ತಾನಿ ಮಿಟ್ಟಿಗೆ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ಮೊಡವೆಗಳು, ಕಪ್ಪು ಕಲೆಗಳು, ಚರ್ಮ ಸುಕ್ಕುಗಟ್ಟಿರುವುದು ನಿವಾರಣೆಯಾಗುತ್ತದೆ ಮುಖ ಕಾಂತಿಯುತವಾಗಿ ಹೊಳೆಯುತ್ತದೆ.

ಮುಖ ತೊಳೆಯುವಾಗ ಎಳನೀರನ್ನು ಬಳಸಿ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಕೆಮಿಕಲ್ ಯುಕ್ತ ಸೋಪ್, ಫೇಸ್ ವಾಷ್ ಕ್ರೀಮ್ ಗಳನ್ನು ಬಳಸುವುದನ್ನು ಬಿಡಬೇಕು. ಚಿಕ್ಕ ಮಕ್ಕಳಿಗೆ ಕೆಮಿಕಲ್ ಸೋಪುಗಳನ್ನು ಬಳಸಲೇಬಾರದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಸೂಕ್ತ ಮನೆಮದ್ದನ್ನು ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!