ಕೆಲವೊಂದಿಷ್ಟು ಜನರಿಗೆ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಾಕಷ್ಟು ಔಷಧಿಗಳನ್ನು ಮಾಡಿರುತ್ತಾರೆ ಸಾಕಷ್ಟು ಕ್ರೀಮ್ ಗಳ ಪ್ರಯೋಗ ಕೂಡಾ ಮಾಡಿರುತ್ತಾರೆ. ಆದರೆ ಅದು ಎಲ್ಲರಿಗೂ ಪ್ರಯೋಜನಕಾರಿ ಆಗುವುದಿಲ್ಲ. ಎಲ್ಲರ ಚರ್ಮಕ್ಕೂ ಎಲ್ಲಾ ಕ್ರೀಮ್ ಗಳೂ ಹೊಂದುವುದಿಲ್ಲ. ಹೀಗಿದ್ದಾಗ ಇದರಿಂದ ಬೇರೆ ಪರಿಣಾಮವನ್ನು ಸಹ ಎದುರಿಸಬೇಕಾಗುತ್ತದೆ. ಹಾಗಾಗಿ ಇವುಗಳ ಬದಲು ಮುಖದ ಸೌಂದರ್ಯವನ್ನು ಹೆಚ್ಚಿಸುವಂತಹ ಕೆಲವು ನೈಸರ್ಗಿಕ ತೈಲಗಳು ಇವೆ ಅವುಗಳನ್ನು ಬಳಸಿಕೊಂಡು ಸಹ ಮುಖದಲ್ಲಿ ನೆರಿಗೆ ಇಲ್ಲದಂತೆ ನೋಡಿಕೊಳ್ಳಬಹುದು. ಅವು ಯಾವವು ಅನ್ನುವುದನ್ನು ನೋಡೋಣ.
ಈ ಕೆಲವು ತೈಲಗಳನ್ನು ಬಳಸಿಕೊಂಡು ಮುಖದ ಮೇಲೆ ವಯಸ್ಸಾದಂತಹ ಲಕ್ಷಣಗಳು ಕಾಣದಂತೆಯೇ ಮಾಡಿಕೊಳ್ಳಬಹುದು. ಸಾಸಿವೆ ಎಣ್ಣೆ , ಆಲಿವ್ ಆಯಿಲ್ ಮುಂತಾದವು ಚರ್ಮಕ್ಕೆ ಪರಿಣಾಮಕಾರಿಯಾಗಿ ಉತ್ತಮ ಪೋಷಣೆಯನ್ನು ನೀಡುತ್ತದೆ. ಈ ಎಣ್ಣೆಗಳನ್ನು ಚರ್ಮಕ್ಕೆ ಹಚ್ಚುವುದರಿಂದ ಇವು ಚರ್ಮದ ಸ್ಥಿತಿ ಸ್ಥಾಪಕತ್ವ ಗುಣವನ್ನು ಕಾಪಾಡಿ ಮುಖದ ಮೇಲೆ ನೆರಿಗೆ ಆಗುವುದನ್ನು ತಡೆಯುತ್ತವೆ.
ಹಾಗೆಯೇ ಇವುಗಳಂತೆ ದ್ರಾಕ್ಷಿ ಬೀಜದ ಎಣ್ಣೆ :- ದ್ರಾಕ್ಷಿ ಬೀಜದಿಂದ ತಯಾರಿಸಿದ ಎಣ್ಣೆಯು ತುಂಬಾ ಹಗುರವಾಗಿ ಇರುತ್ತದೆ ಹಾಗೂ ಚರ್ಮವು ಈ ಎಣ್ಣೆಯನ್ನು ಬೇಗನೆ ಹೀರಿಕೊಳ್ಳುತ್ತದೆ. ಸಾಮಾನ್ಯವಾಗಿ ದ್ರಾಕ್ಷಿ ಎಣ್ಣೆಯನ್ನು ಬಳಕೆ ಮಾಡುವಾಗ ಸ್ವಲ್ಪ ಕಡಿಮೆಯೇ ಬಳಸಬೇಕು. ದ್ರಾಕ್ಷಿ ಬೀಜದ ಎಣ್ಣೆಯನ್ನು ತಲೆ ಕೂದಲಿಂದ ಹಿಡಿದು ಕಾಲಿಗೂ ಸಹ ಹಚ್ಚಬಹುದು. ವಯಸ್ಸಾಗುವ ಸಮಯದಲ್ಲಿ ಚರ್ಮವು ತುಂಬಾ ಒಣಗುತ್ತದೆ. ಇಂತಹ ಸಂದರ್ಭದಲ್ಲಿ ಎಣ್ಣೆಯು ತುಂಬಾ ಸಹಾಯಕಾರಿ. ಹಾಗಾಗಿ ಪ್ರತೀ ನಿತ್ಯ ಈ ದ್ರಾಕ್ಷಿ ಎಣ್ಣೆಯನ್ನು ಬಳಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಮರುಲಾ ತೈಲ :- ಇದು ಆಫ್ರಿಕಾದಲ್ಲಿನ ಜನರ ಸೌಂದರ್ಯದ ಗುಟ್ಟಾಗಿದೆ. ಇದು ಸಂಸ್ಕರಿಸದ ಹಾಗೂ ಸಾವಯವವಾದ ತೈಲ ಆಗಿದೆ. ಈ ತೈಲವು ವಯಸ್ಸಾದ ಹಾಗೆ ಲಕ್ಷಣಗಳನ್ನು ತೋರಿಸುವ ಚರ್ಮಕ್ಕೆ ತುಂಬಾ ಒಳ್ಳೆಯದು. ಈ ಎಣ್ಣೆಯಲ್ಲಿ ಒಮೆಗ ಅಂಶವು ಹೆಚ್ಚಿನ ಪ್ರಮಾನದಲ್ಲಿ ಇರುವ ಕಾರಣ ಸೂಕ್ಷ್ಮ ಚರ್ಮವನ್ನು ಹೊಂದಿರುವವರಿಗೂ ಸಹ ಇದು ತುಂಬಾ ಪ್ರಯೋಜನಕಾರಿ ಹಾಗೂ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಸಹ ಉಂಟು ಮಾಡುವುದಿಲ್ಲ. ಮರುಲಾ ತೈಲವು ಒಳ್ಳೆ ಸುಗಂಧವನ್ನು ಹೊಂದಿರುತ್ತದೆ. ನೆರಿಗೆ ಇರುವ ಚರ್ಮದ ಮೇಲೆ ಇದನ್ನು ಹಚ್ಚಿ ಮಸಾಜ್ ಮಾಡುವುದರಿಂದ ನೆರಿಗೆಗಳು ಕಡಿಮೆ ಆಗುತ್ತವೆ.
ಅವಕಾಡೊ ತೈಲ :– ಈ ಅವಕಾಡೊ ತೈಲವು ಮುಖದ ಮೇಲೆ ಇರುವಂತಹ ನೆರಿಗೆಗಳನ್ನು ಹೋಗಳಾಡಿಸುವುದರ ಜೊತೆಗೆ ಕಲೆಗಳನ್ನು ನಿವಾರಣೆ ಮಾಡಲೂ ಸಹ ಸಹಾಯಕಾರಿ ಆಗುತ್ತದೆ . ಈ ತೈಲವನ್ನು ದೇಹ ಹಾಗೂ ಮುಖಕ್ಕೆ ಮಾಯಿಶ್ಚರೈಸರ್ ಆಗಿ ಬಳಸಬಹುದು ಹಾಗೂ ಕೂದಲಿನ ಆರೈಕೆಗೂ ಸಹ ಬಳಸಬಹುದು.. ಸ್ವಚ್ಛ ಕೈಗಳಿಂದ ಅಥವಾ ಸ್ವಚ್ಛವಾದ ಹತ್ತಿಯ ಉಂಡೆಗಳಿಂದ ಈ ತೈಲವನ್ನು ಹಚ್ಚಿಕೊಳ್ಳಬೇಕು. ಅವಕಾಡೊ ತೈಲವನ್ನು ಹಚ್ಚಿದ ನಂತರ ಸ್ನಾನ ಮಾಡಲೇಬೇಕು ಅಂದೇನೂ ಇಲ್ಲ… ಇದನ್ನು ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ನಂತರ ಟಿಶ್ಯು ಪೇಪರ್ ಅಥವಾ ಬಟ್ಟೆಯಿಂದ ಒರೆಸಿಕೊಳ್ಳಬಹುದು.
ಬಾದಾಮಿ ಎಣ್ಣೆ :- ಬಾದಾಮಿಯಲ್ಲಿ ವಿಟಮಿನ್ ಈ ಹೇರಳವಾಗಿ ಇರುವುದರಿಂದ ಬಾದಾಮಿ ಎಣ್ಣೆಯು ಮುಖದ ಮೇಲೆ ಇರುವಂತಹ ನೆರಿಗೆಯನ್ನು ಹೋಗಲಾಡಿಸಲು ತುಂಬಾ ಸಹಾಯ ಮಾಡುತ್ತದೆ. ಬಾದಾಮಿ ಎಣ್ಣೆಯಲ್ಲಿ ಚರ್ಮಕ್ಕೆ ಬೇಕಾಗುವಂತಹ , ಚರ್ಮದ ಜೀವಕೋಶಗಳನ್ನು ಬೆಳೆಸಲು ಅಗತ್ಯ ಇರುವಂತಹ ಪ್ರೊಟೀನ್ ಗಳು ಹೆಚ್ಚಾಗಿ ಇರುತ್ತವೆ. ಬಾದಾಮಿ ಎಣ್ಣೆಯನ್ನು ನೆರವಾಗಿಯೂ ಚರ್ಮಕ್ಕೆ ಹಚ್ಚಬಹುದು ಅಥವಾ ಯಾವುದೇ ಮಾಯಿಶ್ಚರೈಸರ್ ಜೊತೆ ಸೇರಿಸಿಯಾದರೂ ಚರ್ಮಕ್ಕೆ ಹಚ್ಚಬಹುದು. ಬಾದಾಮಿ ಎಣ್ಣೆಯು ಚರ್ಮಕ್ಕೆ ಮಾಯಿಶ್ಚರೈಸರ್ ನೀಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಬಾದಾಮಿ ಎಣ್ಣೆಯು ತುಂಬಾ ಪರಿಣಾಮವನ್ನು ಬೀರುವಂತೆಯೇ ಮಾಡಲು ಕ್ಯಾಮೊಮೈಲ್ ಚಹಾದ ಜೊತೆ ಸೇರಿಸಿ ಮಿಕ್ಸ್ ಮಾಡಿ ಫ್ರಿಡ್ಜ್ನಲ್ಲಿ ಇಟ್ಟು ಬಳಸಬಹುದು. ಈ ಎರಡೂ ಮಿಶ್ರಣಗಳು ಸರಿಯಾಗಿ ಕೆಲಸ ಮಾಡಲು ಪ್ರತೀ ನಿತ್ಯವೂ ಉದನ್ನು ಬಳಸಬೇಕು.